Month: February 2024

ಮುನಿಯಾಲು: ಕಾರುಗಳ ಮುಖಾಮುಖಿ ಡಿಕ್ಕಿ: ಅಪಘಾತದಲ್ಲಿ ಜ್ಯುವೆಲ್ಲರಿ ಮಾಲೀಕ ದಾರುಣ ಸಾವು

ಹೆಬ್ರಿ: ವರಂಗ ಗ್ರಾಮದ ಮುನಿಯಾಲಿನಲ್ಲಿ ಫೆ.29 ರಂದು ಗುರುವಾರ ಮಧ್ಯಾಹ್ನ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ‌ ಮುನಿಯಾಲು ಚಟ್ಕಲ್ ಪಾದೆ ನಿವಾಸಿ ಜ್ಯುವೆಲ್ಲರಿ ಶಾಪ್ ಮಾಲೀಕ ಜಗದೀಶ್ ಆಚಾರ್ಯ(65) ದಾರುಣವಾಗಿ ಮೃತಪಟ್ಟಿದ್ದಾರೆ‌. ಈ ದುರ್ಘಟನೆಯಲ್ಲಿ…

ರಾಜ್ಯ ಕಾಂಗ್ರೆಸ್ ಸರ್ಕಾರದ‌ ವಿರುದ್ಧ ಸಿಡಿದೆದ್ದ ಬಿಜೆಪಿ: ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ದೂರು

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಮಾತಿನ ಸಮರ ತಾರಕಕ್ಕೇರಿದ್ದು, ಈ ನಡುವೆ ಇಂದು ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವಿಧಾನಸಭೆಯ ಪ್ರತಿಪಕ್ಷ…

ಹೆಬ್ರಿ ನಾಲ್ಕೂರಿನಲ್ಲಿ ಇಸ್ಪೀಟ್ ಅಡ್ಡೆಗೆ ದಾಳಿ : ಐವರು ಪೊಲೀಸ್ ವಶಕ್ಕೆ:ಬಂಧಿತರಿಂದ 9,700 ನಗದು ವಶ

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಎಂಬಲ್ಲಿ ಕರಾವಳಿ ಕೋಳಿ ಫಾರಂ ಬಳಿ ಹಾಡಿಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐವರನ್ನು ಹೆಬ್ರಿ ಕ್ರೈಂ ಎಸ್ಐ ಮಹಾಂತೇಶ…

ಮುನಿಯಾಲು: ಕಾರುಗಳ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ

ಹೆಬ್ರಿ: ವರಂಗ ಗ್ರಾಮದ ಮುನಿಯಾಲಿನಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕರು ಸಹಿತ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುರುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಮಾರುತಿ ವಿಟಾರ ಬ್ರೀಝಾ ಹಾಗೂ ಮುನಿಯಾಲು ಕಡೆಗೆ…

ತೆಳ್ಳಾರು: ಕಿರುಸೇತುವೆಯಿಂದ ಬಿದ್ದು ವ್ಯಕ್ತಿ ಸಾವು

ಕಾರ್ಕಳ: ದುರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಳ್ಳಾರು ಮಾದಬೆಟ್ಟು ಎಂಬಲ್ಲಿನ ಕಿರುಸೇತುವೆಯಿಂದ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ತೆಳ್ಳಾರು ನಿವಾಸಿ ಸತೀಶ್ ಶೆಟ್ಟಿ(51) ಎಂಬವರು ಬುಧವಾರ ತಡರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಆಯತಪ್ಪಿ ಕಿರುಸೇತುವೆಯಿಂದ ಬಿದ್ದ…

ಅಜೆಕಾರು ಹೋಬಳಿ ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ: ಮೂಲಸೌಕರ್ಯಗಳನ್ನು ಕಡೆಗಣಿಸಿ ಕೇವಲ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ ಸಾಧ್ಯವಿಲ್ಲ: ಶಾಸಕ ಸುನಿಲ್ ಕುಮಾರ್

ಕಾರ್ಕಳ:ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು,ವಸತಿ ಮುಂತಾದ ಯೋಜನೆಗಳಿಗೆ ಒಂದು ನಯಾಪೈಸೆ ಅನುದಾನವನ್ನೇ ನೀಡದೇ, ಕೇವಲ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆಯಾಗಲು ಸಾಧ್ಯವಿಲ್ಲ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಪರೋಕ್ಷವಾಗಿ…

44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ : ಸಿಎಂ ಸಿದ್ದರಾಮಯ್ಯ ಅನುಮೋದನೆ

ಬೆಂಗಳೂರು: ಕಾಂಗ್ರೆಸ್‌ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿ,ಪಟ್ಟಿ ಬಿಡುಗಡೆ ಮಾಡಿದ್ದು, ಇಂದು ಆಯಾ ಇಲಾಖೆಗಳ ಮೂಲಕ ನಿಯೋಜಿತ ಅಧ್ಯಕ್ಷರುಗಳಿಗೆ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ. 44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:29.02.2024,ಗುರುವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಶಿಶಿರ ಋತು,ಕುಂಭ ಮಾಸ, ಕೃಷ್ಣ ಪಕ್ಷ,ನಕ್ಷತ್ರ:ಚಿತ್ರಾ, ರಾಹುಕಾಲ-02:12 ರಿಂದ 03:41 ಗುಳಿಕಕಾಲ-09:46 ರಿಂದ 11:15 ಸೂರ್ಯೋದಯ (ಉಡುಪಿ) 06:50 ಸೂರ್ಯಾಸ್ತ – 06:37 ರಾಶಿ ಭವಿಷ್ಯ: ಮೇಷ ರಾಶಿ: ಇಂದು ನಡೆಯುತ್ತಿದ್ದ ಅಡೆತಡೆಗಳನ್ನು…

ಎಳ್ಳಾರೆ:ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ಹೋಗಿದ್ದ ಯುವತಿ ನಾಪತ್ತೆ

ಅಜೆಕಾರು: ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಹಸಲ್’ಜಡ್ಡು ಎಂಬಲ್ಲಿ ಪ್ರಮೀಳಾ (24) ಎಂಬ ಯುವತಿ ಫೆ. 24 ರಂದು ಶನಿವಾರ ಮನೆಯಿಂದ ಮುನಿಯಾಲು ಕಾಮಾಕ್ಷಿ ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆಂದು ಹೋದವರು…

ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸ: ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿ ಉಳಿದಿಲ್ಲ, ಕನ್ನಡವನ್ನೂ ಬೆಳೆಸಿದೆ: ಹಂಪಿ ವಿವಿ ಕುಲಪತಿ ಡಾ.ಪರಮಶಿವಮೂರ್ತಿ

ಕಾರ್ಕಳ : ಕನ್ನಡಕ್ಕೆ ಸಂಸ್ಕೃತದ ಪ್ರಭಾವ ಅನಾದಿ ಕಾಲದಿಂದಲೂ ಆಗಿದೆ. ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಕನ್ನಡ ಸಾಹಿತ್ಯzಪ್ರತಿಯೊಂದು ವಿಚಾರದಲ್ಲೂ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದೆ. ಭಾಷಾಂತರ ಪ್ರಕ್ರಿಯೆ ಇಂದು ಜೀವನದ ಎಲ್ಲಾ ಸಂದರ್ಭಗಳಲ್ಲಿ ನಾವು ಮಾಡಿಕೊಳ್ಳುತ್ತೇವೆ. ಅರ್ಥವಾಗದ ಮತ್ತು ಅರ್ಥವಾಗುವ…