Share this news

ಕಾರ್ಕಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಕಾರ್ಕಳ ಕಾಂಗ್ರೆಸ್ ಹತಾಶ ಭಾವನೆಯಲ್ಲಿದ್ದು, ಕಾರ್ಕಳದಾದ್ಯಂತ ನಡೆಯುವ ಸಾಮಾಜಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ತೆರೆಮರೆಯಲ್ಲಿ ಅಡ್ಡಿಪಡಿಸುತ್ತಾ, ಸಂಘಟಕರಿಗೆ, ಸ್ಥಳೀಯ ಯುವಕರಿಗೆ ತೊಂದರೆ ನೀಡುತ್ತಾ ಆ ನಂತರ ಕಾರ್ಕಳ ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕ ಅಲ್ಲಿಗೆ ಪ್ರವೇಶಿಸಿಸಲು ಪ್ರಯತ್ನಿಸಿ ಆ ಕಾರ್ಯಕ್ರಮದ ರುವಾರಿ ತಾನೇ ಎಂದು ಫೋಸ್ ನೀಡುತ್ತಿರುವುದು ಕಾರ್ಕಳ ಕಾಂಗ್ರೆಸ್ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದು ತೋರಿಸುತ್ತದೆ. ರಾಜ್ಯಕ್ಕೆ ಮುಖ್ಯಮಂತ್ರಿಯವರನ್ನು ನೀಡಿದ ಕಾರ್ಕಳ ಕಾಂಗ್ರೆಸ್ಸಿನ ಅಧೋಗತಿ ಎದ್ದು ಕಾಣುತ್ತಿದೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಕಾರ್ಕಳ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಗಿದ್ದಾರೆ.

ಶಿರ್ಲಾಲಿನಲ್ಲಿ ಇಂತಹದೇ ಒಂದು ಪ್ರಯತ್ನಕ್ಕೆ ಕೈ ಹಾಕಿ ಕರಾವಳಿಯ ಸಂಸ್ಕöÈತಿಯ ಪ್ರತೀಕವಾಗಿದ್ದ ಯಕ್ಷಗಾನ ಪ್ರದರ್ಶನದ ಬಗ್ಗೆ ದ್ವನಿವರ್ಧಕ ಬಳಸಲು ಪರವಾನಿಗೆ ಪಡೆದಿಲ್ಲ ಎಂಬ ಕಾರಣ ಒಡ್ಡಿ ತಡೆ ಕಾರ್ಯಕ್ರಮಕ್ಕೆ ತಡೆಯೊಡ್ಡಲು ಪ್ರಯತ್ನಿಸಿ, ಊರ ಜನರು ಸಿಡಿದೆದ್ದ ಕಾರಣ ಹಿಂಗು ತಿಂದ ಮಂಗನAತಾಗಿದ್ದಾರೆ. ಸಾರ್ವಜನಿಕವಾಗಿ ಕಾರ್ಕಳ ಕಾಂಗ್ರೆಸ್ ನಾಯಕರ ಮಾನ ಹರಾಜಾದಾಗ ಆ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರ ಪಾತ್ರ ಏನು ಇಲ್ಲ, ಪುರಾವೆ ನೀಡಿ ಎಂದು ಕೇಳುತ್ತಿರುವುದು, ಮುಡಾ ಹಗರಣದಲ್ಲಿ ನಮ್ಮ ಪಾತ್ರ ಇಲ್ಲ,
ಪುರಾವೆ ನೀಡಿ ಎಂದು ಹೇಳಿಕೆ ನೀಡುತ್ತಾ ಗುಟ್ಟಾಗಿ ಸೈಟ್‌ಗಳನ್ನು ಹಿಂತಿರುಗಿಸಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ನಡೆ ನೆನಪಿಸುತ್ತಿದೆ.

ಅಜೆಕಾರು ಪೋಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಾತಿನ ವಿಡಿಯೋವನ್ನು ಗಮನಿಸಿದರೆ ಅದರಲ್ಲಿ ಕೇಳಿ ಬರುವ ದೂರುದಾರನ ಮೊಬೈಲ್ ನಂಬರ್ ನಿಮ್ಮ ಸ್ಥಳೀಯ ನಾಯಕನದ್ದು ಹೌದೇ ಅಲ್ಲವೇ ಎಂದು ತಿಳಿಯುತ್ತದೆ. ಕಾಂಗ್ರೆಸ್‌ನ ಸ್ವಯಂ ಘೋಷಿತ ನಾಯಕರುಗಳು ಕಾರ್ಕಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ಅತಿಥಿಯಾಗಿ ಕರೆಯಬೇಕೆನ್ನುವ ಉತ್ಕಟ ಮನೋಭಾವನೆ ಹೊಂದಿದ್ದು, ಅವರು ಜನ ಸೇವೆ ಮಾಡಿ ಜನರ ವಿಶ್ವಾಸಗಳಿಸಿ ಕಾರ್ಯಕ್ರಮಕ್ಕೆ ಅಹ್ವಾನ ಗಿಟ್ಟಿಸಿಕೊಳ್ಳಬೇಕು ವಿನಃ ಕಾರ್ಯಕ್ರಮ ಸಂಘಟಕರಿಗೆ ತೊಂದರೆ ನೀಡಿ ಅಹ್ವಾನ ಪಡೆದುಕೊಳ್ಳುವುದಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ನಿಮ್ಮದೇ ನೇತೃತ್ವದ ಸರಕಾರ ಇರುವುದರಿಂದ ಕಾರ್ಕಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮನ್ನು ಖಾಯಂ ಆಹ್ವಾನಿತರನ್ನಾಗಿ ಮಾಡುವ ಬಗ್ಗೆ ಸರಕಾರದ ವತಿಯಿಂದ ಸುತ್ತೋಲೆ ಹೊರಡಿಸಲು ಪ್ರಯತ್ನಿಸಿ. ಜನ ನಿಮ್ಮ ವಿರುದ್ಧ ಈಗಾಗಲೇ ತಿರುಗಿ ಬಿದ್ದಿದ್ದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಕಾರ್ಕಳ ಕಾಂಗ್ರೆಸ್‌ನ ಅವನತಿ ಶತಸಿದ್ದ ಎಂದು ರವೀಂದ್ರ ಮೊಯ್ಲಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *