ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ವಿದ್ಯಾಲಯದಲ್ಲಿ ರಕ್ಷಾಬಂಧನ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಅಮೃತಭಾರತಿ ಟ್ರಸ್ಟಿನ ಸದಸ್ಯರಾದ ಬಾಲಕೃಷ್ಣ ಮಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಯೋಧರು ನಮ್ಮ ರಕ್ಷಣೆಯನ್ನು ಮಾಡಿದರೆ, ದೇಶದ ಸಹೋದರಿಯರ ರಕ್ಷಾ ಕವಚವಾಗಿ ನಾವು ಇರಬೇಕು ಎಂದರು.
ಮುಖ್ಯ ಅತಿಥಿಯಾಗಿ ಮನೀಷ್ ಕುಲಾಲ್ ಕಾಬೆಟ್ಟು ಮಾತನಾಡಿ, ರಕ್ಷಾಬಂಧನದ ಪರ್ವಕಾಲದಲ್ಲಿ ಕೃಷ್ಣ ದ್ರೌಪದಿಯ ವಸ್ತ್ರಾಪಹರಣವಾದಾಗ ಮಾನ ಕಾಪಾಡಿದಂತೆ, ನಾವು ಭಾರತೀಯರು ಭಾರತಾಂಬೆಯ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗೆ ಕಟಿಬದ್ದರಾಗುವ ಸಂಕಲ್ಪದೊಂದಿಗೆ ರಕ್ಷಾ ಬಂಧನವನ್ನು ಆಚರಿಸಬೇಕು ಎಂದು ಆಶಿಸಿದರು. ವಿದ್ಯಾರ್ಥಿನಿಯರು ಆರತಿ ಬೆಳಗಿ, ತಿಲಕ ಹಚ್ಚಿ ರಕ್ಷೆಯನ್ನು ಕಟ್ಟಿ ಸಿಹಿತಿನಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ, ಮುದ್ರಾಡಿ ವಲಯದ ಕಾರ್ಯಕರ್ತ ಕೌಶಿಕ್, ಅಮೃತಭಾರತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರೂಜಿ ಮಾತಾಜಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಹೇಮಾ ಮಾತಾಜಿ ಸ್ವಾಗತಿಸಿ, ರಕ್ಷಾ ಮಾತಾಜಿ ವಂದಿಸಿದರು. ಅಮೂಲ್ಯ ಮಾತಾಜಿ ರಕ್ಷಾ ಬಂಧನದ ಸಂದೇಶ ವಾಚಿಸಿ, ಗಣಿತ ಶಿಕ್ಷಕಿ ಪಂಚಮಿ ನಿರೂಪಿಸಿದರು.