Month: September 2025

ಕೆರ್ವಾಶೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಕಳ,ಸೆ.25: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಿಯ್ಯಾರು ವಲಯದ ವತಿಯಿಂದ ಸೆ . 24 ರಂದು ಗುರುವಾರ ಡಿಜಿ ಪೇ ಮೂಲಕ ನಗದು ಪಡೆಯುವ ಕಾರ್ಯಕ್ರಮಕ್ಕೆ ಕೆರ್ವಾಶೆಯಲ್ಲಿ‌ ಚಾಲನೆ ನೀಡಲಾಯಿತು. ಕೆರ್ವಾಶೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾರವರು ಡಿಜಿಪೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,…

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜುನಾಥ ಪೂಜಾರಿಯವರಿಗೆ ಒಲಿದ ನಿಗಮ ಮಂಡಳಿಯ ಅದ್ಯಕ್ಷ ಗಾದಿ: ನಾರಾಯಣಗುರು ಅಭಿವೃದ್ಧಿ ನಿಗಮ ಇದರ ಅಧ್ಯಕ್ಷರಾಗಿ ಮಂಜುನಾಥ್ ಪೂಜಾರಿ ನೇಮಕ

ಹೆಬ್ರಿ,ಸೆ,25: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ವೀರಪ್ಪ ಮೊಯ್ಲಿಯವರ ಶಿಷ್ಯ ಮುದ್ರಾಡಿ ಮಂಜುನಾಥ ಪೂಜಾರಿಯವರಿಗೆ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕಳೆದ 4 ದಶಕಗಳಿಂದ ಅವಿಭಜಿತ ಕಾರ್ಕಳ ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿರುವ ಮಂಜುನಾಥ…

ಸಾಹಿತಿ ಎಸ್ ಎಲ್ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ: ಶೀಘ್ರವೇ ಭೈರಪ್ಪ ಸ್ಮಾರಕ ನಿರ್ಮಾಣ : ಮುಖ್ಯಮಂತ್ರಿ ಘೋಷಣೆ

ಬೆಂಗಳೂರು, ಸೆ 25: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಹಿರಿಯ ಸಾಹಿತಿ, ಪದ್ಮಭೂಷಣ ಎಸ್,ಎಲ್ ಭೈರಪ್ಪ ಬುಧವಾರ ನಿಧನರಾಗಿದ್ದು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದು ಸಿಎಂ ಸಿದ್ದರಾಮಯ್ಯ ಅವರು ಎಸ್.ಎಲ್ ಭೈರಪ್ಪ…

ಕಾರ್ಕಳ: ಸ್ಕೂಟರ್ ಗೆ ಕಾರು ಡಿಕ್ಕಿ- ಸವಾರನಿಗೆ ಗಂಭೀರ ಗಾಯ

ಕಾರ್ಕಳ: ಕಾರ್ಕಳ ದ ಸರಕಾರಿ ಆಸ್ಪತ್ರೆ ಬಳಿ ಸೆ.22 ರಂದು ಸ್ಕೂಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಟ್ಟೆಯ ಸತೀಶ್‌ ಕುಮಾರ್‌ (60) ಗಾಯಗೊಂಡವರು. ಅವರು ಸೆ.22 ರಂದು ತಮ್ಮ ಸ್ಕೂಟರ್ ನಲ್ಲಿ…

ಜಾರ್ಕಳ: ಅಕ್ರಮ ಕಲ್ಲುಕೋರೆಗೆ ಪೊಲೀಸ್ ದಾಳಿ, ಪ್ರಕರಣ ದಾಖಲು

ಕಾರ್ಕಳ ಸೆ.25: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ ಅಕ್ರಮ ಕಲ್ಲುಕೋರೆಗೆ ದಾಳಿ ನಡೆಸಿದ ಪೊಲೀಸರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸ್‌ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್…

ಕಾರ್ಕಳ ತಾಲೂಕಿನಲ್ಲಿ ಜಾತಿ ಗಣತಿಗೆ ಆರಂಭದಲ್ಲೇ ವಿಘ್ನ: ಬೇಡಿಕೆ ಈಡೇರಿಸುವಂತೆ ಗಣತಿಗೆ ನಿಯೋಜನೆಗೊಂಡ ಶಿಕ್ಷಕರಿಂದ ತಹಸೀಲ್ದಾರ್ ಗೆ ಮನವಿ: ಬೇಡಿಕೆ ಈಡೇರದಿದ್ದರೆ ಆಹೋರಾತ್ರಿ ಧರಣಿ ಸತ್ಯಾಗ್ರಹದ ಎಚ್ಚರಿಕೆ: ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಹಶೀಲ್ದಾರ್ ಭರವಸೆ

ಕಾರ್ಕಳ,ಸೆ 24: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸಮೀಕ್ಷೆಗೆ ಕಾರ್ಕಳ ತಾಲೂಕಿನಲ್ಲಿ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಗಣತಿಗೆ ನಿಯೋಜನೆಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕ/ಶಿಕ್ಷಕಿಯರು ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಕಳ ತಹಶೀಲ್ದಾರ್ ಅವರನ್ನು…

ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಫೂರ್ತಿಮಾತು ಕಾರ್ಯಕ್ರಮ

ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ಶಿಕ್ಷಣವೇ ಎಲ್ಲಾ’ ಶೀರ್ಷಿಕೆಯಡಿಯಲ್ಲಿ ಕ್ರಿಯೇಟಿವ್ ಸ್ಪೂರ್ತಿಮಾತು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶ್ಚಿಮ ಬಂಗಾಳದ ಶಿಕ್ಷಣತಜ್ಞ, ಆನಂದ್ ಶಿಕ್ಷಾನಿಕೇತನ ಸಂಸ್ಥೆಯ ಸ್ಥಾಪಕರಾದ ಬಾಬರ್ ಅಲಿ ಅವರು ಶೈಕ್ಷಣಿಕ ವಿಚಾರಗಳ ಕುರಿತು ಹೇಳುತ್ತಾ,…

ಖ್ಯಾತ ಕಾದಂಬರಿಕಾರ,ಪದ್ಮಭೂಷಣ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಎಸ್. ಎಲ್ ಭೈರಪ್ಪ ವಿಧಿವಶ

ಬೆಂಗಳೂರು,ಸೆ 24: ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್‌ ಎಲ್‌ ಭೈರಪ್ಪ (94) ಅವರು ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ…

ನಿಟ್ಟೆ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಪೂಜಾ ಮಹೋತ್ಸವ, ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ:ನಿಟ್ಟೆ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.) ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ ವಿಶ್ವಕರ್ಮ ಪೂಜಾ ಮಹೋತ್ಸವವು ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ,…

ಬಿಜೆಪಿ ಹೋರಾಟಕ್ಕೆ ಮಣಿದು ಜಾತಿ ಸಮೀಕ್ಷೆಯಿಂದ 33 ಜಾತಿಗಳನ್ನು ಕೈಬಿಟ್ಟ ಸರ್ಕಾರ: ಶಾಸಕ ವಿ ಸುನಿಲ್ ಕುಮಾರ್‌

ಕಾರ್ಕಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗಾಗಿ ಪಟ್ಟಿ ಮಾಡಿದ ಜಾತಿಗಳ ಯಾದಿಯಲ್ಲಿ ಹಿಂದು ಉಪಜಾತಿಗಳ ಜತೆಗೆ ಮತಾಂತರಗೊಂಡ ಕ್ರಿಶ್ಚಿಯನ್ ಹೆಸರುಗಳನ್ನು ಕೈಬಿಟ್ಟಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ಒಟ್ಟು…