ಬೆಂಗಳೂರು: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ವಿಚಾರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದು, ಈ ಕುರಿತು ಸಿಎಂ ಇಂದು ಅಧಿಕಾರಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ
ಇಂದು(ಸೋಮವಾರ) ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮುಖ 5 ಇಲಾಖೆಗಳ ಉನ್ನತ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. 5 ಗ್ಯಾರಂಟಿಗಳ ವಿವರದೊಂದಿಗೆ ಸಭೆಗೆ ಬರುವಂತೆ ಈಗಾಗಲೇ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಸಭೆಯಲ್ಲಿ 5 ಇಲಾಖೆಗಳ ಸಚಿವರೂ ಕೂಡ ಭಾಗಿಯಾಗಲಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕಲು ಸೂಚನೆ ನೀಡಿದ್ದು, 5 ಗ್ಯಾರಂಟಿ ಯೋಜನೆ ಜಾರಿಗೆ ತರುವ ಸಂಬAಧ ಅಧಿಕಾರಿಗಳಿಗೆ ಅಂಕಿಅAಶಗಳ ಸಂಗ್ರಹಣೆ ಮಾಡುವಂತೆ ಹಾಗೂ ಗ್ಯಾರಂಟಿ ಯೋಜನೆಗಳ ಜಾರಿಗೆ ಎಷ್ಟು ಹಣ ಬೇಕು ಯಾವ ರೀತಿ ಯೋಜನೆಗಳನ್ನು ಜಾರಿಗೆ ತರಬೇಕು ಮಹಿಳೆಯರಿಗೆ 2 ಸಾವಿರ ರೂ. ನೀಡಲು ಅಂಕಿ-ಅAಶಗಳನ್ನು ಸಂಗ್ರಹಿಸುವAತೆ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ
ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳು:
ಗೃಹಲಕ್ಷಿö್ಮÃ ಯೋಜನೆ ಪ್ರತಿತಿಂಗಳು ಮಹಿಳೆಯರಿಗೆ 2 ಸಾವಿರ ರೂ.
ಗೃಹಜ್ಯೋತಿ- 200 ಯುನಿಟ್ ವಿದ್ಯುತ್ ಉಚಿತ
ಅನ್ನಭಾಗ್ಯ-10 ಕೆಜಿ ಅಕ್ಕಿ ಉಚಿತ
ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ
ಯುವನಿಧಿ- ಪದವಿಧರರಿಗೆ 3 ಸಾವಿರ ರೂ. ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 1,500 ರೂ.ಸಿಗಲಿದೆ.