ಹೆಬ್ರಿ: ಹೆಬ್ರಿ ಜೇಸಿಐನ ಅಧ್ಯಕ್ಷರಾಗಿ ರಕ್ಷಿತಾ.ಪಿ ಭಟ್ ಅವರು ಆಯ್ಕೆಯಾಗಿದ್ದಾರೆ. ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಹೆಬ್ರಿಯು 40 ವರುಷಗಳಿಂದ ಹೆಬ್ರಿಯಲ್ಲಿ ಸಂಘಟನಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೂಲಕ ತನ್ನದೇ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ.ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಶಿಸ್ತುಬದ್ಧ ಕಾರ್ಯಕ್ರಮಗಳ ಮೂಲಕ ತನ್ನನ್ನು ಗುರುತಿಸಿಕೊಂಡಿದೆ
ಜೇಸಿಐ ಹೆಬ್ರಿಯ ಪೂರ್ವಾಧ್ಯಕ್ಷರಾದ ಜೇಸಿ ಯೋಗೀಶ್ ಭಟ್ ಮತ್ತು ಮಹಾಬಲೇಶ್ವರ ಅಡಿಗ ಅವರು ಅಭಿನಂದಿಸಿದರು .ಈ ಸಂದರ್ಭದಲ್ಲಿ ಜೇಸಿ ಪ್ರಕಾಶ ಶೆಟ್ಟಿ,ಜೇಸಿ ಪುಟ್ಟಣ್ಣ ಭಟ್ ,ಜೇಸಿ ಮಂಜುನಾಥ ಕೆ ಶಿವಪುರ, ಜೇಸಿ ರೂಪೇಶ ನಾಯ್ಕ ,ಜೇಸಿ ಪ್ರವೀಣ್ ಶೆಟ್ಟಿ, ಜೇಸಿರೇಟ್ ಸುಮಲತಾ ಅಡಿಗ, ಜೇಸಿ ಮನ್ವಿತ್ ಅಡಿಗ ಅವರು ಉಪಸ್ಥಿತರಿದ್ದರು
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ