Month: June 2023

ಮುನಿಯಾಲು: ನಿಂತಿದ್ದ ವ್ಯಕ್ತಿಗೆ ದೊಣ್ಣೆಯಿಂದ ಹಲ್ಲೆಗೈದು ಯುವಕ ಪರಾರಿ!

ಕಾರ್ಕಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ಹಿಂದಿನಿಂದ ಬಂದ ಯುವಕನೋರ್ವ ಏಕಾಎಕಿ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಹೆಬ್ರಿ ತಾಲೂಕಿನ ಮುನಿಯಾಲು ಎಂಬಲ್ಲಿ ಗುರುವಾರ ನಡೆದಿದೆ. ದಿನೇಶ್ ಎಂಬವರು ಗುರುವಾರ ಸಂಜೆ ಸುಮಾರು 5.15 ರವೇಳೆಗೆ ಮುನಿಯಾಲು ಪೇಟೆಯಲ್ಲಿ ರಸ್ತೆ…

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ ಆಡಳಿತ ವೈದ್ಯಾಧಿಕಾರಿಗೆ ನೋಟೀಸ್ ಜಾರಿ

ಉಡುಪಿ: ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜೂನ್ 20ರಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ನಡೆಸಿದ್ದರು ಎನ್ನಲಾದ ಸಾರ್ವಜನಿಕ ಸಭೆಯ ಕುರಿತು ವಿವರಣೆ ಕೇಳಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ ಜೂನ್ 20ರಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಭೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ…

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಯ ನೋಂದಣಿ ಶುಲ್ಕವನ್ನು ಸರ್ಕಾರವೇ ಭರಿಸಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಆನಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಅರ್ಜಿ ಹೆಸರಿನಲ್ಲಿ 150 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಮಹಿಳಾ ಮತ್ತು…

ಅಜೆಕಾರು : ಬಾಳಾಗಾರು ಶ್ರೀಪಾದರಿಂದ ತಪ್ತ ಮುದ್ರಾಧಾರಣೆ

ಕಾರ್ಕಳ: ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ. ಮುದ್ರಾಧಾರಣೆಯ ಮೂಲಕ ದೇಹದ ನರಕೋಶ ವ್ಯವಸ್ಥೆ ಸುಲಲಿತವಾಗುತ್ತದೆ. ಇಂದಿಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಕಾಮಾಲೆ ಪೀಡಿತ ರೋಗಿಗಳಿಗೆ ಚೆನ್ನಾಗಿ ಕಾದ ಕಂಚಿನ ಸರಳಿಯಿಂದ ಬರೆ ಹಾಕುವ ಪದ್ಧತಿಯಿದೆ. ಹೀಗೆ ಚೆನ್ನಾಗಿ ಕಾಯಿಸಿದ ಸರಳಿನಿಂದ ಬರೆ…

ಕೋಟ್ಯಾಂತರ ರೂ. ಅಕ್ರಮ ಆಸ್ತಿ ಗಳಿಕೆ : ಪುತ್ತೂರು ಮೂಲದ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ

ಮಂಗಳೂರು : ಬೆಂಗಳೂರಿನ ಕೆ.ಆರ್.ಪುರಂ ತಹಶಿಲ್ದಾರ್ ಅಜಿತ್ ಕುಮಾರ್ ರೈ ಮಾಲಾಡಿ ಅವರ ಮನೆಗೆ ಲೋಕಾಯುಕ್ತ ದಾಳಿ ನಡೆದಿದೆ. ಕೋಟ್ಯಂತರ ರೂ ಅಕ್ರಮ ಆಸ್ತಿ, ಲಕ್ಷಾಂತರ ರೂ ಹಣ, ಕೆ.ಜಿ ಗಟ್ಟಲೆ ಆಭರಣಗಳು, ಬೆಲೆಬಾಳುವ ವಿದೇಶಿ ಮದ್ಯ, ಐಶಾರಾಮಿ ಕಾರು, ಚಂದ್ರಾಲೇಔಟ್…

ಕಾರ್ಕಳ : ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ- 3,66,000 ರೂ. ಮೌಲ್ಯದ ಸೊತ್ತು ವಶ

ಕಾರ್ಕಳ : ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಚತುರ್ಮುಖ ಬಸದಿ ಬಳಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಸಬಾ ಗ್ರಾಮದ ಸಾಲ್ಮರ ಜರಿಗುಡ್ಡೆ ನಿವಾಸಿ ಮೊಹಮ್ಮದ್ ಅಶ್ಫಾನ್(20) ಹಾಗೂ ನಲ್ಲೂರು ಪೇರಲ್ಕೆ ನಿವಾಸಿ ರಜೀಮ್ (31)…

ಕಾರ್ಕಳ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

ಕಾರ್ಕಳ: ಆಚರಣೆ ಮೂಲಕ ಸಂಭ್ರಮ, ಆರಾಧನೆಯ ಮೂಲಕ ಸಂತೃಪ್ತಿ. ಶ್ರೇಷ್ಠ ವೈಚಾರಿಕ ತತ್ವಗಳ ಮೂಲಕ ಬದುಕಿಗೆ ಅರ್ಥಪೂರ್ಣತೆಯ ಕಿರೀಟ ತುಡಿಸುವ ಹಬ್ಬವೇ ಬಕ್ರೀದ ಅಥವಾ ಇದು ಲ್ ಅಜ್ಜಹಾ. ಬಕ್ರೀದ್ ಆಚರಣೆಯು ಶಾಂತಿ ಸೌಹಾರ್ದ ಸಹೃದಯತೆ ಹಾಗೂ ಸಹೋದರ ಭಾವ ಉಕ್ಕಿಸುವ…

ಬಿಜೆಪಿ ಕಾಲದ ಕಾಮಗಾರಿ ನೈಜತೆ ಪರಿಶೀಲಿಸಿ ಹಣ ಬಿಡುಗಡೆ: ಸರ್ಕಾರದ ಆದೇಶ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಕೈಗೊಂಡಿದ್ದ ಎಲ್ಲ ಕಾಮಗಾರಿಗಳಿಗೂ ಹಣ ಬಿಡುಗಡೆಗೆ ತಡೆ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಅಂತಹ ಮುಂದುವರೆದ ಕಾಮಗಾರಿಗಳಿಗೆ ಬಿಲ್ಲುಗಳ ನೈಜತೆ ಪರಿಶೀಲಿಸಿ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆಗೆ ಆದೇಶಿಸಿದೆ. ಕಾಂಗ್ರೆಸ್ ಸರ್ಕಾರ…

ಮುದ್ರಾಡಿ : ನದಿಯಲ್ಲಿ ಕಾಲುಜಾರಿ ಬಿದ್ದು ಮಹಿಳೆ ಸಾವು

ಹೆಬ್ರಿ :ಹೆಬ್ರಿ ತಾಲೂಕಿನ ಮುದ್ರಾಡಿಯ ಭಕ್ರೆ ಎಂಬಲ್ಲಿ ಮಹಿಳೆಯೊಬ್ಬರು ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ. ಮುದ್ರಾಡಿ ಗ್ರಾಮದ ಉಪ್ಪಳ ಶಾಲೆಗುಡ್ಡೆ ನಿವಾಸಿ ಭಾರತಿ ಪೂಜಾರಿ (49ವ) ಮೃತಪಟ್ಟವರು. ಭಾರತಿ ಅವರು ಜೂ.28ರಂದು ಮಧ್ಯಾಹ್ನ…

ನಾಳೆ (ಜೂನ್ 30) ಮುದ್ರಾಡಿ ಅಭಯಹಸ್ತೆ  ಶ್ರೀ  ಆದಿಶಕ್ತಿ ದೇವಸ್ಥಾನದಲ್ಲಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನಾ ಮಹೋತ್ಸವ

ಹೆಬ್ರಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಹಾಗೂ ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನ ಮಹೋತ್ಸವವು ಜೂನ್ 30ರಂದು ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 7ರಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ…