Month: July 2023

ಕಾರ್ಕಳ: ಮನೆ ನಿರ್ಮಾಣದ ಇಂಟೀರಿಯರ್ ಕೆಲಸಗಾರ ಕುಸಿದ್ದು ಬಿದ್ದು ಸಾವು

ಕಾರ್ಕಳ: ನೂತನ ಮನೆ ನಿರ್ಮಾಣದ ಒಳಾಂಗಣ ವಿನ್ಯಾಸದ ಕಾಮಗಾರಿ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಅಮರನಾಥ ವಾಂಗೇಯ ರಾಮ್ ವಿಶ್ವಕರ್ಮ {57) ಎಂಬವರು ತಾನು ವಾಸವಿದ್ದ ಮನೆಯ ಶೌಚಾಲಯದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪರಪು ಬಸ್ ನಿಲ್ದಾಣದ…

ನಾಳೆಯಿಂದ (ಆ.1) ಹಾಲಿನ ದರ ಹೆಚ್ಚಳ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು: ಹಲವು ಸುತ್ತಿನ ಚರ್ಚೆ, ಪರ ವಿರೋಧಗಳ ನಡುವೆ ನಾಳೆಯಿಂದ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾಗಲಿದ್ದು, ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ. ಸತತ ಮಳೆ, ಮೇವಿನ ಕೊರತೆ, ಚರ್ಮ ರೋಗ, ನಿರ್ವಹಣಾ ವೆಚ್ಚ ಸೇರಿದಂತೆ ಹಲವು ಕಾರಣಗಳಿಂದ…

ತೋಕೂರು : ಆಟಿದ ನೆಂಪು ಕಾರ್ಯಕ್ರಮ

ಮೂಲ್ಕಿ: ನೆಹರು ಯುವ ಕೇಂದ್ರ ಮಂಗಳೂರು ,ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ ತೋಕೂರು ,ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗೆ ವಿಜೇತ ಯುವಕ ಸಂಘ ತೋಕೂರು ,ರೋಟರಿ ಸಮುದಾಯದಳ ತೋಕೂರು ಇವರ ಜಂಟಿ ಸಹಯೋಗದಲ್ಲಿ ತೋಕೂರಿನ ಯುವಕ ಸಂಘದ ಸ್ವರ್ಣ ಸಭಾಂಗಣದಲ್ಲಿ…

ಕ್ರಿಯೇಟಿವ್‌ನ ಜಾಗೃತಿ ಕೆ.ಪಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಪ್ಮರ್‌ಗೆ, ಉದ್ಭವ್ ಎಂ.ಆರ್ ಏಮ್ಸ್ ಗೆ ಆಯ್ಕೆ

ಕಾರ್ಕಳ: ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊAಡಿದ್ದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್ (JIPMER) ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.…

ಮೂಡಬಿದಿರೆ ಎಕ್ಸಲೆಂಟ್‌ನಲ್ಲಿ ಮಾದಕ ವಸ್ತು ಸೇವನೆ ಜಾಗೃತಿ ಕಾರ್ಯಕ್ರಮ- ವ್ಯಸನ ಮುಕ್ತ ಸಮಾಜ ದೇಶದ ಅಭಿವೃದ್ಧಿಗೆ ಪೂರಕ- ನಿರಂಜನ್ ಕುಮಾರ್

ಮೂಡಬಿದಿರೆ: ಸಶಕ್ತ ಭಾರತದ ಆಶಾಕಿರಣವಾದ ಯುವಜನತೆ ಮಾದಕ ವಸ್ತು ಸೇವನೆಯ ಚಟಕ್ಕೆ ಬಲಿಬಿದ್ದು ತಮ್ಮ ಬದುಕನ್ನು ನಾಶ ಮಾಡಿಕೊಳ್ಳುವ ಬದಲು ನಿಸ್ವಾರ್ಥ ಚಿಂತನೆಯ ಸ್ವಸ್ಥ ಸಮಾಜವನ್ನು ರೂಪಿಸಿ ದೇಶದ ಅಭಿವೃದ್ಧಿಗೆ ಪೂರಕವಾಗಬೇಕು. ಯುವಕ-ಯುವತಿಯರು ದುಶ್ಚಟಗಳಿಗೆ ಬಲಿಯಾಗದೇ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು ಎಂದು…

ಚಂದ್ರನ ಕಕ್ಷೆ ಸೇರಲಿದೆ ಚಂದ್ರಯಾನ-3: ಇಂದು ರಾತ್ರಿ ನಡೆಯಲಿದೆ ಮಹತ್ವದ ಪ್ರಕ್ರಿಯೆ

ದೆಹಲಿ : ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಂದು ರಾತ್ರಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ (TLI) ನಡೆಸಲು ಸಜ್ಜಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ. ಬಾಹ್ಯಾಕಾಶ ನೌಕೆ ಸುಮಾರು 15 ದಿನಗಳ ಕಾಲ ಬಾಹ್ಯಾಕಾಶ ನಿರ್ವಾತದಲ್ಲಿ ಹಾರುತ್ತಿದೆ. ಇಸ್ರೋ…

ಪ್ರಯಾಣಿಕರ ತಂಗುದಾಣದೊಳಗೆ ಸತ್ತು ಬಿದ್ದಿದ್ದ ನಾಯಿಯ ಶವದ ಮೇಲೆ ಮಣ್ಣು ಸುರಿದ ಪಂಚಾಯಿತಿ ಆಡಳಿತ: ನಗೆಪಾಟಲಿಗೀಡಾದ ನಂದಳಿಕೆ ಪಂಚಾಯಿತಿ ಆಡಳಿತದ ಕ್ರಮ

ಕಾರ್ಕಳ: ಸಾಮಾನ್ಯವಾಗಿ ಯಾವುದೇ ಪ್ರಾಣಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸತ್ತುಬಿದ್ದರೆ ಅವುಗಳನ್ನು ಆಯಾ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳು ವಿಲೇವಾರಿ ಮಾಡುತ್ತವೆ. ಆದರೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಎಂಬಲ್ಲಿನ ಜನನಿಬಿಡ ಪ್ರದೇಶದಲ್ಲಿನ ಪ್ರಯಾಣಿಕರ ತಂಗುದಾಣಗೊಳಗೆ ಸತ್ತುಬಿದ್ದಿದ್ದ ನಾಯಿಯ ಕಳೇಬರವನ್ನು…

ಉಡುಪಿ: ಕಾಲೇಜಿನ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿನಿಗೆ ಬೆದರಿಕೆ ಸಂದೇಶ: ದೂರು ದಾಖಲು

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬAಧಿಸಿದAತೆ ಕಾಲೇಜಿನ ಅವ್ಯವಸ್ಥೆಗಳ ವಿರುದ್ಧ ಮಾತನಾಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಪ್ರತಿಭಟನೆಯಲ್ಲಿ ಕಾಲೇಜಿನ ಅವ್ಯವಸ್ಥೆಗಳ…

ಕಸ್ತೂರಿ ರಂಗನ್ ವರದಿ ಯಥಾವತ್ ಅನುಷ್ಠಾನ : ಅರಣ್ಯ ಸಚಿವರ ಹೇಳಿಕೆಗೆ ಶ್ರೀಧರ ಗೌಡ ಈದು ಆಕ್ಷೇಪ

ಕಾರ್ಕಳ : ಶತಮಾನಗಳಿಂದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನೆಲೆಕಂಡುಕೊAಡಿರುವ ಮಲೆಕುಡಿಯರು ಸೇರಿದಂತೆ ಇತರೆ ಅರಣ್ಯ ಅವಲಂಬಿತರು ಸಣ್ಣ ರೈತರು, ಕೃಷಿ ಕಾರ್ಮಿಕರು ಕಸ್ತೂರಿರಂಗನ್ ವರದಿ ಜಾರಿಯಿಂದ ಸಂಕಷ್ಟವನ್ನು ಎದುರಿಸುವ ಭೀತಿಯಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿ ಯಥಾವತ್ ಅನುಷ್ಠಾನ…

ಆ.3ರ ನಂತರ ಕರಾವಳಿ ಭಾಗದಲ್ಲಿ ಮತ್ತೆ ಮಳೆಯಬ್ಬರ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗಗಳಲ್ಲಿ ಆಗಸ್ಟ್ 3ರ ನಂತರ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.…