ಹೆಬ್ರಿ: ಬೈಕ್ ಸ್ಕಿಡ್ಡಾದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ಇಂದಿರಾ ನಗರದ ಬಳಿ ಬುಧವಾರ ಸಂಜೆ ಸಂಭವಿಸಿದೆ. ಬೈಕ್ ಸವಾರ ಉಮೇಶ ಎಂಬವರು ಹೆಬ್ರಿ ಕಡೆಯಿಂದ ಕುಚ್ಚೂರು ಕಡೆಗೆ ತನ್ನ ಬೈಕಿನಲ್ಲಿ ಅತೀವೇಗವಾಗಿ ಹೋಗುತ್ತಿದ್ದಾಗ ಇಂದಿರಾನಗರ ಎಂಬಲ್ಲಿ ಮೋರಿ ಕಾಮಗಾರಿ ನಡೆಯುತಿದ್ದ ಕಾರಣ ಅಗೆದ ರಸ್ತೆಯಲ್ಲಿ ನಿಯಂತ್ರಣತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ