Share this news

ಮಂಗಳೂರು: ಹೊಸ ವರ್ಷ ಆರಂಭದಲ್ಲೇ ಮೆಸ್ಕಾಂ ಗ್ರಾಹಕರಿ ವಿದ್ಯುತ್ ಶಾಕ್ ನೀಡಲು ಸದ್ದಿಲ್ಲದೇ ತಯಾರಿ ನಡೆಸುತ್ತಿದೆ. 2023-24ನೇ ಸಾಲಿಗೆ ಪ್ರತೀ ಯೂನಿಟ್‌ಗೆ ಸರಾಸರಿ 1.38 ರೂ. ದರ ಏರಿಕೆಗೆ ಪ್ರಸ್ತಾವನೆ ಸಿದ್ಧಪಡಿಸಿದೆ.

ವಿದ್ಯುತ್‌ ದರ ಪರಿಷ್ಕರಣೆ ಮಾಡುವಂತೆ ಮೆಸ್ಕಾಂ ಕರ್ನಾಟಕ ವಿದ್ಯುಚಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಬೆಂಗಳೂರು ಹಾಗೂ ಮಂಗಳೂರಿನ ಮೆಸ್ಕಾಂ ಕೇಂದ್ರ ಕಚೇರಿಗೆ ಪತ್ರ ಮೂಲಕ ದೂರು ನೀಡಲು ಅವಕಾಶವಿದೆ.

ಮೆಸ್ಕಾಂ ಪ್ರಕಾರ ಸರಾಸರಿ ಸರಬರಾಜು ವೆಚ್ಚ ಪ್ರತೀ ಯೂನಿಟ್‌ಗೆ 9.93 ರೂ. ಆಗುತ್ತಿದ್ದು, ಪ್ರತೀ ಯೂನಿಟ್‌ಗೆ 1.95 ರೂ. ಈಗಾಗಲೇ ಸರಾಸರಿ ವಸೂಲಾತಿ ಅಂದಾಜಿಸಲಾಗಿದೆ. ಈ ನಡುವೆ ಯೂನಿಟ್‌ಗೆ 1.38 ರೂ. ಕೊರತೆ ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಮೆಸ್ಕಾಂ ದರ ಏರಿಕೆ ಪ್ರಸ್ತಾಪವನ್ನು ಸಮರ್ಥಿಸಿಕೊಂಡಿದೆ.

ನಗರ ಪ್ರದೇಶಗಳಿಗೆ ಎಲ್.ಟಿ.-2 ಎ ಗೃಹ ಬಳಕೆಗೆ ಹಾಲಿ ಮೊದಲ ಕಿ.ವ್ಯಾ.ಗೆ 100 ರೂ., (ಗ್ರಾಮೀಣ ಪ್ರದೇಶಗಳಿಗೆ 85 ರೂ.), 50 ಕಿ.ವ್ಯಾ. ವರೆಗೆ ಪ್ರತೀ ಹೆಚ್ಚುವರಿ ಕಿ.ವ್ಯಾ.ಗೆ 110 ರೂ., (100 ರೂ.), 50 ಕಿ.ವ್ಯಾ ಮೀರಿದ ಹೆಚ್ಚುವರಿ ಹೊರೆಗೆ 175 ರೂ. (160 ರೂ.) ಪ್ರಸ್ತುತ ದರವಿದ್ದು, ಇದನ್ನು ಪ್ರತೀ ಕಿ.ವ್ಯಾಟ್‌ಗೆ 150 ರೂ.ಗೆ ನಿಗದಿ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ನಡುವೆ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚವನ್ನು ಸೀಮಿತ ಅವಧಿಗೆ 15 ಪೈಸೆ ಕಡಿತ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಗ್ರಾಹಕರಿಗೆ ಸಮಾಧಾನದ ವಿಚಾರವಾಗಿದೆ.

Leave a Reply

Your email address will not be published. Required fields are marked *