ಹೆಬ್ರಿ:ಕಳೆದ ಶನಿವಾರ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಬಳಿಯ ಜಕ್ಕನಮಕ್ಕಿ ಎಂಬಲ್ಲಿ ಕಾರು ಹಾಗೂ ಬಸ್ಸು ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಶಿಕ್ಷಕರು ದಾರುಣವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೇ ಅಪಾಯಕಾರಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕ್ಯಾಂಟರ್ ಚಾಲಕ ಸ್ಥಳದಲ್ಲೇ ಬಾಲಕೃಷ್ಣ ಎಂಬವರು ಸಾವನ್ನಪ್ಪಿರುವ ಭೀಕರ ದುರ್ಘಟನೆ ಜೂನ್ 17ರಂದು ಶನಿವಾರ ಸಂಭವಿಸಿದೆ. ಈ ಅಪಘಾತದಿಂದ ಹಿಂದಿನಿAದ ವೇಗವಾಗಿ ಬರುತ್ತಿದ್ದ ಮಹೀಂದ್ರಾ ಥಾರ್ ಕಾರು ಕ್ಯಾಂಟರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಆಗುAಬೆ ಕಡೆಯಿಂದ ಹೆಬ್ರಿ ಕಡೆಗೆ ಪಿವಿಸಿ ಪೈಪು,ಟ್ಯಾಂಕ್ ಸಾಗಾಟದ ಕ್ಯಾಂಟರ್ ಲಾರಿ ಹಾಗೂ ಹೆಬ್ರಿ ಕಡೆಯಿಂದ ಆಗುಂಬೆ ಮಾರ್ಗವಾಗಿ ತೀರ್ಥಹಳ್ಳಿಕಡೆಗೆ ಹೋಗುತ್ತಿದ್ದ ಮಿನಿ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ.ಇದೇವೇಳೆ ಕ್ಯಾಂಟರ್ ಹಿಂದಿನಿAದ ಬರುತ್ತಿದ್ದ ಮಹೀಂದ್ರಾ ಥಾರ್ ನಿಯಂತ್ರಣತಪ್ಪಿ ಕ್ಯಾಂಟರ್ ಲಾರಿಗೆ ಗುದ್ದಿದೆ. ಜಕ್ಕನಮಕ್ಕಿ ಎಂಬಲ್ಲಿನ ಕಿರಿದಾದ ಹಾಗೂ ತಿರುವಿನಿಂದ ಕೂಡಿದ ಇಳಿಜಾರು ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಹೆದ್ದಾರಿ ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ.
ಈ ಸರಣಿ ಅಪಘಾತದಿಂದ ಸುಮಾರು ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಬಳಿಕ ಹೆಬ್ರಿ ಪೊಲೀಸರು ಸ್ಥಳೀಯರ ಸಹಕಾರದಿಂದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.