Month: December 2023

ಉಡುಪಿ: ಚಿಕಿತ್ಸೆ ನೀಡುತ್ತಿದ್ದಾಗಲೇ ವೈದ್ಯೆಗೆ ಹೃದಯಾಘಾತ: ನಿವೃತ್ತ ವೈದ್ಯೆ ಡಾ.ಶಶಿಕಲಾ ನಿಧನ

ಉಡುಪಿ: ವೈದ್ಯೆಯೊಬ್ಬರು ರೋಗಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ತೀವೃ ಎದೆ ನೋವಿನಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಸಿನ್ ವಿಭಾಗದ ವೈದ್ಯರಾಗಿರುವ ಡಾ. ಶಶಿಕಲಾ ಅವರು ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ತೀವೃ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ವೈದ್ಯೆ. ಡಾ.ಶಶಿಕಲಾ…

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಡಿ.8 ರಂದು ಝೆನ್ಕೆನ್ ದಿನಾಚರಣೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ಮೂಲದ ಝೆನ್ಕೆನ್ ಸಂಸ್ಥೆಯ ಭಾರತದ ವಿಭಾಗದ ಸಹಯೋಗದೊಂದಿದೆ ನಿಟ್ಟೆ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ಡಿ.8 ರಂದು ಝೆನ್ಕೆನ್ ದಿನವನ್ನು ಆಚರಿಸಲಿದೆ. ಇದೊಂದು ಜಪಾನ್ ದೇಶದ ಸಾಂಸ್ಕೃತಿಕ ಹಾಗೂ ಔದ್ಯೋಗಿಕ ವಿಚಾರ…

ನಂದಿನಿ ಹಾಲಿನ ಬೆಲೆ ಹೆಚ್ಚಳದ ಸುಳಿವು ನೀಡಿದ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್

ಬೆಳಗಾವಿ: ಹಾಲು ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ವೆಚ್ಚವನ್ನು ಸರಿದೂಗಿಸಲು ನಂದಿನಿ ಹಾಲಿನ ಬೆಲೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಹೇಳಿದ್ದಾರೆ. ಈ ಕುರಿತು ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ ಅವರು, ಕಳೆದ ಆಗಸ್ಟ್‌ನಲ್ಲಿ ಪ್ರತೀ ಲೀಟರ್‌ಗೆ 3…

ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವದಲ್ಲೇ ಇಲ್ಲ: ಎಲ್ಲಿದೆ ನೀವೇ ಹೇಳಿ ಎಂದು ಪತ್ರಕರ್ತರಿಗೆ ಮರುಪ್ರಶ್ನೆ ಹಾಕಿದ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಸ್ತಿತ್ವದಲ್ಲೇ ಇಲ್ಲ, ಇದ್ದರೆ ಎಲ್ಲಿದೆ ಎಂದು ನೀವೇ ಹೇಳಿ ಎಂದು ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಮರುಪ್ರಶ್ನೆ ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪೂರ್ಣಪ್ರಮಾಣದಲ್ಲಿ ವಿಸ್ತರಣೆ ಆಗುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಕಾಂಗ್ರೆಸ್ ವಿಸ್ತರಣೆ…

ಮೂಡಬಿದಿರೆ: ಬೈಕಿಗೆ ಕಾರು ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಮೂಡಬಿದಿರೆ:ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮೂಡಬಿದಿರೆಯ ಕಲ್ಲಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮಹಾವೀರ ಕಾಲೇಜು ಬಳಿಯ ನಿವಾಸಿ ಪ್ರದೀಪ್ ಶೆಟ್ಟಿ (38) ಅಪಘಾತದಲ್ಲಿ ಮೃತಪಟ್ಟ ಯುವಕ.ಪ್ರದೀಪ್ ತನ್ನ ಮನೆಯಲ್ಲಿ…

ಐಸಿಸ್‌ ಜತೆ ಸಂಪರ್ಕ ಸಾಬೀತುಪಡಿಸಿದರೆ ದೇಶ ತೊರೆಯುವೆ: ಯತ್ನಾಳ್‌ಗೆ ಸಯ್ಯದ್ ಮೊಹಮ್ಮದ್‌ ತನ್ವೀರ್‌ ಹಾಶ್ಮಿ ಸವಾಲು!

ವಿಜಯಪುರ :ಐಸಿಸ್ ಉಗ್ರ ಸಂಘಟನೆಯ ಜತೆಗೆ ನಂಟು ಹೊಂದಿರುವುದು ಸಾಬೀತುಪಡಿಸಿದರೆ ತಾನು ಭಾರವನ್ನು ತೊರೆಯುವುದಾಗಿ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ ಸವಾಲು ಹಾಕಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ, ಒಂದುವೇಳೆ ಅವರು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:07.12.2023, ಗುರುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಶರದೃತು,ಕಾರ್ತೀಕ ಮಾಸ,(ವೃಶ್ಚಿಕ) ಕೃಷ್ಣ ಪಕ್ಷ , ನಕ್ಷತ್ರ:ಹಸ್ತಾ, ರಾಹುಕಾಲ- 01:47 ರಿಂದ 03:12 ಗುಳಿಕಕಾಲ-09:32 ರಿಂದ 10:57 ಸೂರ್ಯೋದಯ (ಉಡುಪಿ) 06:43 ಸೂರ್ಯಾಸ್ತ – 06:02 ರಾಶಿ ಭವಿಷ್ಯ ಮೇಷ ರಾಶಿ (Aries)…

ಸಿಎಂ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಗೆ ಐಸಿಸ್‌ ನಂಟು ಆರೋಪ: ಎನ್ ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವರಿಗೆ ಯತ್ನಾಳ್‌ ಪತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿರುವ ವಿಚಾರದಲ್ಲಿ ಸಾಕಷ್ಟು ಆರೋಪ ಪ್ರತ್ಯಾರೋಪಗಳ ಬೆನ್ನಲ್ಲೇ ಇದೀಗ ಹೊಸ ವಿವಾದ ಸಿಎಂಗೆ ಸುತ್ತಿಕೊಂಡಿದ್ದು,ಇದು ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಸೃಷ್ಟಿಯಾಗುವ ಸಾಧ್ಯತೆಯಿದೆ. ಮುಸ್ಲಿಂ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ವಿಶ್ವದ ಅತ್ಯಂತ ಕುಖ್ಯಾತ ಭಯೋತ್ಪಾದಕ…

ಕಾರ್ಕಳ: ರಾಮಸಮುದ್ರದಲ್ಲಿ ಸ್ನಾನಕ್ಕೆಂದು ಹೋಗಿದ್ದ ವೃದ್ದ ಕುಸಿದು ಬಿದ್ದು ಸಾವು

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ರಾಮಸಮುದ್ರದಲ್ಲಿ ಸ್ನಾನಕೆಂದು ಹೋಗಿದ್ದ ವೃದ್ದರೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ವಂಜಾರಕಟ್ಟೆ ನಿವಾಸಿ ದೇವಪ್ಪ ಪೂಜಾರಿ(70) ಎಂಬವರು ಮೃತಪಟ್ಟವರು. ದೇವಪ್ಪ ಪೂಜಾರಿಯವರು ವಿಪರೀತ ರಕ್ತದೊತ್ತಡ ಹಾಗೂ ಮಧುಮೇಹ…

ಹೆಬ್ರಿ: ಮೂತ್ರಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಮೂತ್ರಕೋಶಕ್ಕೆ ಸಂಬಂಧಿಸಿದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಬೆಳಗುಂಡಿ ಎಂಬಲ್ಲಿ ನಡೆದಿದೆ. ಚಾರ ಗ್ರಾಮದ ಸುಮಿತ್ರಾ(69) ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಅವರು ಕಳೆದ ಹಲವು ವರ್ಷಗಳಿಂದ ಮೂತ್ರಕೋಶದ…