Share this news
ಹೆಬ್ರಿ: ಹೆಬ್ರಿಯ ಗ್ರಾಮದೇವರಾದ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಪ್ರತೀ ವರ್ಷದಂತೆ ನಡೆಯುವ 14ನೇ ವರ್ಷದ 4 ದಿನಗಳ ಕಾಲ ನಡೆಯಲಿರುವ ‘ನಮ್ಮೂರ ಹಬ್ಬ ಹೆಬ್ಬೇರಿ ಉತ್ಸವ’ದ ಆಮಂತ್ರಣ ಪತ್ರಿಕೆಯನ್ನು ಜ.20 ರಂದು ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.

ಸಮಾಜ ಸೇವಕ ಹಾಗೂ ಧಾರ್ಮಿಕ ಮುಖಂಡರಾದ ಎಚ್. ಭಾಸ್ಕರ ಜೋಯಿಸ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ., ಲಯನ್ಸ್ ಪ್ರಾಂತೀಯ ಅಧಿಕಾರಿ ಟಿಜಿ ಅಚಾರ್ಯ, ಕಾರ್ಕಳ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಉಪನ್ಯಾಸಕರಾದ ಬಾಲಚಂದ್ರ ಹೆಬ್ಬಾರ್, ಉತ್ಸವದ ರೂವಾರಿ ಶೇಖರ್ ಹೆಬ್ರಿ, ಆನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ ಸೇರಿಗಾರ್, ಮೂಡಬಿದ್ರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಅನಂತಪದ್ಮನಾಭ ಪ್ರೆಂಡ್ಸ್ ನೇತೃತ್ವದಲ್ಲಿ ಹೆಬ್ಬೇರಿ ಉತ್ಸವ ನಡೆಯಲಿದ್ದು, ಧಾರ್ಮಿಕ, ಸಾಂಸ್ಕೃತಿಕ ಕಲೋತ್ಸವ ಫೆ.12 ರಿಂದ ಫೆ.15ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *