Month: May 2025

ನೆಲ್ಯಾಡಿ: ಮನೆಯ ಅಂಗಳದಲ್ಲಿಯೇ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಬೆಳ್ತಂಗಡಿ : ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು…

ಭಾರತ್ ಪಾಕ್ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ಕರ್ನಾಟಕದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ತಾರಕಕ್ಕೇರಿದ್ದು ಈ ಹಿನ್ನಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ತಿಳಿಸಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು…

ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೂ ಡಿಜೆ ಸೌಂಡ್ಸ್ ; ಪ್ರಕರಣ ದಾಖಲು

ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ತಡರಾತ್ರಿಯವರೆಗೆ ಕರ್ಕಶವಾದ ಡಿಜೆ ಸೌಂಡ್ಸ್ ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದವರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಡವೂರು ಗ್ರಾಮ ಕಲ್ಮಾಡಿ ಬಳಿಯ ಮನೆಯಲ್ಲಿ ಮೇ 8ರಂದು ನಡೆಯುತ್ತಿದ್ದ ಮೆಹೆಂದಿ…

ಸಾಣೂರು: ಪ್ರಯಾಣಿಕರು ಬಸ್ಸಿಗಾಗಿ ರಸ್ತೆಯಲ್ಲೇ ಕಾಯುವ ದುಸ್ಥಿತಿ: ಪ್ರಯಾಣಿಕರ ತಂಗುದಾಣದ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತ್ತಂಗಡಿ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಹೆದ್ದಾರಿ ಇಲಾಖೆಯವರು ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬಸ್ಸು ನಿಲ್ದಾಣಗಳನ್ನು ಕೆಡವಿ ಹಾಕಿದ್ದರು. ಹೊಸ ಬಸ್ಸು ನಿಲ್ದಾಣ ಆಗುವವರೆಗೆ ಕನಿಷ್ಠ ತಾತ್ಕಾಲಿಕ ಬಸ್ಸು ನಿಲ್ದಾಣಗಳನ್ನು ಕೂಡ…

ಪಾಕ್ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಿರಿಯ ಅಧಿಕಾರಿ ಮೃತ್ಯು

ಜಮ್ಮು & ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನದಲ್ಲಿ ಯುದ್ಧದ ಕಾರ್ಮೋಡ ಸೃಷ್ಟಿಯಾಗಿದೆ. ಪಾಕ್​​ ದಾಳಿಗೆ ಭಾರತ ಪ್ರತಿದಾಳಿಯನ್ನು ನಡೆಸುತ್ತಿದೆ. ಈಗಾಗಲೇ ಆಪರೇಷನ್ ಸಿಂದೂರ್​​ದ ಮೂಲಕ ಪಾಕ್​​ ಉಗ್ರರಿಗೆ ಭಾರತದ ನಾಗರಿಕರನ್ನು ಹತ್ಯೆ ಮಾಡಿದ್ದಕ್ಕೆ ಭಾರತದ ಸೇನೆ ಸರಿಯಾದ ಉತ್ತರ ನೀಡಿದ್ದಾರೆ. ಆದಾಗ್ಯೂ…

ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ದೇಶದ್ರೋಹದ ಗೋಡೆಬರಹ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ABVP ವತಿಯಿಂದ ಕಾಲೇಜು ನಿರ್ದೇಶಕರಿಗೆ ಮನವಿ

ಕಾರ್ಕಳ: ನಿಟ್ಟೆ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ ಗೋಡೆಗಳಲ್ಲಿ ದೇಶದ್ರೋಹದ ಗೋಡೆ ಬರಹಗಳನ್ನು ಬರೆಯಲಾಗಿದ್ದು, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಕಾಲೇಜು ನಿರ್ದೇಶಕ ಮಂಡಳಿಗೆ ಮನವಿ ಸಲ್ಲಿಸಿದೆ. ಪಾಕಿಸ್ತಾನದ ವಿರುದ್ಧ ಭಾರತದ ಸೇನೆಯ ಆಪರೇಷನ್…

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಆಕ್ಷೇಪ?: ಕಾರ್ಕಳದ ಕಾಲೇಜಿನ ಹಾಸ್ಟೆಲ್ ನಲ್ಲಿ ಆಕ್ಷೇಪಾರ್ಹ ಗೋಡೆ ಬರಹ

ಕಾರ್ಕಳ: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಕ್ಷೇಪಿಸಿ ಕಾರ್ಕಳದ ಪ್ರತಿಷ್ಠಿತ ಕಾಲೇಜಿನ‌ ಹಾಸ್ಟೆಲ್ ಒಂದರಲ್ಲಿ ದೇಶದ ಅಖಂಡತೆಗೆ ಧಕ್ಕೆ ಬರುವ ರೀತಿಯ ಆಕ್ಷೇಪಾರ್ಹ ಗೋಡೆಬರಹ ಬರೆಯಲಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲಗಳ…

ನಂದಳಿಕೆ: ತಲೆಗೆ ಕಲ್ಲು ಬಡಿದು ಕಾರ್ಮಿಕ ಸಾವು

ಕಾರ್ಕಳ: ಕಲ್ಲುಕೋರೆಯಲ್ಲಿ ಬಂಡೆ ಒಡೆಯುವ ವೇಳೆ ಕಲ್ಲೊಂದು ಕಾರ್ಮಿಕನ ತಲೆಗೆ ಬಡಿದು ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಭವಿಸಿದೆ. ರಾಯಚೂರು ಮೂಲದ ಶಿವರಾಜ (27ವ) ಎಂಬಾತ ಮೃತಪಟ್ಟ ಕಾರ್ಮಿಕ. ಶಿವರಾಜ ಮೇ 8…

ಭಾರತೀಯ ಸೇನೆಯ ವಿಜಯಕ್ಕಾಗಿ ಮೇ 11,12 ರಂದು ಕಾರ್ಕಳ ಬಿಜೆಪಿಯಿಂದ “ಸಿಂಧೂರ ಆರತಿ ” ವಿಶೇಷ ಕಾರ್ಯಕ್ರಮ: ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್

ಕಾರ್ಕಳ: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಪಹಲ್ಗಾಮ್ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡ ಐತಿಹಾಸಿಕ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಹಾಗೂ ದೇಶದ ರಕ್ಷಣೆಗೆ ನಡೆಯುತ್ತಿರುವ ವೀರರ ಸಮರದಲ್ಲಿ ಭಾರತೀಯ ಸೈನಿಕರ ಯಶಸ್ಸಿಗಾಗಿ ಕಾರ್ಕಳ ಬಿಜೆಪಿ ಮಂಡಲ ವತಿಯಿಂದ ಭಕ್ತಿ ಭರಿತ, ದೇಶಭಕ್ತಿಯ…

ಅಜೆಕಾರು ನಾಡಕಚೇರಿಯಲ್ಲಿ ಹೋಬಳಿ ಮಟ್ಟದ ಪೌತಿ ಹಾಗೂ ಕಂದಾಯ ಅದಾಲತ್

ಅಜೆಕಾರು: ಹೋಬಳಿ ಮಟ್ಟದ ಪರಿಶಿಷ್ಟ ಜಾತಿ/ ಪಂಗಡ / ಇತರರ ಪೌತಿ ಆಂದೋಲನ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮವು ಶುಕ್ರವಾರ ಅಜೆಕಾರು ನಾಡಕಚೇರಿಯಲ್ಲಿ ತಹಸಿಲ್ದಾರ್ ಪ್ರದೀಪ್ ಕುಮಾರ್,ಅರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧಿಕ‌ ಕಡತಗಳನ್ನು ವಿಲೇವಾರಿ ಮಾಡಲಾಯಿತು. ಉಪತಹಶೀಲ್ದಾರ್ ನಮಿತಾ.ಬಿ,…