Share this news
ಹೆಬ್ರಿ: ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕೃತಿ ಮತ್ತು ಸಂಸ್ಕಾರಗಳ ಶಿಕ್ಷಣ ನೀಡಬೇಕು. ಇದರಿಂದ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಕಥೆಗಳ ಸಾರವನ್ನು ತಿಳಿಸುವ ಯಕ್ಷಗಾನ ತಾಳಮದ್ದಳೆ ಅತ್ಯಂತ ಸೂಕ್ತ ಮಾಧ್ಯಮ ಎಂದು ಮುದ್ರಾಡಿ ಮಾಗಣಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಜ.27ರಂದು ಬೆಳಗುಂಡಿ ಕ್ಷೇತ್ರದ ವಾರ್ಷಿಕ ರಥೋತ್ಸವದ ಅಂಗವಾಗಿ ಸ್ಥಳೀಯ ಉಪ್ಪಳ ಸರಕಾರಿ ಶಾಲೆಯ ಮಕ್ಕಳಿಂದ ನಡೆದ ಚಕ್ರವ್ಯೂಹ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಳಮದ್ದಳೆಗೆ ಸಹಕರಿಸಿದ ಶಿಕ್ಷಕಿ, ಕಲಾವಿದೆ ವೇದಾವತಿ ಇವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು. ಯಕ್ಷಗಾನ ಸಾಹಿತಿ ಪಿ. ವಿ. ಆನಂದ ಸಾಲಿಗ್ರಾಮ ನಿರ್ದೇಶಿಸಿ, ಭಾಗವತಿಕೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಉಪ್ಪಳ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಭಟ್, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 
 

 

 
 

 

Leave a Reply

Your email address will not be published. Required fields are marked *