Month: September 2025

ಉಚ್ಚಿಲದಲ್ಲಿ ಮಾದಕವಸ್ತು MDMA ನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರ ಬಂಧನ

ಪಡುಬಿದ್ರೆ, ಸೆ.19: ಕಾಪು ಸಮೀಪದ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಮೈದಾನದ ಬಳಿ ಸೆ.18ರಂದು ಗುರುವಾರ ಇಬ್ಬರು ಯುವಕರು ಎಂಡಿಎಂಎ ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಖಚಿತವಾದ ಮಾಹಿತಿ ಪಡೆದ ಕಾಪು ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಹಾಗೂ ಸಿಬ್ಬಂದಿಗಳು…

ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಬೆಂಗಳೂರು, ಸೆಪ್ಟೆಂಬರ್ 19: ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಬಾನು ಮುಷ್ತಾಕ್ ಅವರು ಈ ಹಿಂದೆ ಹಿಂದೂ…

ಅಂತರಾಷ್ಟ್ರೀಯ ಟ್ವೇಕಾಂಡೋ ಚಾಂಪಿಯನ್: ಮರಿಯಾ ಗೊರಟ್ಟಿ ಶಾಲೆಯ ವಿದ್ಯಾರ್ಥಿ ಮೇಧಾನ್ಶ್ ಗೆ ಚಿನ್ನದ ಪದಕ

ಕಾರ್ಕಳ: ತಾಲೂಕಿನ ಜೋಡುರಸ್ತೆ ಸಾಯಿಪಂಚಮಿಯ ಪ್ರೀತಿ ಮಧುಕರ್ ಶೆಟ್ಟಿ ದಂಪತಿಗಳ ಪುತ್ರ ಮೇಧಾನ್ಶ್ ಮಧುಕರ್ ಶೆಟ್ಟಿ ಹೈದರಾಬಾದ್ ನಲ್ಲಿ ನಡೆದ ಓಪನ್ ಅಂತರಾಷ್ಟ್ರೀಯ ಮಟ್ಟದ ಟೇಕ್ವಾ0ಡೋ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ. ಮೇಧಾನ್ಶ್ ಹಿರ್ಗಾನ ಮರಿಯಾ ಗೊರಟ್ಟಿ ಆಂಗ್ಲ…

ಹೆಬ್ರಿ: ಅಮೃತಭಾರತಿ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮಾಹಿತಿ ಕಾರ್ಯಾಗಾರ

ಹೆಬ್ರಿ, ಸೆಪ್ಟೆಂಬರ್ 18: ಹೆಬ್ರಿ ಪಿ ಆರ್ ಎನ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ‌ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಮಾಹಿತಿ ಕಾರ್ಯಾಗಾರವನ್ನು ಚಾಣಕ್ಯ ಸಂಸ್ಥೆ ಹೆಬ್ರಿ ಸಂಸ್ಥಾಪಕರು , ಉದಯವಾಣಿ ದಿನಪತ್ರಿಕೆಯ ಪತ್ರಕರ್ತರು ಉದಯ್ ಕುಮಾರ್ ಶೆಟ್ಟಿ…

ಬೆಳ್ಮಣ್: ಆನ್‌ಲೈನ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯ ಬಂಧನ- ಮೊಬೈಲ್ ಸಹಿತ 6 ಡೆಬಿಟ್ ಕಾರ್ಡ್, ನಗದು ವಶಕ್ಕೆ

ಕಾರ್ಕಳ: ಬೆಟ್ಟಿಂಗ್ ಆ್ಯಪ್ ಮೂಲಕ ಇತರರೊಂದಿಗೆ ಸೇರಿಕೊಂಡು ಆನ್‌ಲೈನ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಝೀರ್ ಬಂಧಿತ ಆರೋಪಿ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ…

ಅಂತರರಾಷ್ಟ್ರೀಯ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆ: ನಿಟ್ಟೆಯ ಪ್ರಾಧ್ಯಾಪಕ ಡಾ.ಪರ್ವೀಜ್ ಷರೀಫ್ ಬಿ.ಜಿ. ಅವರಿಗೆ ದ್ವಿತೀಯ ಬಹುಮಾನ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ (ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪರ್ವೀಜ್ ಷರೀಫ್ ಬಿ.ಜಿ., ಅವರು ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್ಸಿ) 2025 ರಲ್ಲಿ ಪಿಎಚ್ಡಿ ವಿಭಾಗದ…

ಸೆ. 20 ರಂದು ಕಾರ್ಕಳದಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಕಳ: ಕೇಮಾರು 220/110/11 ಕೆವಿ ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕಾರ್ಕಳ ಐಬಿ ಫೀಡರ್ ನಲ್ಲಿ ಮತ್ತು 110 /11 ಕೆ ವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11 ಕೆವಿ ಕಾರ್ಕಳ ಟೌನ್ ಫೀಡರ್ ನಲ್ಲಿ ಸೆ. 20 ರಂದು…

ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ: ಇಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ

ನವದೆಹಲಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಇಂದು ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲಿದೆ.…

ಮರ್ಣೆ ಪಂಚಾಯತ್ ಪಿಡಿಓ ತಿಲಕರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭ: ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯ: ನಿರ್ಗಮನ ಪಿಡಿಓ ತಿಲಕರಾಜ್

ಕಾರ್ಕಳ, ಸೆ 18: ಪಂಚಾಯತ್ ರಾಜ್ ಇಲಾಖೆ ಸದಾ ಜನರೊಂದಿಗೆ ಇರುವ ಇಲಾಖೆಯಾಗಿದೆ. ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಾಗಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದಾಗ ಪಂಚಾಯತ್ ರಾಜ್ ಆಶಯಗಳು ಈಡೇರುವ ಜೊತೆಗೆ ಜನರ ವಿಶ್ವಾಸ…

ಸಾಣೂರು: ಚಿಲಿಂಬಿ ಹೆದ್ದಾರಿ ಕಾಮಗಾರಿಗೆ ಕೇಂದ್ರ ಅರಣ್ಯ ಸಚಿವಾಲಯದ ಅನುಮೋದನೆ

ಕಾರ್ಕಳ: ಕಳೆದ 2 ವರ್ಷಗಳಿಂದ ಸಾಣೂರಿನ ಚಿಲಿಂಬಿ ಅರಣ್ಯ ಪ್ರದೇಶದಲ್ಲಿನ ಹೆದ್ದಾರಿ ಕಾಮಗಾರಿಗೆ ಎದುರಾಗಿದ್ದ ಸಮಸ್ಯೆ ಇದೀಗ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ವಿಶೇಷ ಪ್ರಯತ್ನದಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ದೊರೆತಿದೆ. ಸಾಣೂರಿನಿಂದ ಮಂಗಳೂರು ಬಿಕರ್ನಕಟ್ಟೆ…