ಹೆಬ್ರಿ: ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಸಂಸ್ಕೃತ ದಿನಾಚರಣೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅದಮಾರು ಪೂರ್ಣಪ್ರಜ್ಞ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ಜಿ.ಪಿ. ಪ್ರಭಾಕರ ಉಪನ್ಯಾಸ ನೀಡಿ, ಸಂಸ್ಕೃತವು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯಾಗಿದೆ. ಎಲ್ಲಾ ಜನಾಂಗದವರು ಓದಿದ ಭಾಷೆಯಾಗಿತ್ತು. ನೂರಾರು ಆಕ್ರಮಣವಾದರೂ ನಶಿಸದ, ಋಷಿಮುನಿಗಳು ವೈಜ್ಞಾನಿಕವಾಗಿ ಕಂಡುಕೊಂಡ ಸತ್ಯ ಘಟನೆಗಳ ಸಾರಾಂಶವಾಗಿದೆ. ಭಾರತದ ರಾಷ್ಟ್ರೀಯತೆಯನ್ನು ಕಾಪಾಡಿದ ಅಸ್ಮಿತೆಯನ್ನು ಉಳಿಸಿದ ಭಾಷೆಯಾಗಿದೆ ಎಂದರು.
ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕೃತ ಎಲ್ಲರೂ ಅಧ್ಯಯನ ಮಾಡಬೇಕಾದ ಭಾಷೆ ಮತ್ತು ವೈಜ್ಞಾನಿಕ ಸಂಶೋಧನೆಯ ಭಾಷೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ, ವಸತಿ ನಿಲಯದ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್, , ಹಾಗೂ ಗುರೂಜಿ ಮಾತಾಜಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕೃತ ಭಾಷಾಧ್ಯಯನದಿಂದ ಬುದ್ಧಿಶಕ್ತಿ ಬೆಳವಣಿಗೆ ಮತ್ತು ಆರೋಗ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಸಂಸ್ಕೃತ ಗೀತಗಾಯನ, ನೃತ್ಯ, ಸಂಸ್ಕೃತ ಯಕ್ಷಗಾನ ಪ್ರದರ್ಶನ, ವಿದ್ಯಾರ್ಥಿಗಳಿಂದ ಸಂಭಾಷಣೆ ನಡೆಯಿತು.
ಈ ಸಮಾರಂಭದಲ್ಲಿ ಸಾವಿತ್ರಿ ಮಾತಾಜಿ ಮತ್ತು ಮೀನಾಕ್ಷಿ ಮಾತಾಜಿ ಸ್ಪರ್ಧಾಳುಗಳ ಪಟ್ಟಿ ವಾಚಿಸಿದರು. ಪದ್ಮಜಾ ವಂದಿಸಿ, ಸುಮುಖ ಅಡಿಗ ನಿರೂಪಿಸಿದರು.