Month: January 2024

ಕಾರ್ಕಳದಲ್ಲಿ ಐಟಿ ದಾಳಿ: ಕ್ರಶರ್ ಹಾಗೂ ಫ್ಲ್ಯಾಟ್ ಮೇಲೆ ದಾಳಿ

ಕಾರ್ಕಳ: ಮಂಗಳವಾರ ಬೆಳ್ಳಂಬೆಳಗ್ಗೆ ಕಾರ್ಕಳದ ಕ್ರಶರ್ ಹಾಗೂ ಫ್ಲಾಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿ ಗುತ್ತಿಗೆದಾರ ಸುಜಯ ಶೆಟ್ಟಿ ಹಾಗೂ ಕ್ರಶರ್ ಮಾಲಕ ದಿನೇಶ್ ಶೆಟ್ಟಿ ಎಂಬವರ ಮನೆ…

ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ: ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಶಾಸಕ ಯಶ್’ಪಾಲ್ ಸುವರ್ಣ ಮನವಿ

ಉಡುಪಿ: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರದ ಲೋಕಾರ್ಪಣೆ ದಿನವನ್ನು ಐತಿಹಾಸಿಕ ಕ್ಷಣವನ್ನು ಆಚರಿಸುವ ಸಲುವಾಗಿ ಅಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

ಉಡುಪಿ: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಆ್ಯಂಬುಲೆನ್ಸ್

ಉಡುಪಿ:ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಜನೌಷಧಿ ಕೇಂದ್ರದ ಒಳಗೆ ನುಗ್ಗಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಆಂಬುಲೆನ್ಸ್ ವಾಹನ ಚಾಲಕನ ನಿಯಂತ್ರಣತಪ್ಪಿದ ಉಡುಪಿ ತಾಲೂಕಿನ ಲಕ್ಷ್ಮೀಂದ್ರ ನಗರದ ಜನೌಷಧಿ ಕೇಂದ್ರದ ಒಳಗೆ ನುಗ್ಗಿದೆ. ನಸುಕಿನ ಜಾವದಲ್ಲಿ ಈ ಘಟನೆ…

ಕಾರ್ಕಳ: ಜ.5 ರಂದು ಅಡಿಕೆ ಎಲೆಚುಕ್ಕಿ ರೋಗದ ಕುರಿತು ವಿಚಾರ ಸಂಕಿರಣ

ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯಾದ ಅಡಿಕೆ ಎಲೆ ಚುಕ್ಕಿ ರೋಗದ ಕುರಿತ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜನವರಿ 5ರಂದು ಕಾರ್ಕಳ ತೋಟಗಾರಿಕಾ ಇಲಾಖೆ ಹಾಗೂ ಕಾರ್ಕಳ ರೈತರ ಉತ್ಪಾದಕ ಕಂಪನಿ ಸಹಯೋಗದಲ್ಲಿ ಎಪಿಎಂಸಿ ಆವರಣದಲ್ಲಿ…

ಹೆಬ್ರಿ ಅಮೃತಭಾರತಿ ವಿದ್ಯಾಲಯಕ್ಕೆ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

ಹೆಬ್ರಿ: ವ್ಯಾಸರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್. (ರಿ) ಕಾರ್ಕಳ ಹಾಗೂ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರು ನಡೆಸಲ್ಪಡುವ 83ನೇ ಗೀತಾ ಜಯಂತಿ ಸಮಾರಂಭದ ಭಗವದ್ಗೀತಾ 2ನೇ ಅಧ್ಯಾಯದ ಕಂಠಪಾಠ ಸ್ಪರ್ಧೆಯಲ್ಲಿ ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ…

ಪಾಕಿಸ್ತಾನದಲ್ಲಿ ಮೊತ್ತೋರ್ವ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ? ಕಂದಹಾರ್ ವಿಮಾನ ಅಪಹರಣದ ಪ್ರಮುಖ ರೂವಾರಿ ಉಗ್ರ ಮಸೂದ್ ಅಜರ್ ಹತ್ಯೆಯ ಸುದ್ದಿ ವೈರಲ್

ನವದೆಹಲಿ: ಭಾರತೀಯ ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಿಸಿ ಕಂದಹಾರ್ ನಲ್ಲಿ ಇರಿಸಿದ ಪ್ರಕರಣದ ಮಾಸ್ಟರ್‌ಮೈಂಡ್ ಉಗ್ರ ಮಸೂದ್ ಅಜರ್‌ನನ್ನು ಪಾಕಿಸ್ತಾನದ ಇಸ್ಲಾಮಾಬಾದಲ್ಲಿ ಅನಾಮಧೇಯ ವ್ಯಕ್ತಿಗಳು ಬಾಂಬ್ ಸ್ಪೋಟಿಸಿ ಹತ್ಯೆಗೈದಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈತ ಭಾರತದ…

ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಂಗಳೂರು: ವಿಶ್ವಕರ್ಮ ಸಮುದಾಯದ ಮೂಲಪುರುಷ ವಿಶ್ವಕರ್ಮ ಅವರ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಸಂವಿಧಾನಕ್ಕೆ ಧಕ್ಕೆ ತರುವವರನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಸೋಮವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ…

ಗುತ್ತಿಗೆ ನೌಕರರಿಗೂ ಗ್ರಾಚ್ಯುಟಿ ಅನ್ವಯ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು:ಸೇವೆ ಕಾಯಂ ಆಗುವುದಕ್ಕೂ ಮುನ್ನ ದಿನದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರೆ ಆ ಅವಧಿಗೂ ಸರ್ಕಾರ ಗ್ರಾಚ್ಯುಟಿ ಪಾವತಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಬಸವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕ ಮತ್ತು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:02.01.2024,ಮಂಗಳವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಋತು,ಮಾರ್ಗಶಿರ ಮಾಸ,(ಧನು) ಕೃಷ್ಣ ಪಕ್ಷ , ನಕ್ಷತ್ರ:ಪೂರ್ವಫಾಲ್ಗುಣ, ರಾಹುಕಾಲ- 03:25 ರಿಂದ 04:50 ಗುಳಿಕಕಾಲ-12:35 ರಿಂದ 01:59 ಸೂರ್ಯೋದಯ (ಉಡುಪಿ) 06:56 ಸೂರ್ಯಾಸ್ತ – 06:14 ರಾಶಿ ಭವಿಷ್ಯ: ಮೇಷ ರಾಶಿ (Aries)…

ನಿಟ್ಟೆ ವಿದ್ಯಾಸಂಸ್ಥೆಯ ಸಂಭ್ರಮದಲ್ಲಿ ಕಳೆಗಟ್ಟಿದ ಹಳೆವಿದ್ಯಾರ್ಥಿಗಳ ಪುನರ್ಮಿಲನ

ನಿಟ್ಟೆ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1994ರ ಬ್ಯಾಚಿನ ಸಿಲ್ವರ್ ರಿಯೂನಿಯನ್ ಹಾಗೂ ಹಳೆವಿದ್ಯಾರ್ಥಿ ಸಂಘವಾದ ವೆನಾಮಿತಾ ಆಯೋಜಿಸಿದ್ದ ಗ್ಲೋಬಲ್ ಅಲುಮ್ನಿ ರಿಯೂನಿಯನ್ ಕಾರ್ಯಕ್ರಮವು ಡಿ 30 ರಂದು ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆಯ ತಾಂತ್ರಿಕ ಶಿಕ್ಷಣ…