ನವದೆಹಲಿ : 14 ಟಿವಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಐ ಎನ್ ಡಿ ಐ ಎ ಮೈತ್ರಿಕೂಟ ಗುರುವಾರ ಘೋಷಿಸಿದೆ.
ಈ ಪತ್ರಕರ್ತರ ಕಾರ್ಯಕ್ರಮಗಳನ್ನು ಮತ್ತು ಅಂತಹ ಚಾನಲ್ ಗಳು ಅಥವಾ ವೇದಿಕೆಗಳಲ್ಲಿ ಅವರು ಆಯೋಜಿಸುವ ಚರ್ಚೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸದಿರಲು ಐ ಎನ್ ಡಿ ಐ ಎ ಬಣದ ಮಾಧ್ಯಮ ಸಮಿತಿಯು ನಿರ್ಧರಿಸಿದೆ.
ಐ ಎನ್ ಡಿ ಐ ಎ ಸಮನ್ವಯ ಸಮಿತಿಯು ತನ್ನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ ಐ ಎನ್ ಡಿ ಐ ಎ ಪಕ್ಷಗಳು ವಿವಿಧ ಸುದ್ದಿವಾಹಿನಿಗಳ ಆಂಕರ್ ಗಳಾದ ಅದಿತಿ ತ್ಯಾಗಿ, ಅಮನ್ ಚೋಪ್ರಾ, ಅಮಿಶ್ ದೇವಗನ್, ಆನಂದ ನರಸಿಂಹನ್, ಅರ್ನಾಬ್ ಗೋಸ್ವಾಮಿ, ಅಶೋಕ್ ಶ್ರೀವಾಸ್ತವ್, ಚಿತ್ರಾ ತ್ರಿಪಾಠಿ, ಗೌರವ್ ಸಾವಂತ್, ನಾವಿಕ ಕುಮಾರ್, ಪ್ರಾಚಿ ಪರಾಶರ, ರೂಬಿಕಾ ಲಿಯಾಕತ್, ಶಿವ ಆರೂರ್, ಸುಧೀರ್ ಚೌಧರಿ ಹಾಗೂ ಸುಶಾಂತ್ ಸಿನ್ಹಾ ಎಂಬ ಆಂಕರ್ ಗಳ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳಿಸುವುದಿಲ್ಲ ಎಂದು ವಿರೋಧ ಪಕ್ಷದ ಮಾಧ್ಯಮ ಸಮಿತಿಯ ಹೇಳಿಕೆ ತಿಳಿಸಿದೆ.
ಐ ಎನ್ ಡಿ ಐ ಎ ಮೈತ್ರಿಕೂಟದ ಈ ಘೋಷಣೆಯನ್ನು ಕೇಂದ್ರ ಸಚಿವ ಹರ್ದೀಪ್ ಪುರಿ ಅವರು ಮಾಧ್ಯಮ ಹಕ್ಕುಗಳನ್ನು ನಿರ್ಬಂಧಿಸಿದ ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ. 1975ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಭಾರತದಲ್ಲಿ ನಾಗರಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದನ್ನು ನಾವು ನೋಡಿದ್ದೇವೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಐ ಎನ್ ಡಿ ಐ ಎ ನಿಲುವಿನ ವಿರುದ್ಧ ಬಹಿಷ್ಕರಿಸಲ್ಪಟ್ಟ ಸುದ್ದಿ ನಿರೂಪಕರು ತೀವೃ ಆಕ್ರೋಶ ಹೊರಹಾಕಿದ್ದು, ಇದು ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ಕತ್ತುಹಿಸುಕುವ ಪ್ರಯತ್ನವಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ