ಬೆಂಗಳೂರು: ಕೊರೊನಾ ರೂಪಾಂತರಿ EG.5 ವೈರಸ್ ವಿದೇಶಗಳಲ್ಲಿ ಆತಂಕ ಸೃಷ್ಟಿಸಿದ್ದು, ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ EG.5 ಹೊಸ ಅಲೆಗೆ ಕಾರಣವಾಗುವ ಆತಂಕ ಸೃಷ್ಟಿಮಾಡಿದೆ. ಸದ್ಯ ಎರಿಸ್ EG.5 ಅತಿವೇಗವಾಗಿ ಹರಡುವ ರೂಪಾಂತರವಾಗುವ ಆತಂಕ ಮನೆ ಮಾಡಿದ್ದು, ಅಮೇರಿಕಾ, ಜಪಾನ್ ಹಾಗೂ ಬ್ರಿಟನ್‌ನಲ್ಲಿ ಹೊಸ ಅಲೆ ಸೃಷ್ಟಿಸುವ ಭೀತಿ ಶುರುವಾಗಿದೆ. ಹೀಗಾಗಿ ಇತ್ತ ಕರ್ನಾಟಕದಲ್ಲೂ ಕೋವಿಡ್ ಮತ್ತೆ ಏರಿಕೆಯ ಆತಂಕ ಶುರುವಾಗಿದೆ. ಆದ್ದರಿಂದ ನಿರ್ಲಕ್ಷ್ಯ ವಹಿಸದೆ ಎಚ್ಚರಿಕಯಿಂದಿರುವAತೆ ವೈದ್ಯರು ತಿಳಿಸಿದ್ದಾರೆ.
ಜೂನ್ ನಲ್ಲಿ ಪತ್ತೆಯಾಗಿದ್ದ ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ ಇಉ.5 ಈಗ ವಿದೇಶಗಳಲ್ಲಿ ಅರ್ಭಟಿಸಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿಯೂ ಸಹ ಕೋವಿಡ್ ಮತ್ತೆ ಭಯ ಶುರುವಾಗಿದೆ. ಹೀಗಾಗಿ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ, ಆಯಾಸ, ಸ್ನಾಯಿ ಸೆಳೆತ, ತಲೆನೋವು , ಗಂಟಲು ನೋವು, ಮೂಗಿನಲ್ಲಿ ಸೊರುವಿಕೆ, ವಾಕರಿಕೆ, ವಾಂತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದಾರೆ.ಸದ್ಯ ಎರಿಸ್ EG.5 ಅಮೆರಿಕಾ, ಜಪಾನ್ ಹಾಗೂ ಬ್ರಿಟನ್ ನಲ್ಲಿ ಹೊಸ ತಳಿ ಪತ್ತೆಯಾಗಿದ್ದು, ಅಲ್ಲಿ ಈ ರೂಪಾಂತರಿ ವೇಗವಾಗಿ ಹರಡುತ್ತಿದೆ. ಹೊಸ ವೇರಿಯೆಂಟ್‌ನ ರೋಗಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹೀಗಾಗಿ, ಆರೋಗ್ಯ ತಜ್ಞರು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ವಿದೇಶದಲ್ಲಿ ಆತಂಕ ಶುರುವಾದ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಆರೋಗ್ಯ ಇಲಾಖೆ ಮತ್ತೆ ಅಲರ್ಟ್ ಆಗಿದೆ.