ಕಾರ್ಕಳ: ಕಳೆದ 10 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಕಾರ್ಕಳದ ಛತ್ರಪತಿ ಫೌಂಡೇಶನ್ ನ ಸೇವಾ ಕೈಂಕರ್ಯವನ್ನು ಗುರುತಿಸಿದ ಉಡುಪಿ ಜಿಲ್ಲಾಡಳಿತವು ಈ ಸಂಸ್ಥೆಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಛತ್ರಪತಿ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷರಾದ ಗಿರೀಶ್ ರಾವ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿö್ಮÃ ಹೆಬ್ಬಾಳ್ಕರ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ ಸುವರ್ಣ,ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮುಂತಾದ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
ಛತ್ರಪತಿ ಫೌಂಡೇಶನ್ ನಡೆಸಿಕೊಂಡು ಬಂದ ಸೇವಾಕಾರ್ಯಗಳು:
ಛತ್ರಪತಿ ಫೌಂಡೇಶನ್ ಪ್ರತೀ ವರ್ಷ ಪ್ರಸಾದ್ ನೇತ್ರಾಲಯ ಉಡುಪಿ ಇದರ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದ ಅರ್ಹ ಫಲಾನುಭವಿಗಳಿಗೆ ಉಚಿತ ಕಣ್ಣಿನ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ,ಬಡ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ 50 ಸಾವಿರ ರೂ. ಮೌಲ್ಯದ ಪುಸ್ತಕ ವಿತರಣೆ, 25 ಸಾವಿರ ರೂ. ವಿದ್ಯಾರ್ಥಿವೇತನ ಹಾಗೂ ರೂ. 25 ಸಾವಿರ ಸಹಾಯಧನ ವಿತರಣೆ,ಶಿರ್ಡಿ ಸಾಯಿ ಡಿಗ್ರಿ ಕಾಲೇಜಿನ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ 25 ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪದವಿ ಶಿಕ್ಷಣ,ವಿಶೇಷ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಕಳದ ವಿಜೇತ ವಿಶೇಷ ಶಾಲೆಗೆ ಕಂಪ್ಯೂಟರ್,ಟೇಬಲ್, ಸಮವಸ್ತ್ರ, ತಟ್ಟೆ ಬಟ್ಟಲು ಹಾಗೂ ಆಹಾರ ಪದಾರ್ಥಗಳ ಕೊಡುಗೆ, ಕಾರ್ಕಳದ ಸಂಗೀತ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾಯ್ಸ್ ಆಫ್ ಕಾರ್ಕಳ ರಿಯಾಲಿಟಿ ಶೋ ಮಾದರಿಯ ಕಾರ್ಯಕ್ರಮ,ಧಾರ್ಮಿಕ ಕೇಂದ್ರಗಳಿಗೆ ಅವಶ್ಯವಿರುವ ಕಾಣಿಕೆ ಡಬ್ಬಿ, ಇನ್ವರ್ಟರ್ ಹಾಗೂ ಸಾಮಾಗ್ರಿಗಳ ಕೊಡುಗೆ, ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಕಾರದೊಂದಿಗೆ “ಸತ್ಸಂಗ” ಕಾರ್ಯಕ್ರಮಗಳ ಆಯೋಜನೆ,ಛತ್ರಪತಿ ಶಿವಾಜಿ ಜಯಂತಿ ಆಚರಣೆ ಹಾಗೂ ಅನೇಕ ಸ್ಪರ್ಧೆಗಳ ಆಯೋಜನೆ,ರಾಜ್ಯ ಮಟ್ಟದ ಕಥೆ, ಬರಹ ಕಾರ್ಯಕ್ರಮಗಳ ಆಯೋಜನೆ,ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಸ್ಫೋಟ್ಸ್ & ಕಲ್ಬರಲ್ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು,ಶಿರ್ಡಿ ಸಾಯಿ ಡಿಗ್ರಿ ಕಾಲೇಜಿಗೆ ಕಂಪ್ಯೂಟರ್, ಬ್ಯಾಗ್ ಹಾಗೂ ಪುಸ್ತಕಗಳ ಹಸ್ತಾಂತರ,ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಸಂಸ್ಥೆಯು ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ,ಮನ್ವಂತರ ಚಾರಿಟೇಬಲ್ ಟ್ರಸ್ಟ್ನ ಜೊತೆ ಸೇರಿ ಶಿಕ್ಷಣ ನೀತಿ ಕಾರ್ಯಾಗಾರ,ಆರ್ಥಿಕವಾಗಿ ಹಿಂದುಳಿದವರಿಗೆ ಶುಭ ಕಾರ್ಯಗಳಿಗೆ ಪ್ರೋತ್ಸಾಹ,ವಿಶೇಷ ಮಕ್ಕಳಿಗೆ ಸಹಾಯಧನ ವಿತರಣೆ,ಬೈಕ್ ರ್ಯಾಲಿ ಆಯೋಜನೆ,ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ “ರಾಷ್ಟ್ರೀಯ ಭಾವೈಕ್ಯತೆ”,ಯುವ ಭಾರತ್ ಪುರಸ್ಕಾರ್ ಪ್ರಶಸ್ತಿ,ವಿಶೇಷ ಚೇತನರಿಗೆ ವೀಲ್ಚೇರ್ಗಳ ಕೊಡುಗೆ,ಹುತಾತ್ಮರ ಪುತ್ಥಳಿಗೆ ನಮನ,ಅಂಗನವಾಡಿ ಶಾಲೆಗೆ ಕುರ್ಚಿಗಳ ಕೊಡುಗೆ ಹೀಗೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ.
ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯಲ್ಲಿ ಮೂಡಿಬಂದ ಸಂಸ್ಥೆ ಛತಪತಿ ಫೌಂಡೇಶನ್ ಸೇವಾ ಪರಮೋ ಧರ್ಮ ಎನ್ನುವ ತತ್ವವನ್ನು ಮೈಗೂಡಿಸಿಕೊಂಡು ಬೆಳೆದಂತಹ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ, ಶೈಕ್ಷಣಿಕ, ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಒತ್ತನ್ನು ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಅರ್ಹ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರತಿವರ್ಷ ವಾಯ್ಸ್ ಆಫ್ ಕಾರ್ಕಳ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಯುವ ಪ್ರತಿಭಾವಂತ ಗಾಯಕರಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರವನ್ನು ನೀಡಲಾಗಿದೆ.
ಸಮಾಜದ ಸಾಧಕರ ಸಾಧನೆ ಗುರುತಿಸಿ ಗೌರವಿಸುವಂತ ಕೆಲಸ ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತವನ್ನು ನೀಡಿ ಮುಖ್ಯವಾಹಿನಿಯಲ್ಲಿ ಗುರುತಿಸಲು ಪ್ರೇರಣೆ ನೀಡಿದೆ. ಗ್ರಾಮಾಂತರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವಕ ಮಂಡಲಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಿಗೆ ಉತ್ತೇಜನವನ್ನು ನೀಡಲಾಗುತ್ತಿದೆ.
ದೇಶ ಸೇವೆ ಮಾಡಿದಂತೆ ಅನೇಕ ಸೈನಿಕರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಹಾಗೂ ಅವರಿಗೆ ಅಮೃತ ಪುರಸ್ಕಾರ ನೀಡಿ ಗೌರವಿಸಲಾಗಿದೆ.ರಾಜ್ಯಮಟ್ಟದ ಕಥೆ ಕವನ ಸ್ಪರ್ಧೆಗಳನ್ನು ಪ್ರತಿ ವರ್ಷ ಆಯೋಜಿಸುತ್ತಾ ಬರುತ್ತಿದ್ದು, ಬರಹಗಾರರಿಗೆ ಪ್ರೋತ್ಸಾಹ ನೀಡಲಾಗಿದೆ. ದೇಶದ ನಾಡು ನುಡಿಗಳನ್ನು ಗೌರವಿಸುವಂತಹ ಹಾಗೂ ದೇಶದ ನೆಲ ಜಲ ಇವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕಳೆದ 10 ವರ್ಷಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ನಿರೀಕ್ಷೆಗೆ ಮೀರಿ ಸಹಾಯಹಸ್ತವನ್ನು ನೀಡಿ ಒಂದು ಮಾದರಿ ಸೇವಾ ಸಂಸ್ಥೆಯಾಗಿ ಎಲೆಮರೆಯ ಕಾಯಿಯಂತೆ ಸಮರ್ಪಣಾಭಾವದಿಂದ ಯಾವುದೇ ಫಲಾಪೇಕ್ಷೆ ಇಲ್ಲದ ಸೇವಾ ಕೈಕಂರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದೆ.ರಾಷ್ಟ್ರಭಕ್ತಿ, ಜಾಗೃತಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಎಲ್ಲರನ್ನು ಜೊತೆಗೂಡಿಕೊಂಡು ಹೋಗುವ, ಸಂದೇಶ ನೀಡುವ “ಛತ್ರಪತಿ ಲಾಂಛನ”ದೊಂದಿಗೆ ಸಮಾಜಸೇವೆಯ ಮನೋಭಾವದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ.