Month: August 2023

ಇಂದು (ಆಗಸ್ಟ್ 8) ಮುಂಡ್ಕೂರು ಜೆ ಸಿ ಐ ಗೆ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧಿಕೃತ ಭೇಟಿ

ಕಾರ್ಕಳ: ಜೆಸಿಐ ವಲಯ 15ರ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಇಂದು ಸಂಜೆ ಮುಂಡ್ಕೂರು ಜೆಸಿಐಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜೆಸಿ ವಲಯ 15ರ ಉಪಾಧ್ಯಕ್ಷ ಜೆಸಿ ಸುಧಾಕರ ಆಚಾರ್ಯ ಉಪಸ್ಥಿತರಿರುವರು. ಇಂದು ಸಂಜೆ 4 ಗಂಟೆಗೆ ಮುಂಡ್ಕೂರು…

ರಾಜ್ಯದ ಜನರ ಅಹವಾಲುಗಳ ತ್ವರಿತ ಸ್ಪಂದನೆಗೆ ಕಂದಾಯ ಆಯುಕ್ತಾಲಯ ಅಸ್ತಿತ್ವಕ್ಕೆ: ಕಂದಾಯ ಇಲಾಖೆಗೆ ಒಳಪಟ್ಟ 8 ಕಚೇರಿಗಳು ವಿಲೀನ

ಬೆಂಗಳೂರು:ಜನರ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರು ನಡಾವಳಿ ಹೊರಡಿಸಿದ್ದು, ಆಡಳಿತದ ಹಿತದೃಷ್ಟಿಯಿಂದ ಕೆಲಸದ ಪ್ರಕ್ರಿಯೆಗಳನ್ನು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:08.08.2023, ಮಂಗಳವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು,ಅಧಿಕ ಶ್ರಾವಣ ಮಾಸ ಕೃಷ್ಣಪಕ್ಷ, ನಕ್ಷತ್ರ:ಭರಣಿ, ರಾಹುಕಾಲ 03:46 ರಿಂದ 05:20 ಗುಳಿಕಕಾಲ-12:37 ರಿಂದ 02:11 ಸೂರ್ಯೋದಯ (ಉಡುಪಿ) 06:18 ಸೂರ್ಯಾಸ್ತ – 06:55 ರಾಶಿ ಭವಿಷ್ಯ: ಮೇಷ ರಾಶಿ (Aries)…

ಹಿರ್ಗಾನ: ಕಾರು ಬೈಕ್ ಡಿಕ್ಕಿ: ಸವಾರ ಗಂಭೀರ

ಕಾರ್ಕಳ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಗ್ರಾಮದ ಕಾನಂಗಿ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದಿದೆ ಬೈಕ್ ಸವಾರ ಹಿರ್ಗಾನ ಗ್ರಾಮದ ಹಾರ್ಜೆಡ್ಡು ನಿವಾಸಿ ಅಜಯ್( 18)…

ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಅನುಕಂಪದ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆ: ಅನುಕಂಪದ ನೌಕರಿಯ ನೇಮಕಾತಿಗೆ ತಾತ್ಕಾಲಿಕ ತಡೆ

ಬೆಂಗಳೂರು:ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿನ ಖಾಲಿ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ನಡೆಯುವ ನೇಮಕಾತಿಗಳಿಗೆ ಸರ್ಕಾರ ಮುಂದಿನ ಆದೇಶದವರೆಗೆ ತಾತ್ಕಾಲಿಕ ತಡೆ ನೀಡಿದ್ದು,ಇದರಿಂದ ನೌಕರಿ ಸಿಗುತ್ತದೆ ಎನ್ನುವ ನಿರೀಕ್ಷೆಯಿಟ್ಟುಕೊಂಡವರಿಗೆ ಸರ್ಕಾರದ ಈ ಅದೇಶ ಬಿಗ್ ಶಾಕ್ ನೀಡಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು…

ಉಡುಪಿ ಕಾಲೇಜು ವಿಡಿಯೋ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ : ರಾಜ್ಯ ಸರ್ಕಾರ ಮಹತ್ವದ ಆದೇಶ

ಉಡುಪಿ: ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ…

ಕೃಷಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗೆ ಬಳಕೆ: ಕಾಂಗ್ರೆಸ್​ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ

ಶಿವಮೊಗ್ಗ: ಕಾಂಗ್ರೆಸ್ ಬಂದ ಬಳಿಕ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿ ಕೃಷಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರ…

ತೋಕೂರು: ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಹಳೆಯಂಗಡಿ: ತೋಕೂರು ಮದ್ದೇರಿ ದೈವಸ್ಥಾನ ಜೀರ್ಣೋದ್ಧಾರದ ಪರಿಹಾರ ಕಾರ್ಯಕ್ರಮದ ಅಂಗವಾಗಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಹರಿದಾಸ್ ಭಟ್, ಅಧ್ಯಕ್ಷ ಪದ್ಮನಾಭ ಪಿ. ಆಚಾರ್ಯ, ಉಪಾಧ್ಯಕ್ಷ ಮೋಹನ್ ದಾಸ್, ಕಾರ್ಯದರ್ಶಿ ಹೇಮಾನಾಥ…

ಮೂಡುಬಿದಿರೆ ಎಕ್ಸಲೆಂಟ್‌ನಲ್ಲಿ ಸಂವಾದ ಕಾರ್ಯಕ್ರಮ- ಆಧ್ಯಾತ್ಮ ನಮ್ಮೆಲ್ಲರನ್ನು ಬೆಸೆಯುವ ತಂತು: ಶಾಜಿಯಾ ಇಲ್ಮಿ

ಮೂಡುಬಿದಿರೆ: ಹದಿಹರೆಯದಲ್ಲಿ ವ್ಯವಸ್ಥೆಯ ವಿರುದ್ಧ ಅಸಹನೆ, ಅಕ್ರೋಷ ಇರುತ್ತದೆ. ಹಲವಾರು ಸವಾಲುಗಳನ್ನು ನಾವು ಈ ವಯಸ್ಸಿನಲ್ಲಿ ಎದುರಿಸುತ್ತೇವೆ. ಆದರೆ ನಿಮ್ಮ ಸಿಟ್ಟನ್ನು ಧನಾತ್ಮಕ ಉದ್ದೇಶಕ್ಕಾಗಿ ವಿನಿಯೋಗಿಸುವುದರ ಮೂಲಕ ಜೀವನದಲ್ಲಿ ಸಾರ್ಥಕ್ಯವನ್ನು ಕಾಣಬಹುದು ಎಂದು ಮಾಜಿ ಪತ್ರಕರ್ತೆ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ…

ಜಮ್ಮು-ಕಾಶ್ಮೀರ: ಭಾರತ ಒಳನುಸುಳಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರ ಹತ್ಯೆ-ಮುಂದುವರಿದ ಕಾರ್ಯಚರಣೆ

ಶ್ರೀನಗರ : ಇಂದು (ಆ.7) ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭದ್ರತಾ ಪಡೆ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಭಯೋತ್ಪಾದಕರ ಜತೆಗೆ…