Month: September 2023

ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಪರೀಕ್ಷೆಯ ವಿಚಾರ ಮುಗಿಯದ ಗೊಂದಲ: ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ. ಎನ್ ಭೇಟಿ-ತಿಂಗಳೊಳಗಾಗಿ ಪ್ರತಿಮೆಯ ನೈಜತೆ ಪರೀಕ್ಷೆಯ ಕುರಿತು ಮೌಖಿಕ ಭರವಸೆ

ಕಾರ್ಕಳ:ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಪರೀಕ್ಷೆಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ. ಎನ್ ಗುರುವಾರ ಭೇಟಿ ನೀಡಿ ಪ್ರತಿಭಟನಾನಿರತರ…

ಹೆಬ್ರಿ: ಆರಕ್ಷಕ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ “ತೆರೆದ ಮನೆ” ಕಾರ್ಯಕ್ರಮ

ಹೆಬ್ರಿ : ಹೆಬ್ರಿ ಆರಕ್ಷಕ ಠಾಣೆಯಲ್ಲಿ ಅಮೃತ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಹಾಗೂ ಕಾನೂನಿನ ಕುರಿತು ಮಾಹಿತಿ ‌ನೀಡುವ ತೆರೆದ ಮನೆ ಕಾರ್ಯಕ್ರಮ ಇಂದು (ಸೆ.7) ಜರುಗಿತು. ಪೊಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಮ ಪ್ರಭು ಮಾತನಾಡಿ,…

ಸನಾತನ ಧರ್ಮ ಏಡ್ಸ್ ಮತ್ತು ಕುಷ್ಟರೋಗವಿದ್ದಂತೆ : ಡಿಎಂಕೆ ಸಂಸದ ಎ.ರಾಜಾ ವಿವಾದಾತ್ಮಕ ಹೇಳಿಕೆ

ಚೆನ್ನೈ: ಸನಾತನ ಧರ್ಮ ಏಡ್ಸ್ ಮತ್ತು ಕುಷ್ಟರೋಗವಿದ್ದಂತೆ ಎಂದು ಡಿಎಂಕೆ ಸಂಸದ ಎ. ರಾಜಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸನಾತನ ಧರ್ಮ ಮಲೇರಿಯಾ, ಡೆಂಘಿ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕೆಂದು ಸಚಿವ…

ಕಾರ್ಕಳ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಆಯ್ಕೆ

ಕಾರ್ಕಳ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ ಇದರ 16ನೇ ವರ್ಷದ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ಪುನರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಜಗದೀಶ್ ಮಲ್ಯ, ಉಪಾಧ್ಯಕ್ಷರಾಗಿ ರಾಜರಾಮ್ ಕಾಮತ್, ವಸಂತ ಪ್ರಭು, ಶಿವಾಜಿರಾವ್, ಕಾರ್ಯದರ್ಶಿಯಾಗಿ ಇಕ್ಬಾಲ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ…

ಗೃಹಲಕ್ಷ್ಮೀ ಯೋಜನೆ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರಿಗೆ (ಮನೆ ಯಜಮಾನಿಗೆ) 2000 ರೂ. ಸಹಾಯಧನ ನೀಡುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಸರ್ಕಾರ ಸ್ಥಗಿತಗೊಳಿಸಿದೆ. ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಸರಕಾರವು ಇದುವರೆಗೆ ನೋಂದಾಯಿತ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ…

ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನ : ಹೆಬ್ರಿ ಅಮೃತಭಾರತಿಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಹೆಬ್ರಿ : ಇತ್ತೀಚೆಗೆ ಗುಲ್ಬರ್ಗಾದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಹೆಬ್ರಿ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಣಮ್ ಮತ್ತು ಪವನ್ ಪ್ರಥಮ ಸ್ಥಾನವನ್ನು ಮತ್ತು 9ನೇ ತರಗತಿಯ ಪ್ರಣವ್ ರಾಯ್ಕರ್…

ಉಡುಪಿ:ಶ್ರೀಕೃಷ್ಣನ ನಗರಿಯಲ್ಲಿ ಶ್ರದ್ಧಾ ಭಕ್ತಿಯ ಕೃಷ್ಣಜನ್ಮಾಷ್ಟಮಿ : ಇಂದು ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ

ಉಡುಪಿ :ರಾಜ್ಯಾದ್ಯಂತ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಕೃಷ್ಣನೂರು ಉಡುಪಿಯ ಶ್ರೀಕೃಷ್ಣ ಮಠ ಹಬ್ಬದ ರಂಗಿನಿಂದ ಕಂಗೊಳಿಸಿದೆ. ದೇಗುಲದ ತುಂಬೆಲ್ಲಾ ವಿಶೇಷ ಅಲಂಕಾರ, ಭಕ್ತರಿಂದ ಜಪ ತಪ, ಪುರದ ತುಂಬ ಹುಲಿ ವೇಷಗಳ ಕಲರವ, ಕಡೆಗೋಲು ಕೃಷ್ಣನ ನಗರಿಯಲ್ಲಿ ಎರಡು ದಿನ…

ಮಕ್ಕಳ ಗುಂಪಿನ ಮೇಲೆ ಹರಿದ ಬಸ್: ಇಬ್ಬರ ಸ್ಥಿತಿ ಗಂಭೀರ

ಚಿಕ್ಕಮಗಳೂರು: ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ಸು ಹರಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್ ಲ್ಲಿ ಇಂದು (ಗುರುವಾರ) ಬೆಳಗ್ಗೆ ನಡೆದಿದೆ. ತುಳಸಿ (15) ಮತ್ತು ನಿವೇದಿತ…

ಸೆ.10 ರಂದು ಅಜೆಕಾರಿನಲ್ಲಿ ಮೊಸರು ಕುಡಿಕೆ ಉತ್ಸವ

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಅಜೆಕಾರು ವಲಯ ಇದರ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆಪ್ಟೆಂಬರ್ 10 ಭಾನುವಾರದಂದು ಮಧ್ಯಾಹ್ನ 2 ಗಂಟೆಯಿಂದ ಅಜೆಕಾರು ಪೇಟೆಯಲ್ಲಿ ನಡೆಯಲಿದೆ. ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಪುರುಷರಿಗೆ,…

ತಲೆಮರೆಸಿಕೊಂಡಿದ್ದ ಐಸಿಸ್ ಉಗ್ರ ಸೈಯದ್ ನಬೀಲ್ ಬಂಧನ: ತಮಿಳುನಾಡಿನಲ್ಲಿ ಉಗ್ರನನ್ನು ಬಂಧಿಸಿದ ಎನ್‌ಐಎ

ನವದೆಹಲಿ: ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಐಸಿಸ್ ಉಗ್ರ ಸೈಯದ್ ನಬೀಲ್‌ನನ್ನು ತಮಿಳುನಾಡಿನಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈತ ತ್ರಿಶೂರ್ ಮೂಲದ ಘಟಕದ ಐಸಿಸ್ ಉಗ್ರ ಸಂಘಟನೆಯ ನಾಯಕನಾಗಿದ್ದಾನೆ. ಸೈಯದ್ ಕೇರಳದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ. ಈತನ ಸಂಚು ಬಯಲಾದ ಹಿನ್ನೆಲೆ…