Month: July 2025

ಮಂಗಳೂರು – ಬೆಂಗಳೂರು ಹೆದ್ದಾರಿಯ ಮಣ್ಣಗುಂಡಿ ಬಳಿ ಗುಡ್ಡಕುಸಿತ: ಸಂಚಾರ ಬಂದ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಗುಡ್ಡ ಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದು ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಸದ್ಯ ಮಣ್ಣು…

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಪಿತೃವಿಯೋಗ: ವಯೋಸಹಜ ಅನಾರೋಗ್ಯದಿಂದ ಎಂ.ಕೆ ವಾಸುದೇವ ನಿಧನ

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ವಿ.ಸುನಿಲ್ ಕುಮಾರ್ ಅವರ ತಂದೆಯವರಾದ ವಾಸುದೇವ (87) ಅವರು ಗುರುವಾರ ಮುಂಜಾನೆ ಉಡುಪಿ ಡಾ.ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗಷ್ಟೇ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.…

ಭಾರೀ ಮಳೆ ಹಿನ್ನೆಲೆ ನಾಳೆ (ಜು.17ರಂದು) ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ

ಉಡುಪಿ ಜು. 16: ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಸ್ವರೂಪ. ಟಿ.ಕೆ ಆದೇಶಿಸಿದ್ದಾರೆ. ಅಲ್ಲದೇ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮಿಯ್ಯಾರು : ಬೈಕಿಗೆ ರಿಕ್ಷಾ ಢಿಕ್ಕಿಯಾಗಿ ಸವಾರ ಆಸ್ಪತ್ರೆಗೆ ದಾಖಲು

ಕಾರ್ಕಳ: ಬೈಕಿಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಡಾರಿನ ಸ್ವಸ್ತಿಕ್‌ (22) ಜುಲೈ 14 ರಂದು ಬೈಕಿನಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಮಿಯ್ಯಾರು ಗ್ರಾಮದ ಕುಂಟಿಬೈಲ್‌ ಜಂಕ್ಷನ್‌ ಬಳಿ ಬಜಗೋಳಿ ಕಡೆಯಿಂದ ಕಾರ್ಕಳ…

ಜುಲೈ 20 ರಂದು ಕಾಂತಾವರ ಯಕ್ಷದೇಗುಲದಲ್ಲಿ  23 ನೇ ವರ್ಷದ ಯಕ್ಷೋಲ್ಲಾಸ 2025

ಕಾರ್ಕಳ:: ಯಕ್ಷದೇಗುಲ ಕಾಂತಾವರದ 23 ನೇ ವರ್ಷದ ಕಾರ್ಯಕ್ರಮದ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ “ಯಕ್ಷೋಲ್ಲಾಸ 2025″ಕಾರ್ಯಕ್ರಮವು ಕಾಂತಾವರದಲ್ಲಿ ಕ್ಷೇತ್ರದಲ್ಲಿ ಜುಲೈ 20 ರಂದು ಬೆಳಿಗ್ಯೆ 10.00 ರಿಂದ ನಡೆಯಲಿದೆ. ಗ್ರಾಮ ಪಂ. ಅದ್ಯಕ್ಷ ರಾಜೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಾರಾಡಿಬೀಡು…

ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಳ್ಳು, ಅಪಪ್ರಚಾರ ತಡೆಗಟ್ಟಲು ಕಾರ್ಕಳ ಬಿಜೆಪಿಯಿಂದ ಎಎಸ್ಪಿ ಹಾಗೂ ತಹಸೀಲ್ದಾರ್ ಗೆ ದೂರು

ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಪ್ರತಿಮೆ ವಿಚಾರದಲ್ಲಿ ಕಾರ್ಕಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸುಳ್ಳು ಹಾಗೂ ಅಪಪ್ರಚಾರ ನಡೆಸಿ ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದು ಸುಳ್ಳು ಹರಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಬಿಜೆಪಿ ನಾಯಕರು ಬುಧವಾರ…

ದೇವಸ್ಥಾನದ ಆಸ್ತಿ ಕಬಳಿಕೆ ಆರೋಪ ಸತ್ಯಕ್ಕೆ ದೂರ: ಅಜೆಕಾರು ವ್ಯವಸ್ಥಾಪನ ಸಮಿತಿಯ ಸದಸ್ಯ ಪ್ರಕಾಶ ಶೆಟ್ಟಿ ಸ್ಪಷ್ಟನೆ

ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ದೇವಸ್ಥಾನದ ಜಾಗವನ್ನು ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಮಿತಿ ಸದಸ್ಯ ಪ್ರಕಾಶ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಕಳೆದ 50 ವರ್ಷಗಳಿಂದ ಶಿವರಾಮ ಶೆಟ್ಟಿಯವರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.…

ರಾಜ್ಯದ ಶಾಲೆಗಳಲ್ಲಿ U ಆಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗೆ ಒತ್ತಾಯಿಸಿ ಸಚಿವರಿಗೆ ಪತ್ರ

ಬೆಂಗಳೂರು: ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೀಗ ಇದೇ ಮಾದರಿಯನ್ನು ಕರ್ನಾಟಕದ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರದ…

ಹಿರ್ಗಾನ: ಹೆಂಡತಿಗೆ ಕಡಿದು ಕೊಲೆಗೆ ಯತ್ನಿಸಿ ಗಂಡ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಗಂಡ ಹೆಂಡತಿಯರ ನಡುವೆ ಕ್ಷುಲ್ಲಕ ಕಾರಣದಿಂದ ನಡೆದ ಜಗಳವು ಗಂಡನ ಸಾವಿನಲ್ಲಿ ಅಂತ್ಯ ಕಂಡ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್’ಬೆಟ್ಟು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಿಕ್ಕಲ್’ಬೆಟ್ಟು ನಿವಾಸಿ ಗೋಪಾಲಕೃಷ್ಣ ದೇವಾಡಿಗ(61) ಎಂಬವರು ತನ್ನ ಪತ್ನಿ…

ಕಾಂಗ್ರೆಸ್ ನವರ ಹೊಟ್ಟೆಕಿಚ್ಚಿಗೆ ಪರಶುರಾಮ ಥೀಮ್ ಪಾರ್ಕ್ ಬಲಿಯಾಗಿದೆ: ಮಾಜಿ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

ಕಾರ್ಕಳ:ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಈವರೆಗೂ ಮಾಡಿಕೊಂಡು ಬಂದ ಆರೋಪಗಳೆಲ್ಲವೂ ಸುಳ್ಳಾಗಿವೆ. ಕಾರ್ಕಳ ಕಾಂಗ್ರೆಸ್ ನಡೆಸಿದ ಹತಾಶ ಪ್ರಯತ್ನಕ್ಕೆ ರಾಜ್ಯ ನಾಯಕರು ಪರಾಮರ್ಶೆ ನಡೆಸದೇ ಮಾಡಿದ ಅಭಿಯಾನಕ್ಕೆ ಸೋಲಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾಂಗ್ರೆಸ್ ನಾಯಕರ…