ಹೆಬ್ರಿ: ಗೇರುಬೀಜ ಸಿಪ್ಪೆ ತುಂಬಿಸಿಕೊಂಡು ಬಂದಿದ್ದ ಲಾರಿ ಚಾಲಕ ಹಾಗೂ ರೈಟರ್ ಸೇರಿಕೊಂಡು ಸುಳ್ಳು ಲೆಕ್ಕ ನೀಡಿ ವಂಚಿಸಲು ಯತ್ನಿಸಿದ್ದಾರೆ ಎನ್ನುವ ಪ್ರಕರಣದ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕುಂದಾಪುರ ತಾಲೂಕಿನ ಸಳ್ವಾಡಿಯ ವಿಷ್ಣುಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್ ಸಂಸ್ಥೆಯಿಂದ ಲಾರಿ ಚಾಲಕ ಸಂತೋಷ್ ಎಂಬಾತ ನವೆಂಬರ್ 22 ರಂದು 290 ಚೀಲ ಗೇರುಬೀಜ ಸಿಪ್ಪೆ ತುಂಬಿಸಿಕೊಂಡು
ಹೆಬ್ರಿ ತಾಲೂಕಿನ ಕನ್ಯಾನದ ಕಸ್ತೂರಿ ಶೆಲ್ ಎಕ್ಸ್ಟ್ರಾಕ್ಷನ್ ಗೆ ಬಂದಿದ್ದ. ಲಾರಿಯಲ್ಲಿದ್ದ ಸರಕು ಖಾಲಿ ಮಾಡುತ್ತಿದ್ದ ವೇಳೆ ಮ್ಯಾನೇಜರ್ ಊಟಕ್ಕೆ ಹೋಗಿರುವುದನ್ನು ಗಮನಿಸಿದ ಚಾಲಕ ಸಂತೋಷ ಹಾಗೂ ರೈಟರ್ ಗೋಪಾಲ ಎಂಬವರು ಗೇರುಬೀಜ ಸಿಪ್ಪೆಯನ್ನು ಮಾರಾಟ ಮಾಡುವ ಉದ್ದೇಶದಿಂದ 290 ಚೀಲದ ಬದಲಿ 245 ಚೀಲ ಎಂದು ತಿದ್ದುಪಡಿ ಮಾಡಿ 45 ಚೀಲ ಗೇರುಬೀಜ ಸಿಪ್ಪೆ ವಂಚಿಸಿದ್ದಾರೆ ಎಂದು ಮ್ಯಾನೇಜರ್ ಮೋಹನದಾಸ್ ಎಂಬವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಾಗಿದೆ
















