Share this news

ಕಾರ್ಕಳ:: ಯಕ್ಷದೇಗುಲ ಕಾಂತಾವರದ 23 ನೇ ವರ್ಷದ ಕಾರ್ಯಕ್ರಮದ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ “ಯಕ್ಷೋಲ್ಲಾಸ 2025″ಕಾರ್ಯಕ್ರಮವು ಕಾಂತಾವರದಲ್ಲಿ  ಕ್ಷೇತ್ರದಲ್ಲಿ  ಜುಲೈ 20 ರಂದು ಬೆಳಿಗ್ಯೆ 10.00 ರಿಂದ ನಡೆಯಲಿದೆ.
ಗ್ರಾಮ ಪಂ. ಅದ್ಯಕ್ಷ ರಾಜೇಶ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಬಾರಾಡಿಬೀಡು ಸುಮತಿ ಆರ್. ಬಲ್ಲಾಳ್ 2025 ರ ಯಕ್ಷೋಲ್ಲಾಸವನ್ನು ಉದ್ಘಾಟಿಸಲಿರುವರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬೇಲಾಡಿ ಎಂ ವಿಠಲ  ಶೆಟ್ಟಿಯವರು ಶುಭಾಶಂಸನೆಗೈವರು. ಬಳಿಕ  ಪಟ್ಲ ಸತೀಶ್ ಶೆಟ್ಟಿ, ಪ್ರದೀಪ್ ಗಟ್ಟಿ ಹಾಗೂ  ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ತರಣಿಸೇನ ಕಾಳಗ”  ಆಟ ಜರಗಲಿದೆ.
ಮಧ್ಯಾಹ್ನ  ಕಾಂತಾವರ ಕ್ಷೇತ್ರದ ಧರ್ಮದರ್ಶಿಗಳಾದ ಡಾ.ಜೀವಂಧರ್ ಬಲ್ಲಾಳರ ಅದ್ಯಕ್ಷತೆಯಲ್ಲಿ , ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ನಿವೃತ್ತ  ಕಲಾವಿದರಾದ ಬಿ.ಸಿ.ರೋಡು ಶಿವರಾಮ ಜೋಗಿಯವರಿಗೆ ಯಕ್ಷಗಾನದ ಸವ್ಯಸಾಚಿ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ, ಹಾಗೂ  ಕಟೀಲು ಮೇಳದ ನಿವೃತ್ತ ಕಲಾವಿದ ಗುಂಡಿಮಜಲು ಗೋಪಾಲ ಭಟ್ರಿಗೆ ಯಕ್ಷರಂದ ಸಿಡಿಲಮರಿ ಖ್ಯಾತಿಯ ಪುತ್ತೂರು  ದಿ.ಡಾ.ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ ನೀಡಿ ನಗದು ಪುರಸ್ಕಾರದೊಂದಿಗೆ ಗೌರವಿಸಲಾಗುವುದು.
ನಿವೃತ್ತ ಅದ್ಯಾಪಕ ,  ಕಲಾವಿದ ಪಶುಪತಿ ಶಾಸ್ತ್ರೀಯವರು
ಸಂಸ್ಮರಣಾ ಹಾಗೂ ಅಭಿನಂದನಾ ಭಾಷಣ ಮಾಡುವರು. ಅತಿಥಿಗಳಾಗಿ ಕಾರ್ಕಳ ಕಾಬೆಟ್ಟು ಎಂ.ಪಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಉಪನ್ಯಾಸಕ ಪ್ರೊ.ಕೃಷ್ಣ ಭಟ್ ಭಾಗವಹಿಸಲಿದ್ದಾರೆ.
ಬಳಿಕ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾದ್ಯಾಯ, ರವಿರಾಜ್ ,,ಅಶೋಕ ಭಟ್ ಉಜಿರೆ,,  ಪ್ರೊ.ಪವನ್ ಕಿರಣ್ಕೆರೆ,, ಸುರೇಶ್ ಕುದ್ರೆಂತಾಯ,, ದಿನೇಶ್ ಶೆಟ್ಟಿ ಕಾವಳಕಟ್ಟೆ,, ಮಹೇಶ್ ಕನ್ಯಾಡಿ ,, ಆನಂದ ಗುಡಿಗಾರ್,   ಶಿತಿಕಂಠ ಭಟ್,,  ಶಿವಪ್ರಸಾದ್ ಭಟ್,””.  ಇವರ ಕೂಡುವಿಕೆಯಲ್ಲಿ “”ಭೀಷ್ಮ ಪ್ರತಿಜ್ಞೆ”” ತಾಳಮದ್ದಳೆ ಕೂಟ, ಕಾಂತಾವರದ ಬಾಲ ಕಲಾವಿದರಿಂದ “”ರತಿಕಲ್ಯಾಣ”” ಬಯಲಾಟ ಜರಗಲಿದೆ ಎಂದು ಯಕ್ಷದೇಗುಲದ ಕಾರ್ಯಾದ್ಯಕ್ಷ ಕಲಾವಿದ ಮಹಾವೀರ ಪಾಂಡಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *