Share this news

 

 

 

ಕಾರ್ಕಳ: ಕೇಂದ್ರ ಲೋಕಸೇವಾ ಆಯೋಗ ನಡೆಸುವ NDA&NA ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಒಂಬತ್ತು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಟಿ. ಪ್ರದೀಪ್, ಸಾಚಿ ಶಿವಕುಮಾರ್ ಕಡಿ., ಸಮೃದ್ದ್ ಕೆ., ಚೇತನ್ ಗೌಡ ಎನ್. ಎಸ್., ತ್ರಿಶ್ಲಾ ಗಾಂಧಿ, ತನಿಷಾ, ಸಂಗೀತಾ ಬಿ. ಎಮ್.,ಮೊನಿಷಾ ಡಿ. ಮತ್ತು ಅಭಿಷೇಕ್ ಜೊಯಲ್ ಜಿ. ಯು. ಎಪ್ರಿಲ್ 13ರಂದು ನಡೆದ ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದಲ್ಲಿ ನಡೆಯುವ ಸರ್ವಿಸ್ ಸೆಲೆಕ್ಷನ್ ಬೋರ್ಡ್(SSB) ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಪುಣೆಯ ಖಡಕ್ ವಾಸ್ಲಾದಲ್ಲಿರುವ NDA&NA ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ NDA&NA ಪರೀಕ್ಷೆ ಬಲು ಕಠಿಣ ಪರೀಕ್ಷೆ ಯಾಗಿದ್ದು ಪರೀಕ್ಷೆಗೆ ಕುಳಿತ 6 ಲಕ್ಷ ವಿದ್ಯಾರ್ಥಿಗಳಲ್ಲಿ 7800 ವಿದ್ಯಾರ್ಥಿ ಎಸ್. ಎಸ್. ಬಿ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

900 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ಬಹುದೊಡ್ಡ ಸವಾಲು. ಕ್ರಿಯೇಟಿವ್ ಸಂಸ್ಥೆಯ ನಿರಂತರ ಬೋಧನೆ ಹಾಗು NDA&NA ಗಾಗಿ ನಡೆಯುವ ವಿಶೇಷ ತರಬೇತಿ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ.

NDA&NA ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನುಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, NDA ಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ ಎಸ್ ಮತ್ತು ಶರತ್ ಅಭಿನಂದಿಸಿದ್ದಾರೆ.

 

 

 

 

 

 

 

 

 

 

Leave a Reply

Your email address will not be published. Required fields are marked *