ಹೆಬ್ರಿ :ಅಮೃತಭಾರತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆಯನ್ನು ನಾರಾಯಣ ಗುರು ಮಂದಿರದಲ್ಲಿ ಆಚರಿಸಿದರು.
ವಿದ್ಯಾರ್ಥಿಗಳು ಗುರುವೃಂದದವರಿಗೆ ವಿಶೇಷ ರೀತಿಯ ಆಟ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉಡುಗೊರೆಗಳನ್ನು ನೀಡಿ ಮಾತಾಜಿಯವರಿಗೆ ಭಾರತೀಯ ಸಂಸ್ಕೃತಿಯ ಬಾಗಿನ ನೀಡಿದರು.
ಈ ಸಂದರ್ಭದಲ್ಲಿ ಅಮೃತಭಾರತಿ ಆಡಳಿತ ಮಂಡಳಿಯವರಿಗೂ ಗೌರವಾರ್ಪಣೆ ಮಾಡಲಾಯಿತು.