Share this news

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಬಸಲಿಕಾದಲ್ಲಿ ಈ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಜ.26ರಿಂದ ಜ 30ರವರೆಗೆ ನಡೆಯಲಿದ್ದು, ಈ ಕುರಿತು ಬಸಿಲಿಕಾ ವತಿಯಿಂದ ಎಲ್ಲಾ ಪೂರ್ವಸಿದ್ಧತೆಗಳು ಮುಗಿದಿದ್ದು ಆಧ್ಯಾತ್ಮಿಕ ನೆಮ್ಮದಿ ಹಾಗೂ ಮಾನಸಿಕ ಸಂತೃಪ್ತಿಗಾಗಿ ಬರುವ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚರ್ಚ್ನ ನಿರ್ದೇಶಕರಾದ ಫಾ. ಅಲ್ಬನ್ ಡಿಸೋe ಹೇಳಿದರು
ಅವರು ಜ 16ರಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಈ ಬಾರಿಯ ಸಾಂತ್ ಮಾರಿ ಉತ್ಸವದಲ್ಲಿ ವಿಶೇಷವಾಗಿ ಎರಡು ತೀರಾ ಬಡ ಕುಟುಂಬಗಳಿಗೆ ಬಸಿಲಿಕಾ ವತಿಯಿಂದ ಉಚಿತವಾಗಿ ಮನೆಗಳನ್ನು ಕಟ್ಟಿಕೊಡಲಾಗುತ್ತದೆ ಎಂದರು. ಭಾನುವಾರದಿಂದ ಆರಂಭವಾಗುವ ಪ್ರಾರ್ಥನೆಯಲ್ಲಿ ಮಕ್ಕಳಿಗಾಗಿ ಪೂಜೆ ತದನಂತರ ಸೋಮವಾರ ಅಸ್ವಸ್ಥರಿಗೆ ಪ್ರಾರ್ಥನೆ ನೆರವೇರಿಸಲಾಗುತ್ತದೆ ಎಂದರು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 31 ಹಾಗೂ ಕನ್ನಡ ಭಾಷೆಯಲ್ಲಿ 7 ಸೇರಿ 38 ದಿವ್ಯ ಪೂಜೆಗಳನ್ನು ನೆವೇರಿಸಲಾಗುತ್ತದೆ ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಬೆಳ್ತಂಗಡಿ, ಬಾರುಯಿಪುರ್, ಮಂಗಳೂರು ಮತ್ತು ಉಡುಪಿಯ ಧರ್ಮಗುರುಗಳು ದಿವ್ಯ ಪೂಜೆಯನ್ನು ಅರ್ಪಿಸಲಿದ್ದಾರೆ.

 

 

ಬಸಿಲಿಕಾದ ಬಲ ಬದಿಯಲ್ಲಿ ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್ ಕ್ರೆöÊಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳಿಗೆ ಶಾರೀರಿಕ ಅಗತ್ಯತೆ ಪೂರೈಸಲು ಬಸಿಲಿಕದ ವಠಾರದಲ್ಲಿ ಪೋಲಿಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಆಧುನಿಕ ಸವಲತ್ತುಗಳುಳ್ಳ ಶೌಚಾಲಯಗಳು, ಗುರು ನಿವಾಸದ ಎಡ ಬದಿಂiÄÀ ಲ್ಲಿ 20 ಶೌಚಾಲಯಗಳು ಹಾಗೂ ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಹಿರಿಯ ನಾಗರಿಕರಿಗಾಗಿ ಕೊಮೊಡ್ ಮಾದರಿಯ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕಾದ ವಠಾರದಲ್ಲಿ ಸುಮಾರು 72 ಸಿ.ಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದರು.

ಸAಚಾರ ವ್ಯವಸ್ಥೆಯ ಕುರಿತು ವಿವರಿಸಿದ ಅವರು, ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳು ದಟ್ಟಣೆಯಿಂದ ಭಕ್ತಾಧಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅªಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಮುಂದೆ ಬ್ಯಾರಿಕೇಡ್ ಹಾಕಿರುವ ತನಕ ಮಾತ ್ರ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ ಅಲ್ಲದೇ ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲಾರೆನ್ಸ್ ಹೈಸ್ಕೂಲ್ ನ ಆಟದ ವಿಶಾಲವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆಗಾಗಿಯೇ ಕಾದಿರಿಸಲಾಗಿದೆ ಎಂದರು.ವಿಶೇಷವಾಗಿ ಜ.27ರಂದು ಸೋಮವಾರ್ ರಾತ್ರಿ 8 ರಿಂದ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜಿ. ಕೆ. ಶ್ರೀನಿವಾಸ್ ಸಾಲ್ಯಾನ್ ವಿರಚಿತ ಸಂತ ಲೋರೆನ್ಸರ ಮಹಾತ್ಮೆ ಎಂಬ ಕನ್ನಡ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ರೆ. ಫಾ. ಲ್ಯಾರಿ ಪಿಂಟೋ, ಅಧ್ಯಾತ್ಮಿಕ ಗುರುಗಳಾದ ರೆ. ಫಾ. ರೋಮನ್ ಮಸ್ಕರೇನ್ಹಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ,ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಸದಸ್ಯರಾದ ವಂದೀಶ್ ಮಥಾಯಿಸ್ ಹಾಗೂ ವಲೇರಿಯನ್ ಪಾಯ್ಸ್ ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *