Month: July 2023

ಭಾರೀ ಮಳೆ ಹಿನ್ನೆಲೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆಯೂ ರಜೆ ಮುಂದುವರಿಕೆ

ಉಡುಪಿ/ ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆಯೂ ( ಜುಲೈ 26) ರಜೆ ಮುಂದುವರಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ…

ಮೂಡಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶಟಲ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟ ಉದ್ಘಾಟನೆ- ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ

ಮೂಡುಬಿದಿರೆ: ಜೀವನದಲ್ಲಿ ಅವಕಾಶಗಳು ತುಂಬಾ ಇದೆ. ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗೆಲುವು ಸಾಧಿಸಬೇಕು. ಯಾವುದೇ ಆಟದಲ್ಲಿ ಸೋಲು ಗೆಲುವುಗಳು ಸಾಮಾನ್ಯ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ತಾಳ್ಮೆಯಿಂದ ವರ್ತಿಸಿ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ…

ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ, ಯತ್ನಾಳ್ ವಿಪಕ್ಷ ನಾಯಕ: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಹೆಚ್.ಡಿ.ದೇವೇಗೌಡ ಹೇಳಿಕೆ!

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಪ್ರತಿಪಕ್ಷ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎನ್ನುವ ಚರ್ಚೆಗಳು ನಡೆಯುತ್ತಲ್ಲೇ ಇವೆ. ಸರ್ಕಾರದ ಮೊದಲ ಅಧಿವೇಶನ ಮುಕ್ತಾಯಗೊಂಡರೂ ಇನ್ನೂ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಪ್ರಶ್ನೆಯ ನಡುವೆ ಜೆಡಿಎಸ್ ವರಿಷ್ಠ…

ಮೂಡಬಿದಿರೆ: ಎಕ್ಸಲೆಂಟ್ ಕಾಲೇಜಿನಲ್ಲಿ ಮಾಸ ಪತ್ರಿಕೆ ಬಿಡುಗಡೆ- ಪತ್ರಿಕೆಗಳ ಮೂಲಕ ಸತ್ಯದ ಸಾಕ್ಷಾತ್ಕಾರವಾಗಲಿ: ಚಾರುಕೀರ್ತಿ ಸ್ವಾಮೀಜಿ 

ಮೂಡಬಿದಿರೆ: ವಿದ್ಯಾರ್ಥಿಗಳ ಸಾಹಿತ್ಯಾಭ್ಯಾಸ ಮತ್ತು ಸಾಹಿತ್ಯಾಭ್ಯಾಸದ ವೈಶಿಷ್ಟ್ಯಗಳಾದ ನೇರ ಹಾಗೂ ಸರಳ ಗ್ರಹಿಕೆ, ಭಾಷಾ ಸಾಮರ್ಥ್ಯ ಅಭಿವೃಧ್ಧಿ ಅಂಶಗಳ ಉತ್ತೇಜನ, ಸಾಮಾಜಿಕ ರಾಷ್ಟ್ರೀಯ ಹೊಣೆಗಾರಿಕೆ ಅರಿತುಕೊಳ್ಳಲು ಪತ್ರಿಕೆಗಳು ವೇದಿಕೆಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾ ಸ್ವಾಮೀಜಿ…

ಸರಕಾರ ಬದಲಾದರೂ ಕಾರ್ಕಳದಲ್ಲಿ ನಿಲ್ಲದ ಅಕ್ರಮ ಗಣಿಗಾರಿಕೆ: ಅಕ್ರಮ ನಿಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ: ಶುಭದ ರಾವ್ ಎಚ್ಚರಿಕೆ

ಕಾರ್ಕಳ: ರಾಜ್ಯದಲ್ಲಿ ಸರಕಾರ ಬದಲಾದರೂ ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಿಯಮಬಾಹಿರ ಗಣಿಗಾರಿಕೆ ನಡೆಯುತ್ತಿದೆ, ಇದನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಎಚ್ಚರಿಸಿದ್ದಾರೆ.…

ಕಾರ್ಕಳ: ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಕಾರ್ಕಳ : ಬೋಳ ಸುರೇಂದ್ರ ಕಾಮತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ಟ್ರಸ್ಟ್ನ ನಿರ್ದೇಶಕರಾದ ರಾಹುಲ್ ಕಾಮತ್ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯೋಜನೆ ರೂಪಿಸಿ ಸಹಯೋಗ ನೀಡಿದ ಅಮ್ಮನ ನೆರವು ಸೇವಾ ಟ್ರಸ್ಟ್…

ಉಡುಪಿ ಆಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ

ಉಡುಪಿ : ನಗರದ ಮಧ್ಯಭಾಗದಲ್ಲಿರುವ ಆಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ನಗರದ ಆಭರಣ ತಯಾರಿಕಾ ಸಂಸ್ಥೆಯು ಚಿನ್ನಾಭರಣ ತಯಾರಿಸಲು ಹಾಗೂ ಹಳೆ ಚಿನ್ನ ಮತ್ತು ಚಿನ್ನದ ಬಿಲ್ಲೆಗಳನ್ನು ಕರಗಿಸುವಾಗ ಸಲ್ಫರ್ ಉಪಯೋಗಿಸುತ್ತಿದ್ದು ಇದರಿಂದ ಹೊರಸೂಸುವ…

ಕಾರ್ಕಳ : “ಹಲೋ ಮೊಬೈಲ್ ಬೋಡ ಬೊಡ್ಚ?” ತುಳು ನಾಟಕ ಮುಹೂರ್ತ

ಕಾರ್ಕಳ : ಪಲ್ಲವಿ ಕಲಾವಿದೆರ್ ಕಾರ್ಕಳ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ಕಲಾಬ್ರಹ್ಮ” ದಿನೇಶ್ ಪ್ರಭು ಕಲ್ಲೊಟ್ಟೆ ನೇತೃತ್ವದಲ್ಲಿ ಪ್ರಶಾಂತ್ ಪರಪ್ಪಾಡಿ ರಚಿಸಿರುವ ,ಭವಾನಿ ಪೇರಡ್ಕ ನಿರ್ದೇಶನದ ಸದಾನಂದ ನಾಯ್ಕ ದುರ್ಗ ಅಭಿನಯದಲ್ಲಿ “ಹಲೋ ಮೊಬೈಲ್ ಬೊಡ ಬೊಡ್ಚ?” ಎಂಬ…

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ. ಕೊ.ಅ. ಉಡುಪರ ಸಂಸ್ಮರಣಾ ಸಮಾರಂಭ

ಕಿನ್ನಿಗೋಳಿ : ಕಲೆ, ಸಂಸ್ಕೃತಿ ಪೋಷಣೆಯ ಜೊತೆ ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಕಳಕಳಿಯ ಕಾರ್ಯ ಶ್ಲಾಘನೀಯ ಎಂದು ಕ್ಯಾಂಪ್ಕೋ ಮಂಗಳೂರು ಅಧ್ಯಕ್ಷರಾದ ಕಿಶೋರ್ ಕುಮಾರ್ ಕೋಡ್ಗಿ ಹೇಳಿದರು. ಅವರು ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆಯನ್ನು…

ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ಪ್ರಕರಣ- ನಾಪತ್ತೆಯಾಗಿರುವ ಜುನೈದ್‌ ಪ್ರಿಯತಮೆ ಬಗ್ಗೆ ಮಾಹಿತಿ ಲಭ್ಯ

ಬೆಂಗಳೂರು : ಬೆಂಗಳೂರು ನಗರದಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಇ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಐವರು ಶಂಕಿತ ಉಗ್ರರ ಬಂಧನವಾದ ಬೆನ್ನಲ್ಲೇ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್‌ನಲ್ಲಿ ಅಡಕವಾಗಿರುವ ರಹಸ್ಯಗಳನ್ನು ಸಿಸಿಬಿ ಶೋಧಿಸುತ್ತಿದೆ. ಪ್ರಮುಖ…