Month: August 2023

ಕಲ್ಲಮುಂಡ್ಕೂರು: ಘನತ್ಯಾಜ್ಯ ಘಟಕ ಉದ್ಘಾಟನೆ

ಮೂಡಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗೇರಪದವು ಎಂಬಲ್ಲಿ ಸುಮಾರು 18 ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ಘಟಕ ಮತ್ತು ಸ್ವಚ್ಛತಾ ವಾಹನದ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿಯ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಶವ ಪೂಜಾರಿ…

ನೂರು ದಿನದೊಳಗೆ 100 ಪರ್ಸೆಂಟ್ ಸರ್ಕಾರ : ಕಾಂಗ್ರೆಸ್ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ಲೇವಡಿ

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ತುಂಬುವಷ್ಟರಲ್ಲಿ 100 ಪರ್ಸೆಂಟ್ ಸರ್ಕಾರವಾಗಲಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ. ಗುತ್ತಿಗೆದಾರ ಗೌತಮ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕೆ ಬಂದ ಮರು ದಿನದಿಂದಲೇ…

ಆ.13ರಂದು ಕಡ್ತಲದ ಸಿರಿಬೈಲಿನಲ್ಲಿ ಕೆಸರ್ ಡ್ ಒಂಜಿ ದಿನ ಕ್ರೀಡಾಕೂಟ

ಕಾರ್ಕಳ: ಸಿರಿಬೈಲು ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾಸಂಘ ಕಡತಲ ಇದರ ವತಿಯಿಂದ ಆಗಸ್ಟ್ 13ರಂದು ಭಾನುವಾರ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮವು ಸಿರಿಬೈಲು ಕ್ರಷರ್ ಬಳಿಯ ಕುರೆಬೆಟ್ಟು ಗದ್ದೆಯಲ್ಲಿ ನಡೆಯಲಿದೆ. ಕೆಸರುಗದ್ದೆ ಕ್ರೀಡಾಕೂಟಕ್ಕೆ ಎಲ್ಲಾ…

ಬಾಡಿಗೆದಾರ ಹಾಗೂ ಮಾಲೀಕರ ನಡುವಿನ ಜಟಾಪಟಿ: ಮೂಡಬಿದಿರೆ ಅಮರಶ್ರೀ ಚಿತ್ರಮಂದಿರ ಬಂದ್! ಪರವಾನಗಿ ನವೀಕರಿಸದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಳಿಸಿ ಡಿಸಿ ಆದೇಶ

ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಮೂಡಬಿದಿರೆ ಪರಿಸರದಲ್ಲಿ ಮನೆಮಾತಾಗಿದ್ದ ಅಮರಶ್ರೀ ಚಿತ್ರಮಂದಿರದ ಪರವಾನಿಗೆ ನವೀಕರಣವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಎಲ್ಲಾ ಚಲನಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿತಗೊಳಿಸುವಂತೆ ಹಾಗೂ ಹಾಲಿ ಪರವಾನಿಗೆಯನ್ನು ರದ್ದುಪಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬಾಡಿಗೆದಾರ ಹಾಗೂ ಚಿತ್ರಮಂದಿರದ ಮಾಲಕರ…

ಸೈಬರ್ ಭದ್ರತೆಗಾಗಿ ರಾಜ್ಯಕ್ಕೆ ಪ್ರತ್ಯೇಕ ನೀತಿ: ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಸೈಬರ್ ಭದ್ರತೆ, ಸೈಬರ್ ಅಪರಾಧ ತಡೆ ಹಾಗೂ ದತ್ತಾಂಶ ಖಾಸಗಿತನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್ ನೀತಿ 2023 ರಚನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು,…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:11.08.2023, ಶುಕ್ರವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು,ಅಧಿಕ ಶ್ರಾವಣ ಮಾಸ ಕೃಷ್ಣಪಕ್ಷ, ನಕ್ಷತ್ರ:ಮೃಗಶಿರಾ, ರಾಹುಕಾಲ 11:02 ರಿಂದ 12:36 ಗುಳಿಕಕಾಲ-07:53 ರಿಂದ 09:28 ಸೂರ್ಯೋದಯ (ಉಡುಪಿ) 06:19 ಸೂರ್ಯಾಸ್ತ – 06:53 ದಿನ ವಿಶೇಷ: ಏಕಾದಶಿ ರಾಶಿ ಭವಿಷ್ಯ:…

ಉಡುಪಿ: ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕು: ಅಧಿಕಾರಿಗಳಿಗೆ ಜಿ.ಪಂ ಸಿಇಓ ಖಡಕ್ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿನ ನೀರು ಯಾವುದೇ ರೀತಿಯಲ್ಲಿ ಕಲುಷಿತವಾಗಿರದೇ, ಕುಡಿಯಲು ಯೋಗ್ಯವಾಗಿರುವಂತೆ ಪರಿಶೀಲಿಸಿ, ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಖಡಕ್ ಸೂಚನೆ ನೀಡಿದ್ದಾರೆ.…

ಪ್ರತಿಪಕ್ಷ ನಾಯಕನ ಸ್ಥಾನ ಆಗಸ್ಟ್ 15ರ ಬಳಿಕ ನಿರ್ಧಾರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದ ಕುರಿತು ಆಗಸ್ಟ್ 15 ರ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪಕ್ಷದ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು…

ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಕಾರ್ಕಳ : ಕಂಪೆನಿ ಸೆಕ್ರೆಟರಿ (ಸಿಎಸ್) ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಮಂಜುನಾಥ ಭಟ್, ಶ್ರೀಯಾ ಕೆ ಎಸ್, ಶ್ರಾವ್ಯ ಭಟ್ ಎಸ್, ಪ್ರಣೀತಾ, ಧನುಷ್ ಡಿ ಡಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.…

ಪಡುಪಣಂಬೂರು: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಸುಮಾ ಚಂದ್ರಶೇಖರ್ ಆಯ್ಕೆ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಪಡುಪಣಂಬೂರು ಗ್ರಾಮ ಪಂಚಾಯತ್ ಗೆ ಮುಂದಿನ ಎರಡುವರೆ ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಕುಸುಮಾ ಚಂದ್ರಶೇಖರ್ ಹಾಗೂ ಉಪಾಧ್ಯಕ್ಷರಾಗಿ ಹೇಮನಾಥ ಅಮಿನ್ ತೋಕೂರು ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಲೋಕೇಶ್,…