ಹೆಬ್ರಿ: ಸಾರ್ವಜನಿಕರ ಆಸ್ತಿಪಾಸ್ತಿ,ಪ್ರಾಣ ರಕ್ಷಣೆಯಂತಹ ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತರಾಗಿರುವ ಪೊಲೀಸರ ವಿರುದ್ದವೇ ತಿರುಗಿದ್ದ ಬಿದ್ದ ಆಸಾಮಿಯೋರ್ವ ಕರ್ತವ್ಯನಿರತರಾಗಿರುವ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವಬೆದರಿಕೆಯೊಡ್ಡಿದ ಘಟನೆ ಹೆಬ್ರಿ ತಾಲೂಕಿನ ಬೇಳಂಜೆ ಎಂಬಲ್ಲಿ ನಡೆದಿದೆ.
ಬೇಳಂಜೆ ಕಮ್ತ ಹೊಸಮನೆ ನಿವಾಸಿ ರಾಜೇಶ ಎಂಬಾತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆತ ಭಾನುವಾರ ಸಾರ್ವಜನಿಕ ಪ್ರದೇಶದಲ್ಲಿ ತರಗೆಲೆಗೆ ಬೆಂಕಿ ಹಾಕುತ್ತಿದ್ದು ಇದರಿಂದ ಬೆಂಕಿ ವ್ಯಾಪಿಸುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ಮಹೇಶ್ ಎಂಬವರು 112 ನಂಬರ್ ಗೆ ಕರೆ ಮಾಡಿದಾಗ ಪೊಲೀಸರ ತುರ್ತುಸೇವೆಯ ವಾಹನ ಸ್ಥಳಕ್ಕೆ ಬಂದಾಗ ಕರ್ತವ್ಯದಲ್ಲಿದ್ದ ಮುಖ್ಯಪೇದೆ ರಶ್ಮಿ ಹಾಗೂ ಚಾಲಕ ಆನಂದ ಅವರು ಬೆಂಕಿ ಹಾಕದಂತೆ ರಾಜೇಶ್ ಎಂಬಾತನಿಗೆ ತಿಳಿಹೇಳಿದಾಗ ಆತ ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ಬೈದು, ಹೊಡೆಯಲು ಬಂದು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸ್ ಸಿಬ್ಬಂದಿಗಳು ದೂರು ನೀಡಿದ್ದಾರೆ.
ಈ ಕುರಿತು ಆರೋಪಿ ರಾಜೇಶ್ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ