Month: September 2023

ಮಂಗಳೂರಿನಲ್ಲಿ ದೇಶದ ಪ್ರಥಮ ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆ : ಇಂಧನ ಸಚಿವ ಕೆ.ಜೆ ಜಾರ್ಜ್‌

ಬೆಂಗಳೂರು: ಭವಿಷ್ಯದಲ್ಲಿ ವಿದ್ಯುತ್ ಕೊರತೆ ನೀಗಿಸಲು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲೇ ಕ್ರಾಂತಿಕಾರಕ ಹೆಜ್ಜೆ ಇಡಲು ರಾಜ್ಯ ಸರ್ಕಾರ ಮುಂದಾಗಿದ್ದು, ‘ಭವಿಷ್ಯದ ಇಂಧನ‘ ಎಂದೇ ಕರೆಯಲ್ಪಡುವ ‘ಗ್ರೀನ್ ಹೈಡ್ರೋಜನ್‌‘ ಉತ್ಪಾದನೆಗೆ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ನಿರ್ಮಾಣಕ್ಕೆ ತೀರ್ಮಾನಿಸಿದೆ. ಈ ಬಗ್ಗೆ…

ಮಹಿಳೆಯರಿಗೆ ರಾಜಕೀಯದಲ್ಲಿ ಶೇ 33ರ ಮೀಸಲಾತಿ ಮಸೂದೆ ಕಾಂಗ್ರೆಸ್ ಸರ್ಕಾರದ ಅವಧಿಯ ಸಾಧನೆ: ಬಿಪಿನ್ ಚಂದ್ರಪಾಲ್

ಉಡುಪಿ: ಲೋಕಸಭೆ ಹಾಗೂ ವಿಧಾನಸಭೆಗಳ ಸದಸ್ಯರ ಪೈಕಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಮಸೂದೆಯನ್ನು 2008ರಲ್ಲೇ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಜಾರಿಗೊಳಿಸಲು‌ ಉದ್ದೇಶಿಸಿದ್ದ ಮಸೂದೆ ಇಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಂಗೀಕಾರವಾಗಿರುವುದು ಸ್ವಾಗತಾರ್ಹ,ಆದರೆ ಈ ಮಸೂದೆ ಕಾಂಗ್ರೆಸ್…

ಮೂಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಬೆದ್ರ ವತಿಯಿಂದ ಗಣಪನಿಗೆ ಬೆಳ್ಳಿಯ ಕಬ್ಬು ಹಾಗೂ ಚಾಮರ ಸಮರ್ಪಣೆ

ಮೂಡುಬಿದಿರೆ: ಸಾಮಾಜಿಕ ಧಾರ್ಮಿಕ ಸೇವಾ ಮನೋಭಾವನೆಯಿಂದ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ 15 ವರ್ಷ ಪೂರೈಸಿದ ಸಂಭ್ರಮದಲ್ಲಿ ಇಂದು ಮೂಡಬಿದಿರೆಯ 60ನೇ ವರ್ಷದ ಗಣೇಶೋತ್ಸವದ ಗಣಪನಿಗೆ ಬೆಳ್ಳಿಯ ಕಬ್ಬು ಹಾಗೂ ಒಂದು ಜೊತೆ ಚಾಮರವನ್ನು ಸಮರ್ಪಿಸಿದ್ದಾರೆ. ಈ…

ಕಾರ್ಕಳ : ಸೆ. 24ರಂದು ವಿಶ್ವ ಹೃದಯ ದಿನಾಚರಣೆ ಅಂಗವಾಗಿ “ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮ

ಕಾರ್ಕಳ:ರೋಟರಿ ಕ್ಲಬ್‌ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ವತಿಯಿಂದ ಕಾರ್ಕಳ ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 24ರಂದು ಕಾರ್ಕಳದಲ್ಲಿ ಹೃದಯಕ್ಕಾಗಿ ನಡಿಗೆ” ಕಾರ್ಯಕ್ರಮ ಆಯೋಜಿಸಲಾಗಿದೆ.…

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಗ್ಯಾರಂಟಿ ಯೋಜನೆ ಜಾರಿಗೆ ಸಿದ್ಧತೆ!: ಡಿಸೆಂಬರ್ ಅಂತ್ಯದೊಳಗೆ ಯುವನಿಧಿ ಯೋಜನೆ ಜಾರಿ ಸಾಧ್ಯತೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣಾಪೂರ್ವದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಇದೀಗ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆಗೊಳಿಸಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯುವನಿಧಿ ಯೋಜನೆ ಜಾರಿ ಕುರಿತು ಸಚಿವ ಡಾ.ಶರಣಪ್ರಕಾಶ್…

ನಮ್ಮನ್ನು ಸುಮ್ಮನೆ ಕೆಣಕಿದರೆ ಮಸೀದಿಯಲ್ಲೂ ಗಣೇಶ ಪ್ರತಿಷ್ಠಾಪಿಸುತ್ತೇವೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಹುಬ್ಬಳ್ಳಿ: ಹಿಂದೂ ಸಮಾಜವನ್ನು ಸುಮ್ಮನೆ ಕೆಣಕಿದರೆ ಮುಂದೆ ಮಸೀದಿಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಅವರು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇರಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಪೂರ್ವದಲ್ಲಿ ಮೂರ್ತಿಗೆ…

ಚಂದ್ರನ ಅಂಗಳದಲ್ಲಿ ಇಂದು ಸೂರ್ಯೋದಯ ಹಿನ್ನೆಲೆ: ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮತ್ತೆ ಸಕ್ರಿಯಗೊಳಿಸಲು ಇಸ್ರೋ ಯತ್ನ

ಬೆಂಗಳೂರು: ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿದ್ದ ಲ್ಯಾಂಡರ್ ಹಾಗೂ ರೋವರ್ ಉಪಕರಣಗಳನ್ನು ಇದೀಗ ಮತ್ತೆ 14 ದಿನಗಳ ನಿದ್ರೆಯಿಂದ ಎಚ್ಚರಿಸಲು ಇಸ್ರೋ ಶುಕ್ರವಾರ ಪ್ರಯತ್ನಿಸಲಿದೆ.ಒಂದುವೇಳೆ ಈ ಪ್ರಯತ್ನ ಸಫಲವಾದಲ್ಲಿ ಇನ್ನೂ 14 ದಿನಗಳ ಕಾಲ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:22.09.2023, ಶುಕ್ರವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ) ಶುಕ್ಲಪಕ್ಷ, ನಕ್ಷತ್ರ:ಜ್ಯೇಷ್ಠಾ, ರಾಹುಕಾಲ 10:53 ರಿಂದ 12:24 ಗುಳಿಕಕಾಲ-07:52 ರಿಂದ 09:22 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:26 ರಾಶಿ ಭವಿಷ್ಯ: ಮೇಷ ರಾಶಿ (Aries)…

ಉದ್ಯಮಿಗೆ ಹಣ ವಂಚನೆ ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಆರೋಪಿ ಚೈತ್ರಾ ಕುಂದಾಪುರ

ಬೆಂಗಳೂರು: ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು ಐದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಕುರಿತಂತೆ ಪ್ರಮುಖ ಆರೋಪಿ ಆಗಿರುವಂತಹ ಚೈತ್ರ ಕುಂದಾಪುರ ಸಿಸಿಬಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದು ತನ್ನ ತಪ್ಪನ್ನು…

ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ್ ಹೆಮ್ಮನಬೈಲು ಹೃದಯಾಘಾತದಿಂದ ವಿಧಿವಶ

ಉತ್ತರಕನ್ನಡ: ಜಿಲ್ಲೆಯ ಸಿದ್ಧಾಪುರದ ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ್ ಹೆಮ್ಮನಬೈಲ್(57) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಡಗುತಿಟ್ಟಿನ ಮೇರು ಕಲಾವಿದರ ಪೈಕಿ ರಾಮಚಂದ್ರ ನಾಯ್ಕ್ ಒಬ್ಬರಾಗಿದ್ದು,ಬಯಲಾಟದ ಮೇಳದಿಂದ ಹಿಡಿದು ಡೇರೆ ಮೇಳದವರೆಗೆ ಯಕ್ಷರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ…