Share this news

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ, ಚೈತನ್ಯ ಯುವ ವೃಂದ ಮತ್ತು ಚೈತನ್ಯ ಮಹಿಳಾ ವೃಂದದ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಗಾಂಧಿ ಸ್ಮೃತಿ ಕಾರ್ಯಕ್ರಮ ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆಯಿತು.

ನಿವೃತ್ತ ಅಧ್ಯಾಪಕರು ಮತ್ತು ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಿನೇಶ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿಶ್ವಕ್ಕೆ ಸತ್ಯ ಶಾಂತಿಯ ಮಹತ್ವವನ್ನು ತಿಳಿಸಿದವರು ಮಹಾತ್ಮ ಗಾಂಧಿ. ಅವರ ಜನ್ಮದಿನದಂದು ಎಲೆಮರೆಯ ಪ್ರತಿಭೆಗಳನ್ನು ಗುರುತಿಸುವುದು. ಅವರನ್ನು ಪ್ರೋತ್ಸಾಹಿಸುತ್ತಾ ಗಾಂಧಿ ತತ್ವ ಚಿಂತನೆಗಳನ್ನು ಕವನಗಳ ಮೂಲಕ ಹರಡುವ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ ಎಂದರು.
ಕ.ಸಾ.ಪ ಹೆಬ್ರಿ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಗಾಂಧಿ ಸ್ಮೃತಿ ಶೀರ್ಷಿಕೆಯಡಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಮಹಾತ್ಮಗಾಂಧಿ ಕುರಿತ ಕವನಗೋಷ್ಠಿ- ಚಿಂತನ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಚೈತನ್ಯ ಯುವ ವೃಂದದ ಗೌರವಾಧ್ಯಕ್ಷರಾದ ಜನಾರ್ಧನ್ ಹೆಚ್ , ಚೈತನ್ಯ ಮಹಿಳಾ ವೃಂದದ ಅಧ್ಯಕ್ಷರಾದ ವಿದ್ಯಾ ಜನಾರ್ಧನ್ , ಚೈತನ್ಯ ಮಹಿಳಾ ವೃಂದದ ಕಾರ್ಯದರ್ಶಿ ಸುಮನಾ ಜಿ. ನಾಯಕ್ , ಕ. ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್ ಅವರು ಗಾಂಧಿ ಕುರಿತು ಚಿಂತನ ಪ್ರಸ್ತುತ ಪಡಿಸಿದರು.
ಕ. ಸಾ.ಪ ಮತ್ತೋರ್ವ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಗಾಂಧಿ ಸ್ಮೃತಿ ಕವನಗೋಷ್ಠಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿದರು. ಕ.ಸಾ.ಪ ಪದಾಧಿಕಾರಿಗಳಾದ ಸುರೇಶ ಭಂಡಾರಿ ಸ್ವಾಗತಿಸಿ, ಮಹೇಶ ಹೈಕಾಡಿ ಧನ್ಯವಾದವಿತ್ತರು. ಸಂತೋಷ ಮುದ್ರಾಡಿ ಕಾರ್ಯಕ್ರಮ ನಿರೂಪಿಸಿದರು.

ಹೆಬ್ರಿ ತಾಲೂಕು ಮಟ್ಟದ ಗಾಂಧಿ ಕುರಿತ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅರುಣಾ ಹೆಬ್ರಿ (ಪ್ರಥಮ) ದಿನೇಶ ಶೆಟ್ಟಿಗಾರ ( ದ್ವಿತೀಯ) ಚೈತ್ರಾ ಕಬ್ಬಿನಾಲೆ ( ತೃತೀಯ ) ಇವರಿಗೆ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿಯಲ್ಲಿ ಪೂರ್ಣೇಶ್ ಹೆಬ್ರಿ, ಪ್ರೇಮಾ ಬಸನಗೌಡ ಬಿರಾದರ, ನಮಿತಾ ಪೂಜಾರಿ, ವಿಜಯಲಕ್ಷ್ಮಿ ಆರ್ ಕಾಮತ್ ಮುನಿಯಾಲು, ಧೀರಜ್ ಕನ್ಯಾನ, ಮಂಜುಳಾ ಗಂಜಿ, ಭವ್ಯಾಕರುಣಾಕರ್ ಸೋಮೇಶ್ವರ ,ಅಭಿಷೇಕ್ ಸೋಮೇಶ್ವರ, ಪ್ರಿಯಾಂಕ ಸೀತಾನದಿ,ಸವಿತಾ ರತ್ನಾಕರ ಪೂಜಾರಿ ಮಾತಿಬೆಟ್ಟು, ಡಾ.ಪ್ರವೀಣ ಕುಮಾರ್ , ಮಂಜುನಾಥ ಕೆ ಶಿವಪುರ, ಪುಷ್ಪಾವತಿ ಶೆಟ್ಟಿ ಹೆಬ್ರಿ, ಮಹೇಶ ಹೈಕಾಡಿ, ಪ್ರೀತೇಶ ಕುಮಾರ್ ಗಾಂಧಿ ಕುರಿತ ಸ್ವರಚಿತ ಕವನಗಳನ್ನು ವಾಚಿಸಿದರು.

 

 

 

 

Leave a Reply

Your email address will not be published. Required fields are marked *