ಹೆಬ್ರಿ: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮವನ್ನು ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಮತ್ತು ವಸತಿ ನಿಲಯದ ಸದಸ್ಯರಾದ ರಾಮಕೃಷ್ಣ ಆಚಾರ್ಯ ಇವರು ಸಿಂಗಾರ ಪುಷ್ಪ ಅರಳಿಸುವ ಮೂಲಕ ಉದ್ಘಾಟಿಸಿದರು.
ಸಂಸ್ಕೃತ ವಿಶ್ವಮಾನ್ಯ ಭಾಷೆ, ಭಾರತೀಯರಾಗಿ ನಾವೆಲ್ಲರೂ ಅಧ್ಯಯನ ಮಾಡಬೇಕು. ಋಷಿಮುನಿಗಳು ವೈಜ್ಞಾನಿಕವಾಗಿ ಕಂಡುಕೊAಡ ಸತ್ಯ ಘಟನೆಗಳ ತಿರುಳಾಗಿದೆ ಎಂದು ರಾಮಕೃಷ್ಣ ಆಚಾರ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರೂಜಿ, ಮಾತಾಜಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭೂಮಿಕಾ ಮತ್ತು ಮೇಧಾ ಪ್ರಾರ್ಥಿಸಿದರು.ವಿದ್ಯಾರ್ಥಿನಿ ಬೃಂದಶ್ರೀ ನಿರೂಪಿಸಿ, ವೇದಾನಂದ ಸ್ವಾಗತಿಸಿ, ಸಿಂಚನಾ ಭಟ್ ಧನ್ಯವಾದ ತಿಳಿಸಿದರು.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸಂಸ್ಕೃತ ಸಂಖ್ಯಾಗೀತ ನೃತ್ಯ ಕಾರ್ಯಕ್ರಮ ನಡೆಯಿತು.