ಹೆಬ್ರಿ:ಎರಡು ಬೈಕುಗಳು ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಹೆಬ್ರಿಯಲ್ಲಿ ನಡೆದಿದೆ. ಈ ಅಪಘಾತದಿಂದ ಬೈಕ್ ಸವಾರರಾದ ರಂಜಿತ್ ಹಾಗೂ ಭರತ್ ಗಾಯಗೊಂಡಿದ್ದಾರೆ.
ರಂಜಿತ್ ಎಂಬವರು ಶುಕ್ರವಾರ ಸಂಜೆ ಹೆಬ್ರಿ ಕಡೆಯಿಂದ ಮುದ್ರಾಡಿ ಕಡೆಗೆ ತನ್ನ ಬೈಕಿನಲ್ಲಿ ಹೋಗುತ್ತಿದ್ದಾಗ ಹೆಬ್ರಿ ಅಮೃತಭಾರತಿ ಶಾಲೆಯ ಮುಂಭಾಗದಲ್ಲಿ ಮುದ್ರಾಡಿಯಿಂದ ಹೆಬ್ರಿಗೆ ಅತೀವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಭರತ್ ನಿಯಂತ್ರಣ ತಪ್ಪಿ ರಂಜಿತ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಈ ದುರ್ಘಟನೆಯಲ್ಲಿ ರಂಜಿತ್ ತಲೆಗೆ ಗಾಯಗಳಾಗಿದ್ದು ಭರತ್ ಎಂಬವರಿಗೆ ಕೈಕಾಲಿಗೆ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ