ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಂಲಗ್ನತ್ವದ ವಿದ್ಯಾಸಂಸ್ಥೆಗಳಿಗೆ ಸಿದ್ಧಾಪುರ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲವರ್ಗ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ – ಶಾನ್ವಿ 8ನೇ ತರಗತಿ, ದ್ವಿತೀಯ ಸ್ಥಾನ – ಲಾವಣ್ಯ 8ನೇ ತರಗತಿ, ಚತುರ್ಥ ಸ್ಥಾನ -.ಅಕ್ಷರಾ ಭಟ್, 8ನೇ ತರಗತಿ, ಕಿಶೋರವರ್ಗ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ – ಪೂರ್ವಿ.ಎಂ. ರಾವ್, 9ನೇ ತರಗತಿ ತೃತೀಯ ಸ್ಥಾನ – ಸೌಭಾಗ್ಯ , 10ನೇ ತರಗತಿ ಹಾಗೂ ಕಿಶೋರವರ್ಗ ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನ – ಸಾತ್ವಿಕ್ 10ನೇ ತರಗತಿ ಪಡೆದಿರುತ್ತಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿಯವರನ್ನು ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.




