Month: April 2023

ಅಜೆಕಾರು ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ

ಅಜೆಕಾರು: ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವವು ಮಂಗಳವಾರ ನಡೆಯಿತು. ನೂತನ ರಥ ಸಮರ್ಪಣೆ ಬಳಿಕ ದೇವಸ್ಥಾನದಲ್ಲಿ ಆಶ್ಲೇಷಾ ಬಲಿ, ಚಂಡಿಕಾಯಾಗ, ರಂಗಪೂಜೆ,ಗಣಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಕೊರಂಗ್ರಪಾಡಿ ವಾದಿರಾಜ ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೆಂಕಟರಮಣ ಭಟ್…

ಕಾರ್ಕಳದಲ್ಲಿ ಘಟಾನುಘಟಿ ಅಭ್ಯರ್ಥಿಗಳಿಂದ ನಾಮಪತ್ರ : ಮಂಗಳವಾರ ಒಂದೇ ದಿನ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕಾರ್ಕಳ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರಿಗೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದು , ಎ.20 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರಿಂದ ಇಂದು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಶ್ರಿಕಾಂತ್…

ಮಂಗಳೂರು ಪ್ರೆಸ್ ಕ್ಲಬ್ ಆಂತರಿಕ ಲೆಕ್ಕಪರಿಶೋಧಕರಾಗಿ ಜಿತೇಂದ್ರ ಕುಂದೇಶ್ವರ ಆಯ್ಕೆ

ಕಾರ್ಕಳ : ಕಾರ್ಕಳ ಹಿರ್ಗಾನದ ಜಿತೇಂದ್ರ ಕುಂದೇಶ್ವರ ಅವರು ಮಂಗಳೂರು ಪ್ರೆಸ್ ಕ್ಲಬ್ ನ ಆಂತರಿಕ ಲೆಕ್ಕಪರಿಶೋಧಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ಪತ್ರಿಕಾ ಭವನದಲ್ಲಿ ಭಾನುವಾರ ಪ್ರೆಸ್ ಕ್ಲಬ್ ನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ಮಾಜಿ ಅಪರ ಜಿಲ್ಲಾಧಿಕಾರಿ ಪ್ರಭಾಕರ…

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರ್ಮಿಕ ಸಭೆ : ಭಗವಂತನಿಗೆ ಸಮರ್ಪಣಾ ಭಾವದಿಂದ ಪ್ರಾರ್ಥಿಸಿದಲ್ಲಿ ಪ್ರತಿಫಲ ನಿಶ್ಚಿತ: ವಿದ್ಯಾಪ್ರಸನ್ನ ಸ್ವಾಮೀಜಿ

ಅಜೆಕಾರು:ಭಗವಂತನ ಕರುಣಾಮಯಿ, ತನ್ನ ಸನ್ನಿಧಾನದಲ್ಲಿ ಭಕ್ತಾದಿಗಳು ನಿಷ್ಕಲ್ಮಶ ಮನಸ್ಸಿನಲ್ಲಿ, ಸಮರ್ಪಣಾಭಾವದಿಂದ ಭಗವಂತನನ್ನು ಪ್ರಾರ್ಥಿಸಿದಲ್ಲಿ ಉತ್ತಮ ಪ್ರತಿಫಲ ಅನುಗ್ರಹವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ಹೇಳಿದರು. ಅವರು ಏಪ್ರಿಲ್ 17ರಂದು ಸೋಮವಾರ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣಾ ಕಾರ್ಯಕ್ರಮದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:18.04.2023, ಮಂಗಳವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ,ವಸಂತ ಋತು, ಮೇಷ:ಮಾಸ,ಕೃಷ್ಣಪಕ್ಷ ನಕ್ಷತ್ರ:ಉತ್ತರಾಭಾದ್ರ,ರಾಹುಕಾಲ -03:37 ರಿಂದ 05:10 ಗುಳಿಕಕಾಲ-12:30 ರಿಂದ 02:04 ಸೂರ್ಯೋದಯ (ಉಡುಪಿ) 06:17 ಸೂರ್ಯಾಸ್ತ – 06:42 ದಿನವಿಶೇಷ:ಅಜೆಕಾರು ಶ್ರೀಮಹಾವಿಷ್ಣುಮೂರ್ತಿ ರಥೋತ್ಸವ, ಪಾವಂಜೆ ರಥ ರಾಶಿ ಭವಿಷ್ಯ: ಮೇಷ(Aries):…

ಕಾರ್ಕಳ ಕಾಂಗ್ರೆಸ್ ಚುನಾವಣಾ ಕಾರ್ಯಾಲಯ ಉದ್ಘಾಟನೆ: ಕಾರ್ಕಳದ ಅಭಿವೃದ್ಧಿಗೆ ವೀರಪ್ಪ ಮೊಯ್ಲಿ ಹಾಗೂ ದಿ.ಗೋಪಾಲ ಭಂಡಾರಿಯವರ ಕೊಡುಗೆ ಅನನ್ಯ -ಮುನಿಯಾಲು  ಉದಯ ಶೆಟ್ಟಿ

ಕಾರ್ಕಳ:ಕಾರ್ಕಳದ ಅಭಿವೃದ್ಧಿಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಶಾಸಕ ದಿ.ಗೋಪಾಲ ಭಂಡಾರಿಯವರ ಕೊಡುಗೆ ಅನನ್ಯವಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಹೇಳಿದರು. ಅವರು ಕಾರ್ಕಳದಲ್ಲಿ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್…

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅದ್ಯಕ್ಷರಾಗಿ ಶುಭದರಾವ್

ಕಾರ್ಕಳ : ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿಯ ಅದ್ಯಕ್ಷ ಎಂ. ಬಿ. ಪಾಟೀಲ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗುತ್ತಿದ್ದು, ಕಾರ್ಕಳ ಬ್ಲಾಕ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪುರಸಭಾ ಸದಸ್ಯ, ಕಾಂಗ್ರೆಸ್ ವಕ್ತಾರ ಶುಭದ ರಾವ್…

ಮೇ.4ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ : ಭಾರಿ ಬಿಗಿ ಭದ್ರತೆ!

ಉಡುಪಿ: ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಇದರ ಭಾಗವಾಗಿ ಮೇ.4 ರಂದು ಉಡುಪಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಜೊತೆಗೆ ಉತ್ತರ ಪ್ರದೇಶದಲ್ಲಿ…

ಕಾರ್ಕಳದ ಜನತೆ ಅಭಿವೃದ್ಧಿ ಪರವಾಗಿದ್ದಾರೆ: ಮಹಾವೀರ ಹೆಗ್ಡೆ

ಕಾರ್ಕಳ: ಚುನಾವಣೆಗಳು ಬಂದಾಗ ಮಾತ್ರ ಮತ ಕೇಳಲು ಬರುವ ಕಾಂಗ್ರೆಸ್ ಗೆ ಕಾರ್ಕಳದ ಮತದಾರರು ಧಿಕ್ಕರಿಸಲಿದ್ದು ಈ ಬಾರಿ ಸಚಿವ ಸುನಿಲ್ ಕುಮಾರ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಬಿಜೆಪಿ ಗೆ ಮತ ನೀಡಲಿದ್ದಾರೆ,ಕಾರ್ಕಳದ ಜನ ಸದಾ ಅಭಿವೃದ್ಧಿಯ ಪರವಾಗಿದ್ದಾರೆ…

ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್’ಗೆ ಕೆ.ಎಸ್ ಈಶ್ವರಪ್ಪ ಬಹಿರಂಗ ಪತ್ರ!

ಶಿವಮೊಗ್ಗ: ಬಿಜೆಪಿಯಲ್ಲಿ ಹಲವು ವರ್ಷಗಳ ಕಾಲ ರಾಜಕಾರಣ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಟಿಕೆಟ್ ಕೈ ತಪ್ಪುವ ವಿಚಾರದಲ್ಲಿ ಬಂಡಾಯವೆದ್ದು, ಕಾಂಗ್ರೆಸ್ ಪಕ್ಷ ಸೇರಿದ್ದರು. ಅವರ ಈ ನಡೆಯ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಎರಡು ಪುಟಗಳ ಸುದೀರ್ಘ…