Month: August 2023

ಮೂಡಬಿದಿರೆ : ಕಲ್ಲಮುಂಡ್ಕೂರು ಸಾಲ್ಯಾನ್ ಕುಟುಂಬಸ್ಥರ ನಾಗ ಬನದಲ್ಲಿ ಸಂಭ್ರಮದ ನಾಗರ ಪಂಚಮಿ

ಮೂಡಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ತೊಡಂಕಿಲ ಸಾಲ್ಯಾನ್ ಕುಟುಂಬಸ್ಥರ ನಾಗರ ಬನದಲ್ಲಿ ನಾಗರ ಪಂಚಮಿ ದಿನ ನೂರಾರು ಭಕ್ತರು ನಾಗಬನಕ್ಕೆ ಆಗಮಿಸಿ ಶ್ರದ್ಧಾ ಭಕ್ತಿಯಿಂದ ನಾಗದೇವರಿಗೆ ಹಾಲು ಸಿಯಾಳ ಅಭಿಷೇಕದೊಂದಿಗೆ ನಾಗದೇವರ ಪೂಜೆ ಮಾಡಿ ಕೃತಾರ್ಥರಾದರು. ತುಳುನಾಡು ಹಿಂದೆ ನಾಗಬನ ಖಂಡವೆಂದು…

14ನೇ ಹಣಕಾಸು ಆಯೋಗದಿಂದ 11,495 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ವಿತ್ತಸಚಿವೆ ನಿರ್ಮಲಾ ಸೀತರಾಮನ್‌ಗೆ ಸಿಎಂ ಪತ್ರ

ಬೆಂಗಳೂರು :14ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಪಾವತಿ ಬಾಕಿಯಿರುವ 11,495 ಕೋಟಿ ರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೇಂದ್ರ ಹಣಕಾಸು ಆಯೋಗದ ವರದಿ ಅನ್ವಯ ಹಣಕಾಸು ಹಂಚಿಕೆಯಲ್ಲಿ…

ಗೃಹಜ್ಯೋತಿ ಯೋಜನೆಗೆ ಎಸ್ಕಾಂಗಳಿಗೆ ಮುಂಗಡ ಸಹಾಯಧನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಗೃಹಬಳಕೆಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿರುವ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ರಾಜ್ಯ ಸರ್ಕಾರವು ರಾಜ್ಯದ ಮುಂಗಡ ಹಣವನ್ನು ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು 5 ಎಸ್ಕಾಂಗಳಿಗೆ ಜುಲೈ ತಿಂಗಳ ಮಾಹೆಯಲ್ಲಿ ಒಟ್ಟು 476 ಕೋಟಿ ರೂಪಾಯಿ ಬಿಡುಗಡೆ…

ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಡಾ.ರಾಜ್ ಶೇಖರ್ ಕೋಟ್ಯಾನ್ ಪುನರಾಯ್ಕೆ

ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ 2023-24ನೇ ಸಾಲಿನ ಅಧ್ಯಕ್ಷರಾಗಿ ಚಲನಚಿತ್ರ ನಟ,ನಿರ್ಮಾಪಕ ಡಾ.ರಾಜ್ ಶೇಖರ್ ಕೋಟ್ಯಾನ್ ಪುನರಾಯ್ಕೆಯಾಗಿದ್ದಾರೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಭಾಂಗಣದಲ್ಲಿ ನಡೆದ 2022 -23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಡಾ. ರಾಜಶೇಖರ್ ಕೋಟ್ಯಾನ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.…

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿಪಾಲಿಸಿ, ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿ: ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ 2023-24ನೇ ರ ಸಾಲಿನ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಚಲನಚಿತ್ರ ನಟ,ನಿರ್ಮಾಪಕ ಡಾ.ರಾಜಶೇಖರ್ ಕೋಟ್ಯಾನ್ ರವರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಮುಲ್ಕಿಯ ತಮ್ಮ ಆಶ್ರಮದಲ್ಲಿ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:22.08.2023, ಮಂಗಳವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಶ್ರಾವಣ ಮಾಸ ಶುಕ್ಲಪಕ್ಷ, ನಕ್ಷತ್ರ: ಚಿತ್ರಾ, ರಾಹುಕಾಲ 03:41 ರಿಂದ 05:14 ಗುಳಿಕಕಾಲ-12:34 ರಿಂದ 02:07 ಸೂರ್ಯೋದಯ (ಉಡುಪಿ) 06:20 ಸೂರ್ಯಾಸ್ತ – 06:48 ದಿನ ವಿಶೇಷ: ಕಲ್ಕಿ ಜಯಂತಿ…

ಬಜಗೋಳಿ: ಸ್ಕೂಟಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಮೂವರಿಗೆ ಗಾಯ

ಕಾರ್ಕಳ: ಚಲಿಸುತ್ತಿದ್ದ ಸ್ಕೂಟರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಸೇರಿ ಮೂವರಿಗೆ ಗಾಯಗಳಾಗಿವೆ. ನಲ್ಲೂರು ಗ್ರಾಮದ ಬೀರಾಲುಪೇಟೆ ಎಂಬಲ್ಲಿನ ನಿವಾಸಿ ಚೇತನಾ ಎಂಬವರು ಭಾನುವಾರ ಬೆಳಗ್ಗೆ 9.40ರ ಸುಮಾರಿಗೆ ತನ್ನ ಸ್ಕೂಟರಿನಲ್ಲಿ ಸಹಸವಾರಾಗಿ ಆಕೆಯ ಅಕ್ಕನಮಗ ಪ್ರಾಣೇಶ್ ಹಾಗೂ…

ಶಿರ್ಲಾಲು: ಹರ್ನಿಯಾ ಶಸ್ತ್ರಚಿಕಿತ್ಸೆ ಪಡೆದು ಮನೆಗೆ ಬಂದಿದ್ದ ಯುವಕ ಸಾವು

ಅಜೆಕಾರು: ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ಬಳಿಕ ಮತ್ತೆ ಗಾಯ ಉಲ್ಬಣಗೊಂಡು ತೀವೃ ವಾಂತಿ ಹಾಗೂ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಮಾನಂದ…

ಬೆಳ್ಮಣ್: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ: ಪಾದಾಚಾರಿ ಸ್ಥಳದಲ್ಲೇ ಸಾವು

ಕಾರ್ಕಳ: ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿನ ಬೆಳ್ಮಣ್ ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅತೀವೇಗವಾಗಿ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ತೀವೃವಾಗಿ ಗಾಯಗೊಂಡು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕಾರು ಚಾಲಕ…

ಚಾರ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ: ಬಿಜೆಪಿಗೆ ಬಹುಮತವಿದ್ದರೂ ಒಲಿಯದ ಅಧ್ಯಕ್ಷ ಪಟ್ಟ! ಅಧ್ಯಕ್ಷ ಗಾಧಿ ಕಾಂಗ್ರೆಸ್ ಗೆ, ಉಪಾಧ್ಯಕ್ಷ ಬಿಜೆಪಿ ತೆಕ್ಕೆಗೆ

ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ದಿನೇಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೃಷ್ಣನಾಯ್ಕ್ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಬಿಜೆಪಿ ಸಮಬಲದ ಹೋರಾಟ ನೀಡಿದೆ.…