ನವದೆಹಲಿ: ಪ್ರಸ್ತುತ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ್ದು, 2030 ರ ವೇಳೆಗೆ ಅಂದಾಜು 7.3 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ಆರ್ಥಿಕತೆಯ ಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ದೇಶವಾಗಲಿದೆ ಎಂದು ಎಸ್ &ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತನ್ನ ಇತ್ತೀಚಿನ ಪಿಎಂಐ ವರದಿಯಲ್ಲಿ ತಿಳಿಸಿದೆ.
2021 ಮತ್ತು 2022ರ ರಲ್ಲಿನ ಎರಡು ವರ್ಷಗಳ ಅವಧಿಯ ತ್ವರಿತ ಆರ್ಥಿಕ ಬೆಳವಣಿಗೆಯ ನಂತರ, ಭಾರತೀಯ ಆರ್ಥಿಕತೆಯು 2023 ಕ್ಯಾಲೆಂಡರ್ ವರ್ಷದಲ್ಲಿ ಸುಸ್ಥಿರ ಬಲವಾದ ಬೆಳವಣಿಗೆಯನ್ನು ತೋರಿಸುತ್ತಿದೆ.ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಜಿಡಿಪಿ ಶೇಕಡಾ 6.2ರಿಂದ 6.3 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾದ ಭಾರತವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಬೆಳವಣಿಗೆ ಕಂಡಿದೆ.
ಕಳೆದ ದಶಕದಲ್ಲಿ ಭಾರತಕ್ಕೆ ವಿದೇಶಿ ನೇರ ಹೂಡಿಕೆಯ ಒಳಹರಿವಿನ ವೇಗವರ್ಧನೆಯು ಆರ್ಥಿಕತೆಗೆ ಬಲನೀಡಿದೆ.ಕಳೆದ 2022ರಲ್ಲಿ 3.5 ಟ್ರಿಲಿಯನ್ ಡಾಲರ್ ಇದ್ದ ಭಾರತದ ಜಿಡಿಪಿ 2030ರ ವೇಳೆಗೆ 7.3 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ. ಆರ್ಥಿಕ ವಿಸ್ತರಣೆಯ ಈ ತ್ವರಿತ ವೇಗವು 2030 ರ ವೇಳೆಗೆ ಭಾರತೀಯ ಜಿಡಿಪಿಯ ಗಾತ್ರವು ಜಪಾನಿನ ಜಿಡಿಪಿಯನ್ನು ಮೀರಲಿದೆ, ಇದು ಭಾರತವನ್ನು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಎರಡನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತದೆ ಎಂದು ತನ್ನ ವರದಿಯಲ್ಲಿ ಹೇಳಿದೆ.
ಭಾರತದ ಹಾಲಿ ಜಿಡಿಪಿಯ ಗಾತ್ರವು ಬ್ರಿಟನ್ ಮತ್ತು ಫ್ರಾನ್ಸ್ ನ ಜಿಡಿಪಿಗಿಂತ ದೊಡ್ಡದಾಗಿದೆ. ಭಾರತದ ಜಿಡಿಪಿ ಜರ್ಮನಿಯನ್ನು ಮೀರಿಸುವ ಸಾಧ್ಯತೆಗಳಿವೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ