Month: May 2023

ಮಾಳ: ಭಾರೀ ಬಿರುಗಾಳಿಗೆ ಅಡಿಕೆ ತೋಟಕ್ಕೆ ಹಾನಿ

ಕಾರ್ಕಳ: ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು ಕಾರ್ಕಳ ತಾಲೂಕಿನ ಹಲವೆಡೆ ಬಿರುಗಾಳಿಯಿಂದ ಮನೆ, ಅಡಿಕೆ ತೋಟಗಳಿಗೆ ಭಾರೀ ಹಾನಿಯಾಗಿದೆ. ಮಾಳ ಗ್ರಾಮದಲ್ಲಿ ಮಂಗಳವಾರ ಬೀಸಿದ ಭಾರೀ ಗಾಳಿಗೆ ಸುರೇಂದ್ರ ಪ್ರಭು ಎಂಬವರ ಅಡಿಕೆ ತೋಟದಲ್ಲಿನ ಸುಮಾರು 150 ಅಡಿಕೆ ಮರ ಧರಾಶಾಯಿಯಾಗಿದ್ದು…

ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ವಿವಾದಾತ್ಮಕ ಹೇಳಿಕೆ:ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮಹಿಳಾ ಕಾಂಗ್ರೆಸ್ ಘಟಕ ಪೊಲೀಸ್ ಠಾಣೆಗೆ ದೂರು ನೀಡಿದೆ. ಶಾಸಕ ಹರೀಶ್ ಪೂಂಜಾ ಮಂಗಳವಾರ ಬೆಳ್ತಂಗಡಿಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ…

ಕಾಂಗ್ರೆಸ್ ನಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ – ಮಾಜಿ ಸಿಎಂ ಬೊಮ್ಮಾಯಿ‌ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ನವರು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ನಿನ್ನೆ ಸಭೆಯಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಕೇಸರೀಕರಣ…

ವಿಧಾನಸಭೆ ‘ನೂತನ ಸ್ಪೀಕರ್‌’ ಆಗಿ ‘ಯುಟಿ ಖಾದರ್‌’ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆ ನೂತನ ಸ್ಪೀಕರ್ ಆಗಿ ಯುಟಿ ಖಾದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಯುಟಿ ಖಾದರ್ ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರು, ಹೀಗಾಗಿ ಅವರು ಇಂದು ಅಧಿಕೃತವಾಗಿ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಯು.ಟಿ ಖಾದರ್…

24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಹರೀಶ್‌ ಪೂಂಜಾ

ಬೆಳ್ತಂಗಡಿ : 24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ತುಳುವಿನಲ್ಲಿ‌ ಮಾಡಿದ ಭಾಷಣದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆಯಲ್ಲಿ ಸಿಎಂ…

ಕಡ್ತಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಅಜೆಕಾರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು ಗ್ರಾಮೀಣ ಕಾಂಗ್ರೆಸ್ ಸಮಿತಿ ಕಡ್ತಲ, ಕುಕ್ಕುಜೆ,ಎಳ್ಳಾರೆ ವತಿಯಿಂದ ಕಡ್ತಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:24.05.2023, ಬುಧವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ,ಗ್ರೀಷ್ಮ ಋತು, ವೃಷಭ ಮಾಸ, ಶುಕ್ಲಪಕ್ಷ,ನಕ್ಷತ್ರ:ಪುನರ್ವಸು,ರಾಹುಕಾಲ -12:28 ರಿಂದ 02:04 ಗುಳಿಕಕಾಲ-10:52 ರಿಂದ 12:28 ಸೂರ್ಯೋದಯ (ಉಡುಪಿ) 06:05 ಸೂರ್ಯಾಸ್ತ – 06:50 ರಾಶಿ ಭವಿಷ್ಯ: ಮೇಷ(Aries): ಸೃಜನಾತ್ಮಕ ಕೆಲಸಗಳಿಗೆ ಉತ್ತಮ ಸಮಯವನ್ನು…

ಮರು ಮೌಲ್ಯಮಾಪನದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊರಡಿಸಿದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್‌ನಲ್ಲಿ 2, ಕನ್ನಡದಲ್ಲಿ 1 ಹೆಚ್ಚುವರಿ ಅಂಕ ಪಡೆದು ಒಟ್ಟು 594…

ಮುಡಾರು: ಭಾರೀ ಗಾಳಿಮಳೆಗೆ ಮನೆಗೆ ಮರಬಿದ್ದು ಹಾನಿ: 10 ಸಾವಿರ ನಷ್ಟ ಅಂದಾಜು

ಕಾರ್ಕಳ: ಮುಂಗಾರುಪೂರ್ವ ಬಾರೀ ಗಾಳಿಮಳೆಗೆ ಮುಡಾರು ಗ್ರಾಮದ ರಾಮೆಟ್ಟುಪಲ್ಕೆ ನಿವಾಸಿ ಗುಲಾಬಿ ಎಂಬವರ ಮನೆಗೆ ಮರಬಿದ್ದು ಮನೆಯ ಮೇಲ್ಛಾವಣಿಯ ಹೆಂಚು ಹಾಗೂ ತಗಡು ಶೀಟ್ ಹಾನಿಯಾಗಿ ಸುಮಾರು 10 ಸಾವಿರ ನಷ್ಟ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಭಾರೀ…

ಕಾರ್ಕಳ: ಮೀನು ಹಿಡಿಯಲು ದುಷ್ಕರ್ಮಿಗಳಿಂದ ಹೊಳೆಯ ನೀರಿಗೆ ವಿಷಪ್ರಾಷನ: ನೂರಾರು ಜಲಚರಗಳ ಮಾರಣಹೋಮ:ಸ್ಥಳೀಯರ ತೀವ್ರ ಆಕ್ರೋಶ

ಕಾರ್ಕಳ: ಮೀನು ಹಿಡಿಯಲು ಕೆಲ ದುಷ್ಕರ್ಮಿಗಳು ಹೊಳೆಯ ನೀರಿಗೆ ವಿಷಪ್ರಾಶನ ಮಾಡಿರುವ ಪರಿಣಾಮ ಮೀನುಗಳು ಸೇರಿದಂತೆ ಅಸಂಖ್ಯಾತ ಜಲಚರಗಳ ಮಾರಣಹೋಮವಾಗಿದೆ. ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ಸ್ವರ್ಣಾ ನದಿಯ ಬಾಂಕ‌ ಗುಂಡಿ ಎಂಬಲ್ಲಿ ಭಾನುವಾರ ದುಷ್ಕರ್ಮಿಗಳು ಗೇರುಬೀಜ ಎಣ್ಣೆ…