ಬೆಂಗಳೂರು : ಅಂಗವಿಕಲರು, ಬುದ್ಧಿಮಾಂಧ್ಯತೆಯಿಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1,000 ರೂ. ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಖಾಯಿಲೆಗಳಿಂದಾಗಿ ಅಂಗವೈಕಲ್ಯತೆಯಿAದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತೀ ತಿಂಗಳು 1000 ರೂ. ಪ್ರೋತ್ಸಾಹಧನ ನೀಡಲು ತಕ್ಷಣ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸರ್ಕಾರ ಆದೇಶಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಯೋಜನೆ ಜಾರಿಯಾಗಿ ಫಲಾನುಭವಿಗಳ ಆಯ್ಕೆಗೆ ಸೂಚಿಸಲಾಗಿದೆ.
ಬಾಲ್ಯದಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆ, ಅನುವಂಶಿಕ ಸ್ನಾಯು ದೌರ್ಬಲ್ಯ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಖಾಯಿಲೆಯಿಂದ ಬಳಲುತ್ತಿರುವವರ ಆರೈಕೆದಾರರಿಗೆ ಸರ್ಕಾರದಿಂದ ಪ್ರತೀ ತಿಂಗಳು ರೂ.1000 ಪ್ರೋತ್ಸಾಹಧನ ನೀಡಲಾಗುವುದು.