
ಬೆಂಗಳೂರು,ಜ.31:ಉಡುಪಿ, ದಕ್ಷಿಣ ಕನ್ನಡ,ಮತ್ತು ಉತ್ತರ ಕನ್ನಡ
ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 126.72 ಕೋ. ರೂ. ವೆಚ್ಚದಲ್ಲಿ 95 ಕಾಮಗಾರಿ ನಡೆಸಲಾಗುತ್ತಿದ್ದು, ಈಗಾಗಲೇ 76.29 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ.
ಅವರು ಐವನ್ ಡಿ’ ಸೋಜಾ ಅವರ ನಿಯಮ 72 ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಈ ಮೂರು ಜಿಲ್ಲೆಗಳಲ್ಲಿ ಒಟ್ಟು 53 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಗುರುತಿಸಿರುವ 25 ಪ್ರವಾಸೋದ್ಯಮ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಖಾಸಗಿ ಉದ್ದಿಮೆದಾರರಿಗೆ ಪ್ರೋತ್ಸಾಹಕಗಳು, ಸಹಾಯಧನ ಹಾಗೂ ರಿಯಾಯಿತಿಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪಿಪಿಪಿ ಮಾದರಿಯಲ್ಲಿ ಉಡುಪಿಯಲ್ಲಿ 3 ಯೋಜನೆ (ತ್ರಾಸಿ ಬೀಚ್, ಕೋಡಿ ಬೀಚ್, ಬಾರ್ಕೂರು ಕೋಟೆ) ಗಳನ್ನು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಯೋಜನೆ (ಕೋಡಿಕಲ್, ತಣ್ಣೀರು ಬಾವಿ ಬೀಚ್) ಗಳನ್ನು ಕೈಗೊಳ್ಳಲು ಪರಿಕಲ್ಪನೆ ಟಿಪ್ಪಣಿಗೆ ಅನುಮೋದನೆ ಪಡಯಲಾಗಿದೆ. ವಹಿವಾಟು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳಲು ಎರಡು ಬಾರಿ ಟೆಂಡರ್ ಕರೆಯಲಾಗಿದ್ದು, ಬಿಡ್ಡುದಾರರು ತಾಂತ್ರಿಕವಾಗಿ ಅನರ್ಹರಾಗಿರುವುದರಿಂದ ಮರು ಟೆಂಡರ್ ಕರೆಯಲು ಕ್ರಮವಾಗಿಸಲಾಗಿದೆ, ಉತ್ತರ ಕನ್ನಡದಲ್ಲಿ ನಾಲ್ಕು ನಿವೇಶನ (ಬನವಾಸಿ, ಸದಾಶಿವಗಢ, ಗೋಕರ್ಣ, ಅಣ್ಡ್ ) ಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಪರಿಕಲ್ಪನೆ ಟಿಪ್ಪಣಿ ತಯಾರಿಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಅನುಮೋದನೆ ಪಡೆದ ಬಳಿಕ ವಹಿವಾಟು ಸಲಹೆಗಾರರನ್ನು ಟೆಂಡರ್ಮೂಲಕ ಆಯ್ಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


.
.
.
.
