ಹೆಬ್ರಿ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಸಂಲಗ್ನತ್ವದ ವಿದ್ಯಾಸಂಸ್ಥೆಗಳಿಗೆ ವಿವಿಧ ವಿಷಯಗಳಲ್ಲಿ, ತೆಕ್ಕಟ್ಟೆಯಲ್ಲಿ ನಡೆದ ಸ್ಪರ್ಧೆಗಳಲ್ಲಿ ಹೆಬ್ರಿ ಪಿ.ಆರ್. ಎನ್. ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಾದ ಅಕ್ಷತಾ( ಗಣಿತ ಪ್ರಯೋಗ ), ರಿತಿನ್ ( ಗಣಿತ ಮಾದರಿ ), ಪ್ರಾರ್ಥನಾ ( ವಿಜ್ಞಾನ ಪ್ರಯೋಗ ), ಮನಸ್ವಿ ( ವಿಜ್ಞಾನ ಪತ್ರವಾಚನ ), ಧನ್ವಿತ್, ಕೃಷ್ಣ, ಯಾದ್ವಿ,( ಸಂಸ್ಕೃತಿ ಜ್ಞಾನ ರಸಪ್ರಶ್ನೆ ) ಶಿಶು ವರ್ಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿವಾನ್ (ಗಣಿತ ಮಾದರಿ ) ದ್ವಿತೀಯ ಸ್ಥಾನ , ಚೈತ್ರಾ ( ವಿಜ್ಞಾನ ಮಾದರಿ ) ತೃತೀಯ ಸ್ಥಾನ, ರಜತ್, ಶ್ರೀರಾಮ, ಸಾನ್ವಿತಾ, ( ವಿಜ್ಞಾನ ರಸಪ್ರಶ್ನೆ ) ತೃತೀಯ ಸ್ಥಾನ ಪಡೆದಿದ್ದಾರೆ.ಬಾಲ ವರ್ಗದಲ್ಲಿ ಪ್ರತೀಕ್ ( ಗಣಿತ ಸೃಜನಾತ್ಮಕ ) ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥೆ ಶಕುಂತಲಾ ಮಾತಾಜಿ ಮತ್ತು ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.





