Month: August 2025

ಮುನಿಯಾಲು :ಉಲಾಯಿ-ಪಿದಾಯಿ ಜುಗಾರಿ‌ ಆಟ : 6 ಮಂದಿ ಉಲಾಯಿ!

ಹೆಬ್ರಿ ಆ,14: ಹೆಬ್ರಿ‌ ತಾಲೂಕಿನ ವರಂಗ ಗ್ರಾಮದ ಮುನಿಯಾಲುಬೈಲು ಸಮೀಪದ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ‌ ಆಟ ಆಡುತ್ತಿದ್ದ 6 ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿ,ಇಸ್ಪೀಟು ಎಲೆ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಮುನಿಯಾಲು ವೈನ್ ಶಾಪ್ ಸಮೀಪದ ಹಾಡಿಯಲ್ಲಿ…

ಬಾಲ್ಯ ವಿವಾಹ ತಡೆಗೆ ಸೂಕ್ತ ಕ್ರಮ, ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕಾ ಪಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು(ವಿಧಾನಸಭೆ): ಬಾಲ್ಯವಿವಾಹ ಸಾಮಾಜಿಕ ಪೀಡುಗಾಗಿದ್ದು, ಇದನ್ನು ಬೇರುಮಟ್ಟದಿಂದ ಕಿತ್ತೊಗೆಯಬೇಕು. ಬಾಲ್ಯವಿವಾಹ ತಡೆಗಟ್ಟಲು ಸರ್ಕಾರ ಸರ್ವಸನ್ನದ್ಧವಾಗಿದ್ದು, ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ಮಳೆಗಾಲದ ಅಧಿವೇಶನದ ಮೂರನೇ ದಿನವಾದ…

ವೃತ್ತ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ : ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ

ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಕಾರ್ಕಳ ತಾಲೂಕು ವೃತ್ತ ಮಟ್ಟದ ಪ್ರೌಢಶಾಲಾ ವಿಭಾಗದ, 14/17 ರ ವಯೋಮಿತಿಯ ವಾಲಿಬಾಲ್ ಪಂದ್ಯಾಟ ಕಾರ್ಕಳ ಸ್ವರಾಜ್ಯ ಮೈದಾನ ದಲ್ಲಿ ನಡೆದಿದ್ದು, ವೃತ್ತಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ, ಚರ್ಚ್ ಆಂಗ್ಲ ಮಾಧ್ಯಮ ಶಾಲೆ…

ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಬಿಜೆಪಿ ವಾಕ್ಸಮರ: ಸರ್ಕಾರದ ನಡೆಯ ವಿರುದ್ಧ ಬಿಜೆಪಿ ಶಾಸಕರಿಂದ ಆ.16ರಿಂದ `ಧರ್ಮಸ್ಥಳ ಯಾತ್ರೆ’.!

ಬೆಂಗಳೂರು, ಆ 13: ಧರ್ಮಸ್ಥಳದ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಧೇಯ ಸಾಕ್ಷಿದಾರರ ದೂರು ಆಧರಿಸಿ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿ ತನಿಖೆಗೆ ಎಸ್‌ಐಟಿ ತಂಡ ರಚಿಸಿ ಈಗಾಗಲೇ ಶೋಧ ಕಾರ್ಯ ಮುಂದುವರಿದಿದೆ. ನಿರಂತರ ಶೋಧ…

ನಾಡ್ಪಾಲು ಸೀತಾನದಿ ದೇವಸ್ಥಾನದ ಆಡಳಿತ ಮಂಡಳಿಯ ವಿಚಾರದಲ್ಲಿ ಮೊಕ್ತೇಸರರ ಕುಟುಂಬದ ಸದಸ್ಯರಿಗೆ ತಂಡದಿAದ ಜೀವಬೆದರಿಕೆ

ಹೆಬ್ರಿ, ಆ 13: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೀತಾನದಿ ನಂದಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ವಿವಾದದ ಕುರಿತು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬದ ಸದಸ್ಯರಿಗೆ ದೇವಸ್ಥಾನದ ಒಳಗೆ ಪ್ರವೇಶಿಸದಂತೆ ತಡೆದು ಜೀವ ಬೆದರಿಕೆಯೊಡ್ಡಿರುವ ಕುರಿತು ಹೆಬ್ರಿ ಪೊಲೀಸ್…

ಕಾರ್ಕಳ: ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಕಾರ್ಕಳ : ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ಬಾಗಿಲಿನ ಬೀಗ ಮುರಿದು ಕಳವಿಗೆ ಯತ್ನ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಕಸಬಾ ದ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಹಾಡಹಗಲೇ ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ…

ಹೆಬ್ರಿ:  ರಾಘವೇಂದ್ರ ಸ್ವಾಮಿಯ 354ನೇ ಆರಾಧನಾ ಮಹೋತ್ಸವ

ಹೆಬ್ರಿ : ಹೆಬ್ರಿ ಬೈಲುಮನೆ ಸೀತಾರಾಮ ಹನುಮ ಸಮೇತ ಶ್ರೀ ರಾಘವೇಂದ್ರ ಮಠದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಯ 354ನೇ ಆರಾಧನಾ ಮಹೋತ್ಸವವು ಪ್ರಧಾನ ಅರ್ಚಕ ವೇದಮೂರ್ತಿ ಎಚ್ ಗೋಪಾಲ ಆಚಾರ್ಯ ಇವರ ನೇತೃತ್ವದಲ್ಲಿ ನಡೆಯಿತು. ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟೋತ್ತರ…

ಧರ್ಮಸ್ಥಳ ಪ್ರಕರಣ: SIT ಶವ ಶೋಧನೆ ಸ್ಥಗಿತ ಚರ್ಚಿಸಿ ನಿರ್ಧಾರ ಎಂದ ಸಿಎಂ

ಬೆಂಗಳೂರು : ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಶವ ಶೋಧನೆಗಳ ತನಿಖೆ ತೀವ್ರಗೊಂಡಿದೆ. ಮಂಗಳವಾರ (ಆ.12) ರೇಡಾರ್ ಮೂಲಕ ಶವ ಶೋಧನೆ ಕಾರ್ಯ ನಡೆಸಿತ್ತು. ಮುಸುಕುದಾರಿ ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ 18 ಅಡಿ ಆಳದವರೆಗೆ ಎರಡು ಜೆಸಿಬಿ ಮೂಲಕ ಅಗೆಯಲಾಗಿದೆ. ಆದರೆ…

ನಿಟ್ಟೆ ಡಾ.ಎನ್ ಎಸ್.ಎ.ಎಮ್ ಕಾಲೇಜಿನಲ್ಲಿ ಸುಸ್ಥಿರ ಅಭಿವೃದ್ದಿ ಕೋಶ ಉದ್ಘಾಟನೆ

ಕಾರ್ಕಳ: ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಕೋಶವನ್ನು ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಎಸ್ ಆರ್ ಎಲ್ ಎಂ ತರಬೇತುದಾರ ಕೆ. ದೀಪಕ್ ಕಾಮತ್ ಕಾಂಜರಕಟ್ಟೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

ಆ.15, 16 ಮತ್ತು 17 ರಂದು ಮಣಿಪಾಲದ ಕಸ್ತೂರ್ಬಾ, ಉಡುಪಿ ಮತ್ತು ಕಾರ್ಕಳದ ಡಾ. ಟಿ.ಎಂ.ಎ ಪೈ ಆಸ್ಪತ್ರೆಗಳು ಸೇವೆಗೆ ಲಭ್ಯವಿಲ್ಲ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ , ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಗಳಿಗೆ ಆಗಸ್ಟ್ 15, 2025 (ಸ್ವಾತಂತ್ರ‍್ಯ ದಿನಾಚರಣೆ), ಆಗಸ್ಟ್ 16, 2025 (ತಿಂಗಳ ಮೂರನೇ ಶನಿವಾರ) ಮತ್ತು ಆಗಸ್ಟ್…