Share this news

ಹೆಬ್ರಿ: ಹೆಬ್ರಿ ಅಮೃತಭಾರತಿ ವಿದ್ಯಾಲಯದಲ್ಲಿ ವಸಂತ ಪಂಚಮಿಯನ್ನು ಬುಧವಾರ ಆಚರಿಸಲಾಯಿತು. ಸರಸ್ವತೀ ದೇವಿಯು ಅವತರಿಸಿದ ಶುಭದಿನದಂದು ಶಾಲಾ ವಿದ್ಯಾರ್ಥಿಗಳು ದೇವರ ಭಜನೆಯನ್ನು ಗುರೂಜಿ ಮಾತಾಜಿಯವರೊಂದಿಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದಯೋನ್ಮುಖ ವಿದ್ವಾಂಸ ಗುರುರಾಜ ಭಟ್ ಉಡುಪಿ ಮಾತನಾಡಿ, ಸರಸ್ವತೀ ದೇವಿಯು ವಿದ್ಯಾಬುದ್ಧಿಯನ್ನು ನೀಡುವ, ಋಷಿ ಮುನಿಗಳು ಆರಾಧನೆ ಮಾಡಿ ಒಲಿಸಿಕೊಂಡ ದೇವತೆಯಾಗಿದ್ದು, ನಾವೆಲ್ಲರೂ ಪ್ರತಿನಿತ್ಯ ಪೂಜಿಸಬೇಕಾದ ದೇವತೆಯಾಗಿದ್ದಾಳೆ ಎಂದು ವಸಂತ ಪಂಚಮಿಯ ಮಹತ್ವವನ್ನು ವಿವರಿಸಿದರು.
ಈ ಸಮಾರಂಭದಲ್ಲಿ ಶಾಲಾ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಸಂಸ್ಥೆಯ ಗುರೂಜಿ ಮಾತಾಜಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ವಂದಿಸಿದರು.

 

Leave a Reply

Your email address will not be published. Required fields are marked *