Share this news
ಉಡುಪಿ: ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ನಂಬಿಸಿ, ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. 
ಉಡುಪಿ ನಿವಾಸಿ ತಬಸ್ಸುಮ್ ತಾಜ್‌ (40) ಎಂಬಾಕೆ ಇದುವರೆಗೆ ಎಂಟು ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ ಎನ್ನಲಾಗಿದೆ. 
ಮದುವೆಯಾಗಿ ಹೆಂಡತಿಯಿಂದ ದೂರ ಇರುವ ಸಾಕಷ್ಟು ಹಣ ಹೊಂದಿರುವ ಗಂಡಸರೇ ಈಕೆಯ ಟಾರ್ಗೆಟ್‌,ಅವರನ್ನು ಪುಸಲಾಯಿಸಿ ಮದುವೆಯಾಗಿ ಹಣದ ಪೀಕಿದ ಬಳಿಕ ಈಕೆ ಆತನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗುತ್ತಿದ್ದಳು.
ಈಕೆ ಕೇವಲ ಮದುವೆ ಮಾಡಿ ವಂಚಿಸಿದ್ದು ಮಾತ್ರವಲ್ಲದೇ
ಹೀನಾ ಎಂಟರ್‌ಪ್ರೈಸಸ್‌ ಎಂಬ ಕಚೇರಿ ಮಾಡಿಕೊಂಡು ಮುದ್ರಾ ಲೋನ್‌, ಸರ್ಕಾರಿ ನೌಕರಿ, ಮೈನಾರಿಟಿ ಲೋನ್‌, ವಿದ್ಯಾರ್ಥಿಗಳ ಸ್ಕಾಲರ್ಶಿಪ್‌ ಕೊಡಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. 18 ವರ್ಷದಿಂದ ಇದನ್ನೇ ಬ್ಯುಸಿನೆಸ್‌ ಮಾಡಿಕೊಂಡಿರುವ ಈಕೆ, ಯು.ಟಿ. ಖಾದರ್‌ ಬಳಿ ಬ್ಲಾಕ್‌ ಮನಿ ಇದೆ, ಅದನ್ನು ವೈಟ್‌ ಮಾಡಲು ಈ ಬ್ಯುಸಿನೆಸ್‌ ಮಾಡುತ್ತಿದ್ದೇವೆ ಎಂದೆಲ್ಲಾ ಸುಳ್ಳು ಹೇಳಿ ಜನರನ್ನು ನಂಬಿಸಿದ್ದಾಳೆ.
1 ಕೋಟಿ ಲೋನ್‌ ಬೇಕಾದರೆ 15 ಲಕ್ಷ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್‌ ಕೊಡಲಾಗುತ್ತದೆ ಎಂಬ ಭರವಸೆ ನೀಡಿ ವಂಚಿಸುತ್ತಿದ್ದಳು. 
ರಾಜ್ಯಾದ್ಯಂತ 38 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಿದ್ದಾಳೆ ಎನ್ನಲಾಗಿದೆ. ಹಣ ವಾಪಾಸ್‌ ಕೇಳುವವರಿಗೆ ಕ್ರಿಮಿನಲ್‌ ಲಾಯರ್‌ ಮೂಲಕ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಈ ಲೇಡಿ, ಚೆಕ್‌ ಬರೆಸಿಕೊಂಡು ಚೆಕ್‌ ಬೌನ್ಸ್‌ ಕೇಸ್‌ ದಾಖಲಿಸುವ ಬೆದರಿಕೆಯನ್ನೂ ಒಡ್ಡುತ್ತಿದ್ದಳು ಎಂಬ ದೂರುಗಳು ಕೇಳಿಬಂದಿವೆ. 
ಈಕೆಯ ವಂಚನೆ ತಿಳಿದು ಆರನೇ ಗಂಡ ರಾಝಾ ಹುಸೇನ್‌ ಎಂಬಾತ ಪ್ರಶ್ನಿಸಿದ್ದು, ಆತನ ಮೇಲೂ ಕೇಸ್‌ ದಾಖಲಿಸುವ ಬೆದರಿಕೆಯೊಡ್ಡಿದ್ದಳು ಎನ್ನಲಾಗಿದೆ.ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ರಾಜ್ಯದ ಹಲವೆಡೆ ಮಹಿಳೆಯ ವಿರುದ್ಧ ವಂಚನೆ ಕೇಸ್‌ ದಾಖಲಾಗಿರುವ ವಿಚಾರ ಬೆಳಕಿಗೆ ಬಂದಿದೆ.

                        

                          

                        

                          

 

`

Leave a Reply

Your email address will not be published. Required fields are marked *