ಹೆಬ್ರಿ : ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ರಿ ಗ್ರಾಮದ ದುಡ್ಡಿನಜಡ್ಡು ಎಂಬಲ್ಲಿ ನಡೆದಿದೆ.
ಹೆಬ್ರಿ ಗ್ರಾಮದ ದುಡ್ಡಿನಜಟ್ಟು ನಿವಾಸಿ ಗಿರಿಜಾ ಎಂಬವರ ಪುತ್ರ ವಿಠಲ ನಾಯ್ಕ್ (28ವ) ಮೃತಪಟ್ಟ ದುರ್ದೈವಿ. ವಿಠಲ ನಾಯ್ಕ್ ಅವರು ಕಳೆದ 8 ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಿಸಲಾಗಿತ್ತು.ಆದರೂ ಅವರಿಗೆ ಸರಿಯಾಗಿ ನಡೆದಾಡಲು ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಮನನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.