Month: December 2025

ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಿದ್ದಾಪುರ ವಾಸುದೇವ ಭಟ್

ಕಾರ್ಕಳ,ಡಿ.06: ತಾಲೂಕು ಇಪ್ಪತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಿದ್ಧಾಪುರ ವಾಸುದೇವ ಭಟ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ತಿಳಿಸಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಸಿದ್ದಾಪುರದ ಲಕ್ಷ್ಮಣ ಭಟ್ ಮತ್ತು ರಾಧಾಬಾಯಿ ದಂಪತಿ ಪುತ್ರರಾಗಿ…

ಡಿ.13 ರಂದು ಕುಕ್ಕುಂದೂರು KMES ಶಿಕ್ಷಣ ಸಂಸ್ಥೆಯ 42ನೇ ವಾರ್ಷಿಕೋತ್ಸವ

ಕಾರ್ಕಳ, ಡಿ.06:ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕಾರ್ಕಳದ ಕುಕ್ಕುಂದೂರು KMES ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವು ಡಿ.13 ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ತಿಯಾಜ್ ಅಹಮದ್ ತಿಳಿಸಿದರು. ಅವರು ಶನಿವಾರ ಈ ಕುರಿತು ಮಾತನಾಡಿ, ದಶಕಗಳ ಹಿಂದೆ ಕ್ರಾಂತಿಕಾರಕ ಬದಲಾವಣೆ…

ಡಿ.9 ರಂದು ಅಜೆಕಾರು,ಕಾಡುಹೊಳೆ, ಮುನಿಯಾಲು ಬಜಗೋಳಿ ಪರಿಸರದಲ್ಲಿ ಕರೆಂಟಿಲ್ಲ

ಕಾರ್ಕಳ, ಡಿ.06: 33ಕೆವಿ ಸ್ಟೇಷನ್ ಮಾರ್ಗದ ಲೈನ್ ಕಾಮಗಾರಿ ಹಾಗೂ ಹಿರಿಯಡ್ಕದಿಂದ ಅಜೆಕಾರು ಹೋಗುವ 33 ಕೆವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ,ಡಿ.9 ಮಂಗಳವಾರ 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು ಫೀಡರ್ ಗಳಲ್ಲಿ,…

ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರದಲ್ಲಿ ಗಲಾಟೆ: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಚಿಕ್ಕಮಗಳೂರು, ಡಿ.06: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ‌. ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ…

ಡಿ.7 ರಂದು ಕಾರ್ಕಳ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಕಾರ್ಕಳ: 220/110/11 ಕೆವಿ ಕೇಮಾರು ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಫೀಡರ್ ನಲ್ಲಿ, ಮತ್ತು 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಟೌನ್ ಫೀಡರ್‌ನಲ್ಲಿ, ವ್ಯವಸ್ಥಾ ಸುಧಾರಣಾ (ಸ್ಪೇನ್ ಪೋಲ್) ಕಾಮಗಾರಿಯನ್ನು ತುರ್ತಾಗಿ ಹಮ್ಮಿಕೊಂಡಿರುವುದರಿಂದ ಡಿ.07 ಭಾನುವಾರ…

ವಿಶ್ವ ವಿಕಲಚೇತನರ ದಿನಾಚರಣೆ 2025: ಫುಟ್ಬಾಲ್ ನಲ್ಲಿ ಸಾಧನೆಗೈದ ವಿಶೇಷ ವಿದ್ಯಾರ್ಥಿನಿ ಪ್ರೀತಿ ಅವರಿಗೆ ಸನ್ಮಾನ

ಉಡುಪಿ,ಡಿ.05: ರಾಷ್ಟಮಟ್ಟದ ಫುಟ್ ಬಾಲ್ ನಲ್ಲಿ ಸಾಧನೆಗೈದ ವಿಜೇತ ವಿಶೇಷ ವಿದ್ಯಾರ್ಥಿನಿ ಪ್ರೀತಿ ಅವರನ್ನು ಉಡುಪಿ ಪುರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್,…

ನಾಳೆ, ಡಿ 06ರಂದು ಡಾ. ಬಿ. ಆರ್. ಅಂಬೇಡ್ಕರ್ `ಮಹಾ ಪರಿನಿರ್ವಾಣ ದಿನ’: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಆಚರಣೆಗೆ ಸೂಚನೆ

ಬೆಂಗಳೂರು, ಡಿ.05: ನಾಳೆ ಡಿ 06ರಂದು ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವಾಗಿದ್ದು, ಈ ದಿನವನ್ನು ರಾಜ್ಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಲಾಗಿದೆ. ಈ ಕುರಿತು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ…

ಈದು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಈದು ಕಂಠಾವು ನಿವಾಸಿ ಗಂಗಯ್ಯ ದೇವಾಡಿಗ ಮೃತಪಟ್ಟವರು. ಗಂಗಯ್ಯ ಅವರು ಆರು ತಿಂಗಳ ಹಿಂದೆ ಹೊಟ್ಟೆನೋವು ಮತ್ತು ಮಲವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ…

ಸಾಲಗಾರರಿಗೆ ಬಿಗ್ ರಿಲೀಫ್: ರೆಪೋ ದರವನ್ನು ಶೇ.5.25ಕ್ಕೆ ಇಳಿಸಿದ RBI

ನವದೆಹಲಿ,ಡಿ.05: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ರೆಪೊ ದರವನ್ನು ಶೇ. 5.5ರಿಂ ಶೇ. 5.25ಕ್ಕೆ ಇಳಿಕೆ ಮಾಡಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ದ್ವೈಮಾಸಿಕ ಸಭೆಯ ನಂತರ, ರೆಪೋ ದರವನ್ನು 25 ಬೇಸಿಸ್…

ಶೀಘ್ರದಲ್ಲೇ ದೇಶಾದ್ಯಂತ ‘ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ’ ಅಳವಡಿಕೆ : ಕೇಂದ್ರ ಸಚಿವ ನಿತಿನ್ ಗಡ್ಕರಿ

ನವದೆಹಲಿ,ಡಿ.04 : ಪ್ರಸ್ತುತ ಇರುವ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಒಂದು ವರ್ಷದೊಳಗೆ ಹಂತಹಂತವಾಗಿ ತೆಗೆದುಹಾಕಿ, ಹೆದ್ದಾರಿ ಬಳಕೆದಾರರಿಗೆ ಸುಗಮ ಅನುಭವವನ್ನು ಒದಗಿಸಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ…