ಹೆಬ್ರಿ: ಹೆಬ್ರಿ ಪಾಂಡುರAಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
‘ಸ್ವಚ್ಛತೆಯೇ ಸೇವಾ ‘ ಶೀರ್ಷಿಕೆಯ ಅಡಿಯಲ್ಲಿ ಹೆಬ್ರಿ ಗ್ರಾಮ ಪಂಚಾಯತ್ ಮತ್ತು ಅಮೃತಭಾರತಿ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳಸಿ ಪ್ರಿಂಟರ್ಸ್ ನ ಹರೀಶ್ ಪೂಜಾರಿ, ಭೋಜ ಪೂಜಾರಿ, ನಿತೀಶ್, ಅಮೃತಭಾರತಿ ವಸತಿ ನಿಲಯದ ಮೇಲ್ವಿಚಾರಕ ಶಂಕರ್ ಸಿಂಗ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.